ಮಂಗಳದ ಪಾರಂಪರಿಕ ನಾಟಿ ವೈದ್ಯ ಶಿವಣ್ಣಗೌಡ ನಿಧನ, ಇಲ್ಲಿದೆ ಅವರ ಕುರಿತ 4 ಪ್ರಮುಖಾಂಶ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS, 7 FEBRUARY 2025

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ತೀರ್ಥಹಳ್ಳಿ : ಪಾರಂಪರಿಕ ನಾಟಿ ಔಷಧ ವೈದ್ಯ (Healer) ಇಲ್ಲಿನ ಮಂಗಳ ಗ್ರಾಮದ ಎಂ.ಬಿ.ಶಿವಣ್ಣಗೌಡ (88) ಗುರುವಾರ ಬೆಳಗ್ಗೆ ನಿಧನರಾದರು. ಕಳೆದ 5 ದಶಕದಿಂದ ಕೋಣಂದೂರು ಸಮೀಪದ ಮಂಗಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಗುರುವಾರ ಸಂಜೆ ಮಂಗಳ ಗ್ರಾಮದಲ್ಲಿ ಶಿವಣ್ಣಗೌಡ ಅವರ ಅಂತ್ಯಕ್ರಿಯೆ ನೆರವೇರಿತು.

ಶಿವಣ್ಣಗೌಡ ಕುರಿತು ಇಲ್ಲಿದೆ ಪ್ರಮುಖಾಂಶ

ಮಾಹಿತಿ : ಹೊಸಕೊಪ್ಪ ಶಿವು, ಪತ್ರಕರ್ತ

#f1f1f1 - POINT 1ಶಿವಣ್ಣಗೌಡ ಶಾಲೆ, ಕಾಲೇಜಿಗೆ ಹೋದವರಲ್ಲ. ತಂದೆ ಬೆನವಯ್ಯಗೌಡ ಅವರೊಂದಿಗೆ ನಾಟಿ ವಿದ್ಯೆ ಕಲಿತಿದ್ದರು. ಕಳೆದ 5 ದಶಕಕ್ಕು ಹೆಚ್ಚು ಕಾಲದಿಂದ ಹಲವು ಬಗೆಯ ಕಾಯಿಲೆಗಳಿಗೆ ನಾಟಿ ಔಷಧದ ಮೂಲಕ ಚಿಕಿತ್ಸೆ ನೀಡುತ್ತಿದ್ದರು. ಜಾನುವಾರುಗಳಿಗು ಶಿವಣ್ಣಗೌಡ ಅವರು ಚಿಕಿತ್ಸೆ ನೀಡುತ್ತಿದ್ದರು.

Thirthahalli-mangala-doctor-shivannagowda-photo. Traditional healer

#f1f1f1 - POINT 2ಶಿವಣ್ಣಗೌಡ ಅವರು ತೀರ್ಥಹಳ್ಳಿ, ಮಂಡಗದ್ದೆ, ಹೆದ್ದಾರಿಪುರದ ಕಲ್ಲೂರು ಸೇರಿದಂತೆ ಸುತ್ತಮುತ್ತಲ ಊರುಗಳಿಂದ ಗಿಡ ಮೂಲಿಕೆಗಳನ್ನು ಸಂಗ್ರಹಿಸಿ ತಂದು ಔಷಧ ಸಿದ್ದಪಡಿಸುತ್ತಿದ್ದರು. ಮಂಗಳದ ಔಷಧಿ ಜನಜನಿತವಾಗಿತ್ತು. ಇಲ್ಲಿ ಸಿಗುತ್ತಿದ್ದ ಎಣ್ಣೆ, ನೋವು ನಿವಾರಕ ಶಕ್ತಿ ಹೊಂದಿತ್ತು. ಸೊಪ್ಪು, ಬೇರು, ಕಾಳು, ಕಡ್ಡಿ ಬೆರೆಸಿ ಎಣ್ಣೆ ಸಿದ್ಧಪಡಿಸುತ್ತಿದ್ದರು.

Thirthahalli-mangala-doctor-shivannagowda-photo. healer

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರಿಗೆ ಕಾಲು ನೋವಿಗೆ ಚಿಕಿತ್ಸೆ. ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಭುಜದ ನೋವಿಗೆ ಚಿಕಿತ್ಸೆ. ಶಿವಣ್ಣಗೌಡ ಅವರ ಪುತ್ರ ಶ್ರೀಕಾಂತ್‌ ಫೋಟೊದಲ್ಲಿದ್ದಾರೆ.

#f1f1f1 - POINT 3ಮೂಳೆ ಮುರಿತ, ವಾತಕಸ, ಮೆದುಳು ಸಂಬಂಧ ನಿಶಕ್ತಿ, ಪಕ್ಕೆಲುಬು ಸಂಬಂಧ ಕಾಯಿಲೆ, ಬೆನ್ನು ನೋವುಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ದನಕರುಗಳ ಕಾಲು ಮುರಿತ, ಹೊಟ್ಟೆ ಹುಳು, ದೇಹದ ಭಾಗಗಳಲ್ಲಿ ಕಾಣಿಸುತ್ತಿದ್ದ ಹುಳುಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು.

Thirthahalli-mangala-doctor-shivannagowda-photo.

ಮಂಗಳ ಗ್ರಾಮದಲ್ಲಿ ಶಿವಣ್ಣಗೌಡ ಅವರಿಂದ ಚಿಕಿತ್ಸೆಗೆ ಬಂದಿದ್ದ ಜನರು.

#f1f1f1 - POINT 4ಮಂಗಳದ ಶಿವಣ್ಣಗೌಡ ಅವರ ಬಳಿ ಚಿಕಿತ್ಸೆಗೆ ರಾಜ್ಯ, ಹೊರ ರಾಜ್ಯದಿಂದ ಜನ ಬರುತ್ತಿದ್ದರು. ಭಾನುವಾರ ಅತಿ ಹೆಚ್ಚು ಸಂಖ್ಯೆಯ ಜನರು ಬರುತ್ತಿದ್ದರು. ಸಚಿವರು, ಶಾಸಕರು, ಸೆಲೆಬ್ರಿಟಿಗಳೆಲ್ಲ ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಾಜಿ ಸಚಿವೆ ಮನೋರಮಾ ಮಧ್ವರಾಜ್‌, ಪತ್ರಕರ್ತೆ ಗೌರಿ ಲಂಕೇಶ್‌, ಸಾಹಿತಿ ಚಂದ್ರಶೇಖರ ಕಂಬಾರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರು ಇಲ್ಲಿ ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಇವರ ಸೇವೆಗೆ ಕರ್ನಾಟಕ ಪಾರಂಪಾರಿಕ ಜನಪದ ವೈದ್ಯ ಪರಿಷತ್‌ ‘ಜನಪದ ವೈದ್ಯ ರತ್ನ’ ಪ್ರಶಸ್ತಿ ನೀಡಿ ಗೌರವಸಿತ್ತು.

Thirthahalli-mangala-doctor-shivannagowda-photo.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಚಿಕಿತ್ಸೆ ನೀಡಿದ್ದ ಶಿವಣ್ಣಗೌಡ

ಶಿವಣ್ಣಗೌಡ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರಿಗೆ ಚಿಕಿತ್ಸೆ ನೀಡಿದ್ದರು. ಹಲವು ಪ್ರಶಸ್ತಿಗಳನ್ನು ಕೂಡ ಗಳಿಸಿದ್ದರು. ಅವರ ಔಷಧ ಪದ್ಧತಿ ಮನುಷ್ಯನ ದೇಹಕ್ಕೆ ಯಾವುದೇ ಹಾನಿ ಮಾಡದೇ ಗುಣ ಮಾಡತ್ತಿತ್ತು. ವಿಜ್ಞಾನ, ಆಧುನಿಕ ವೈದ್ಯ ಪದ್ಧತಿಗೆ ಸವಾಲಾಗುವಂತಿತ್ತು. ಪ್ರಸಿದ್ಧ ನಾಟಿ ವೈದ್ಯರಾಗಿ ರಾಜ್ಯದ ಲಕ್ಷಾಂತರ ಜನರ ಮೂಳೆ ಸಂಬಂಧಿತ ಕಾಯಿಲೆಗಳಿಗೆ ಸಂಜೀವಿನಿಯಾಗಿತ್ತು.  

ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ

ಇದನ್ನೂ ಓದಿ » ಶಿವಮೊಗ್ಗದಲ್ಲಿ ಕಂಬಳ, ಟ್ರ್ಯಾಕ್‌ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಯಾವಾಗ? ಎಲ್ಲಿ ನಡೆಯುತ್ತೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment