ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | RATHA | 4 ಜೂನ್ 2022
ಸೊರಬ ತಾಲೂಕು ಲಕ್ಕವಳ್ಳಿಯ ಗ್ರಾಮ ದೇವತೆ ಗಾಳ್ಯಮ್ಮದೇವಿಗೆ ನೂತನ ತೇರನ್ನು ನಿರ್ಮಿಸಲಾಗಿದೆ. ಕಲಾವಿದ ಸೂರಜ್ ಗುಡಿಗಾರ್ ಅವರು ರಥವನ್ನು ಗ್ರಾಮ ಸಮಿತಿಗೆ ಹಸ್ತಾಂತರ ಮಾಡಿದರು.
ಆರು ತಿಂಗಳ ಅವಧಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ರಥವನ್ನು ನಿರ್ಮಾಣ ಮಾಡಲಾಗಿದೆ. ಕಲಾವಿದ ಸೂರಜ್ ಗುಡಿಗರ್ ಅವರ ಕಾರ್ಯಕ್ಕೆ ಲಕ್ಕವಳ್ಳಿ ಜನರು ಮತ್ತು ಗಾಳ್ಯಮ್ಮ ದೇವಿಯ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದ್ದು, ರಥೋತ್ಸವ ನೆರವೇರಲಿದೆ. ಮುಂದಿನ ವರ್ಷ ಗಾಳ್ಯಮ್ಮ ದೇವಿ ಜಾತ್ರೆ ನಡೆಯಲಿದೆ. ಈ ಭಾರಿ ಹೊಸ ತೇರಿನಲ್ಲಿ ರಥೋತ್ಸವ ನೆರವೇರಿಸಲು ನಿರ್ಧರಿಸಲಾಗಿದೆ.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಲಿಂಗಪ್ಪ, ಗ್ರಾಮ ಸಮಿತಿ ಅಧ್ಯಕ್ಷ ರಾಜೇಂದ್ರಗೌಡ, ಉಪಾಧ್ಯಕ್ಷ ಬಸವರಾಜಪ್ಪ ಕೆಂಡರ್, ಕಾರ್ಯದರ್ಶಿ ವಿಶ್ವನಾಥ್, ರವಿ ಗುಡಿಗಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ – ಅಡಕೆ ಧಾರಣೆ | 3 ಜೂನ್ 2022 | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಧಾರಣೆ?
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422