ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 19 SEPTEMBER 2024 : ರಸ್ತೆ ದಾಟುತ್ತಿದ್ದ ಹೆಬ್ಬಾವಿನ (Python) ಮೇಲೆ ವಾಹನ ಹರಿದು ಗಂಭೀರ ಗಾಯಗೊಂಡಿದೆ. ಗ್ರಾಮಸ್ಥರು ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಒಪ್ಪಿಸಿದ್ದಾರೆ. ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಹೆಬ್ಬಾವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹಣಗೆರೆ ರಸ್ತೆಯ ಖಾಸಗಿ ಶಾಲೆ ಬಳಿ ವಾಹನ ಹರಿದು ಹೆಬ್ಬಾವು ಗಾಯಗೊಂಡಿತ್ತು. ರಸ್ತೆ ದಾಟುವಾಗ ವಾಹನವೊಂದು ತಲೆ ಮೇಲೆ ಹರಿದು ಹಾವು ಗಾಯಗೊಂಡಿತ್ತು. ರಸ್ತೆ ಪಕ್ಕದ ಗಿಡಗಂಟಿ ಮಧ್ಯೆ ಒದ್ದಾಡುತ್ತಿತ್ತು.
ಇದನ್ನು ಗಮನಿಸಿದ ಆಯನೂರಿನ ಅರ್ಜುನ್, ಅದರ್ಶ, ಶರತ್, ಮಂಜುನಾಥ, ಆಕಾಶ್ ಎಂಬುವವರು ಉರಗ ರಕ್ಷಕ ಅಮಿತ್ಗೆ ಕರೆ ಮಾಡಿ ಹಾವನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಹೆಬ್ಬಾವಿಗೆ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಆರೈಕೆ ಮಾಡಲಾಗುತ್ತಿದೆ.


ಇದನ್ನೂ ಓದಿ » ತೆರಿಗೆ ಇಲಾಖೆಗೆ ಹೋಗಿದ್ದ ಶಿವಮೊಗ್ಗದ ಮಹಿಳಾ ಉದ್ಯಮಿಗೆ ಕಾದಿತ್ತು ಆಘಾತ
LATEST NEWS
- ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

- ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು















