ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಅಕ್ಟೋಬರ್ 2020
ಕರೊನಾ ನಿರ್ವಹಣೆಯ ಆರಂಭದಿಂದಲೂ ತಾಲೂಕು ಆಡಳಿತ ವಿಫಲವಾಗಿದೆ. ಕರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಚಾಲಕನಿಗೆ ಎರಡೂವರೆ ಸಾವಿರ ರೂ. ನೀಡಬೇಕೆಂಬ ವಿಷಯದ ತಾಲೂಕಿನಲ್ಲಿ ಹರಿದಾಡುತ್ತಿದೆ ಎಂದು ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜಿ.ಶ್ರೀಧರ್ ದೂರಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕರೋನ ನಿರ್ವಹಣೆಯಲ್ಲಿ ತಾಲೂಕು ಆಡಳಿತದ ವೈಫಲ್ಯದ ಕುರಿತು ಸದಸ್ಯರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಕರೋನ ನಿರ್ವಹಣೆ ವೈಫಲ್ಯದ ಕುರಿತು ಅನೇಕ ಸದಸ್ಯರು ದನಿಗೂಡಿಸಿದರು. ಆಯನೂರು ಕ್ಷೇತ್ರದ ಸದಸ್ಯೆ ಶಕುಂತಲಾ ಮಹೇಶ್ವರಪ್ಪ ಮಾತನಾಡಿ, ನನ್ನ ಪತಿ ಕರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ರಕ್ತದೊತ್ತಡ, ಮಧುಮೇಹ ಯಾವುದನ್ನೂ ಪರೀಕ್ಷಿಸುವುದಿಲ್ಲ. ಕೆಲ ದಿನ ಸಂಜೆ ಕಾಫಿ, ಟೀ ಕೂಡಾ ನೀಡಿಲ್ಲ ಎಂದು ನನ್ನ ಪತಿ ಹೇಳಿದ್ದರು ಎಂದು ಕರೊನಾ ಆಸ್ಪತ್ರೆಯ ಲೋಪಗಳನ್ನು ವಿವರಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿಪಡಿಸಿದಷ್ಟು ಹಾಸಿಗೆಗಳನ್ನು ಕರೊನಾ ಸೋಂಕಿತರಿಗೆ ಮೀಸಲಿಟ್ಟಿಲ್ಲ. ಸರಿಯಾದ ಚಿಕಿತ್ಸೆಯೂ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಾಪಂ ಇಒ ಡಾ.ಎಸ್.ಕಲ್ಲಪ್ಪ ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಅವರು ಸಭೆಗೆ ಆಗಮಿಸಿದೇ ಇದ್ದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕರೊನಾ ಸಂದರ್ಭದಲ್ಲಿ ಅನೇಕ ವಿಚಾರಗಳ ಮಾಹಿತಿ ಪಡೆಯಬೇಕಿತ್ತು. ಆಸ್ಪತ್ರೆಗಳ ಬಗ್ಗೆ ಚರ್ಚಿಸುವ ಅವಶ್ಯಕತೆಯಿತ್ತು. ಇಂತಹ ಮಹತ್ವದ ಸಭೆಗೆ ಅವರು ಬಾರದೇ ಇರುವುದು ದುರದೃಷ್ಟಕರ. ಮಧ್ಯಾಹ್ನದ ಬಳಿಕವಾದರೂ ಅವರನ್ನು ಸಭೆಗೆ ಕರೆಸಲೇ ಬೇಕು ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು.
ಅಧ್ಯಕ್ಷೆ ಗೀತಾ ಜಯಶೇಖರ್, ಉಪಾಧ್ಯಕ್ಷೆ ನಿರ್ಮಲಾ ಮೋಹನ್‌ಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜಿ.ಶ್ರೀಧರ್, ತಾಪಂ ಇಒ ಡಾ.ಎಸ್.ಕಲ್ಲಪ್ಪ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]