ಆಯನೂರು ಅಪಘಾತ ಅಪ್‌ಡೇಟ್‌; ಓಮ್ನಿ ಕಾರು ಚಾಲಕನ ಕಾಲಿನ ಮೂಳೆ ಕಟ್‌

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಆಯನೂರು ಸಮೀಪ ಮಂಗಳವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ (head-on) ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಕಾಲಿನ ಮೂಳೆ ಕಟ್‌ ಆಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. 

ಘಟನೆಯ ಹಿನ್ನೆಲೆ

ಕೆಲಸದ ನಿಮಿತ್ತ ಸುಹೇಬ್ ಖಾನ್, ಜಾಫರ್ ಹಾಗೂ ಫರಾನ್ ಅವರು ಓಮಿನಿ ವ್ಯಾನ್‌ನಲ್ಲಿ ಶಿವಮೊಗ್ಗದಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತ್ತಿದ್ದರು. ಕ್ರೆಟಾ ಕಾರು ಆಯನೂರು ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತು. ಆಯನೂರು ಸಮೀಪದ ವೀರಗಾರನ ಬೈರನಕೊಪ್ಪ ಸೇತುವೆ ಬಳಿ ಮಂಗಳವಾರ ಸಂಜೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ.

Omni-Car-Incident-near-Ayanuru-in-Shimoga-taluk

Omni-Car-Incident-near-Ayanuru-in-Shimoga-taluk

ಅಪಘಾತಕ್ಕೆ ಕಾರಣವೇನು?

ಆಯನೂರು ಕಡೆಯಿಂದ ಅತಿ ವೇಗವಾಗಿ ಬಂದ ಕ್ರೆಟಾ ಕಾರು ಮುಂದಿನ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಓಮಿನಿ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓಮಿನಿ ಕಾರು ಒಂದು ಬದಿ ಸಂಪೂರ್ಣ ಜಖಂ ಆಗಿದೆ. ಕ್ರೆಟಾ ಕಾರು ರಸ್ತೆಯ ಪಕ್ಕದ ಜಮೀನನಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ನಿಂತಿತ್ತು.

ಇದನ್ನೂ ಓದಿ : ಬಾಗಿಲಿನ ಬೀಗ ಒಡೆದು ಹಣ ಕಳವು, ಮನೆಯಲ್ಲೆಲ್ಲ ಖಾರದ ಪುಡಿ ಎರಚಿದ ಕಳ್ಳರು

ಓಮ್ನಿ ಚಾಲಕನ ಕಾಲಿನ ಮೂಳೆ ಕಟ್

ಘಟನೆಯಲ್ಲಿ ಓಮ್ನಿ ಕಾರು ಚಾಲನೆ ಮಾಡುತ್ತಿದ್ದ ಸುಹೇಬ್ ಖಾನ್ ಅವರಿಗೆ ಗಂಭೀರ ಗಾಯವಾಗಿದೆ. ಅವರ ಬಲಗಾಲಿನ ಮೂಳೆ ಮುರಿದಿದೆ. ಓಮ್ನಿಯಲ್ಲಿದ್ದ ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು, ಕ್ರೆಟಾ ಕಾರಿನಲ್ಲಿದ್ದವರಿಗು ಸಣ್ಣಪುಟ್ಟ ಗಾಯವಾಗಿದೆ.

ಕ್ರೆಟಾ ಕಾರು ಚಾಲಕನ ವಿರುದ್ಧ ಕೇಸ್‌

ಕ್ರೆಟಾ ಕಾರು ಚಾಲಕ ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಓಮ್ನಿ ಕಾರು ಚಾಲಕ ಸುಹೇಬ್‌ ಖಾನ್‌ ನೀಡಿದ ದೂರಿನ ಹಿನ್ನೆಲೆ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ 

ಹೆಚ್ಚಿನ Shimoga News, Shivamogga News ಮತ್ತು SHIVAMOGGA ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 23, 2026

Leave a Comment