ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 6 JUNE 2023
SHIMOGA : ಆಯನೂರಿನ ಬಾರ್ ಕ್ಯಾಶಿಯರ್ ಸಚಿನ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ (Arrest). ಪ್ರಮುಖ ಆರೋಪಿ ಸತೀಶ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯು ಸಮೀಪದ ಕಾಡಿನಲ್ಲಿ ಅವಿತುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆಯೆ ದಾಳಿ ನಡೆಸಿದ್ದ.
ಮೂವರು ಆರೋಪಿಗಳು ಅರೆಸ್ಟ್
ಬಾರ್ ಕ್ಯಾಶಿಯರ್ ಸಚಿನ್ (27) ಹತ್ಯೆ ಪ್ರಕರಣದ ಆರೋಪಿಗಳಾದ ಸತೀಶ್, ಅಶೋಕ್ ಮತ್ತು ನಿರಂಜನ್ ಎಂಬುವವರನ್ನು ಬಂಧಿಸಲಾಗಿದೆ (Arrest). ಇವರೆಲ್ಲ ಆಯನೂರು ಕೋಟೆ ತಾಂಡದವರು. ಘಟನೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಅಶೋಕ್ ಮತ್ತು ನಿರಂಜನ್ ಮೊದಲು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸತೀಶ್ ಮಾತ್ರ ಪ್ರತ್ಯೇಕವಾಗಿದ್ದ.
ಗಾಳಿಯಲ್ಲಿ ಒಂದು, ಕಾಲಿಗೆ ಒಂದು ಗುಂಡು
ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸತೀಶ್ ಅಡಗಿರುವುದು ಗೊತ್ತಾಗುತ್ತಿದ್ದಂತೆ ಪಿಎಸ್‌ಐ ರಾಜುರೆಡ್ಡಿ, ಸಿಬ್ಬಂದಿ ಶಿವರಾಜ್ ಮತ್ತು ಪ್ರವೀಣ್ ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಶಿವರಾಜ್ ಮತ್ತು ಪ್ರವೀಣ್ ಮೇಲೆ ಸತೀಶ್ ಹಲ್ಲೆ ನಡೆಸಿದ್ದಾನೆ. ಇಬ್ಬರನ್ನು ತಳ್ಳಿ ಪಿಎಸ್‌ಐ ರಾಜುರೆಡ್ಡಿ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ.
ಸಿಬ್ಬಂದಿಗೆ ಉತ್ತಮ ಚಿಕಿತ್ಸೆ
ಇನ್ನು, ಪೊಲೀಸ್ ಸಿಬ್ಬಂದಿಗೆ ಗಾಯವಾಗಿರುವ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಗಾಯಾಳು ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿಆಯನೂರಿನ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಜೂನ್ 4ರ ರಾತ್ರಿ ಕ್ಯಾಶಿಯರ್ ಸಚಿನ್ ಎದೆಗೆ ಚಾಕು ಚುಚ್ಚಿ ಹತ್ಯೆ ಮಾಡಲಾಗಿತ್ತು. ಮದ್ಯ ಸೇವನೆ ಮಾಡುತ್ತಿದ್ದ ಮೂವರಿಗೆ, ಬಾರ್ ಬಂದ್ ಮಾಡುವ ಸಮಯವಾಗಿದೆ ಹೊರಡಿ ಎಂದಿದ್ದಕ್ಕೆ ಜಗಳ ತೆಗೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ಸಿಬ್ಬಂದಿ ಎದುರಲ್ಲೆ ಘಟನೆ ಸಂಭವಿಸಿತ್ತು. ಇದು ತೀವ್ರ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ – ಆಯನೂರಿನಲ್ಲಿ ಮಧ್ಯರಾತ್ರಿ ಕೊಲೆ, ಎದೆಗೆ ಡ್ರ್ಯಾಗರ್ ಚುಚ್ಚಿ ವ್ಯಕ್ತಿ ಹತ್ಯೆ, ಕಾರಣವೇನು? ಹೇಗಾಯ್ತು ಘಟನೆ?
ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422