ಶಿವಮೊಗ್ಗ ಲೈವ್.ಕಾಂ | THIRTHAHALLI | 7 ನವೆಂಬರ್ 2019
ತೀರ್ಥಹಳ್ಳಿ ತಾಲೂಕು ನೆರಳೂರು ಗ್ರಾಮಲೆಕ್ಕಿಗ ಯಶವಂತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಗ್ರಾಮ ಸಹಾಯಕ ಅವಿನಾಶ್ ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಶಿವಮೊಗ್ಗ ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಪ್ರಮುಖರು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಅವರಿಗೆ ಮನವಿ ಸಲ್ಲಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗ್ರಾಮಲೆಕ್ಕಿಗ ಯಶವಂತ್ ಕಚೇರಿಯ ಕೆಲಸ ನಿರ್ವಹಿಸಲು ಗ್ರಾಮ ಸಹಾಯಕ ಅವಿನಾಶ್‌ಗೆ ಸೂಚಿಸಿದ್ದರು. ಇದೇ ಕಾರಣಕ್ಕೆ ಏಕಾಏಕಿ ಯಶವಂತ್ ಮೇಲೆ ಅವಿನಾಶ್ ಹಲ್ಲೆ ನಡೆಸಿದ್ದಾರೆ.
ಈ ಘಟನೆಗೆ ಕಾರಣರಾದ ಅವಿನಾಶ್ ವಿರುದ್ದ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಶಿವಮೊಗ್ಗ ತಾಲೂಕು ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಯೋಗೇಶ್ ನಾಯ್ಕ್, ಗೌರವಾಧ್ಯಕ್ಷ ಹರ್ಷವರ್ಧನ್, ಕಾರ್ಯದರ್ಶಿ ಹಾಲೇಶಪ್ಪ, ಉಪಾಧ್ಯಕ್ಷ ಬಸವರಾಜ್ ಇತರರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]