ಶಿವಮೊಗ್ಗ ಲೈವ್.ಕಾಂ | SHIMOGA NEWS | 15 MARCH 2021
ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಮೂರು ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಹುಮಾನಕ್ಕೆ ಮೊಬೈಲ್ ನಂಬರ್ ಆಯ್ಕೆಯಾಗಿದೆ ಎಂದು ಪತ್ರ ಕಳುಹಿಸಿ, ವಂಚಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ | ಕೌನ್ ಬನೇಗಾ ಕರೋಡ್‌ಪತಿ ಹೆಸರಲ್ಲಿ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ 1.43 ಲಕ್ಷ ರೂ. ವಂಚನೆ, ವಂಚಿಸಿದ್ದು ಹೇಗೆ?
ಶಿವಮೊಗ್ಗದ ವನಿತಾ (29) ಎಂಬುವವರನ್ನು ವಂಚಿಸಲಾಗಿದೆ. ದೆಹಲಿಯ ನಾಪ್ಟಾಲ್ ಆನ್‍ಲೈನ್ ಶಾಪಿಂಗ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ವನಿತಾ ಅವರಿಗೆ ಬಹುಮಾನ ಬಂದಿದೆ ಎಂದು ಪತ್ರ ಕಳುಹಿಸಲಾಗಿತ್ತು. 12.50 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿದ್ದೀರ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಇದನ್ನು ನಂಬಿದ ವನಿತಾ, ಪತ್ರದಲ್ಲಿ ಇದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದ್ದರು.
ಇದನ್ನೂ ಓದಿ | ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಳ ಮಾಡ್ತೀವಿ ಅಂತಾ ಭದ್ರಾವತಿಯ ಮಹಿಳೆಗೆ 1.10 ಲಕ್ಷ ರೂ. ವಂಚನೆ, ಹೇಗಾಯ್ತು?
12.50 ಲಕ್ಷ ರೂ. ಬಹುಮಾನ ನೀಡಲು ಕೆಲವು ಚಾರ್ಜಸ್‍ಗಳಿವೆ, ಎನ್‍ಒಸಿ ಬೇಕಿದೆ ಎಂದು ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿದ ವನಿತಾ, ಹಂತ ಹಂತವಾಗಿ ಮೂರು ಲಕ್ಷ ರೂ. ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ, ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಚ್ಚರ ವಹಿಸಿ
ಬಹುಮಾನದ ಆಸೆ ಹುಟ್ಟಿಸಿ ಹಣ ಪಡೆದುಕೊಂಡು ವಂಚಿಸುವ ದೊಡ್ಡ ಜಾಲವೇ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ, ಸೈಬರ್ ತಜ್ಞರು ಜಾಗೃತಿ ಮೂಡಿಸುತ್ತಿದ್ದಾರೆ. ಅಧಿಕೃತ ಸಂಸ್ಥೆಗಳಾದರೆ, ಬಹುಮಾನ ಬಂದಿದ್ದರೆ ಮಾಹಿತಿ ನೀಡಿ, ಬಹುಮಾನವನ್ನು ವಿತರಿಸುತ್ತವೆ. ಬಹುಮಾನಕ್ಕಾಗಿ ಚಾರ್ಜ್ ಎಂದು ಹಣ ಪಡೆಯುವುದಿಲ್ಲ. ಇಂತಹ ವಂಚಕರ ಜಾಲಕ್ಕೆ ಬೀಳದಂತೆ ಎಚ್ಚರ ವಹಿಸಬೇಕಿದೆ.
ಇದನ್ನೂ ಓದಿ | ಸರ್ಕಾರಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಭದ್ರಾವತಿಯ ವ್ಯಕ್ತಿಗೆ ಒಂದು ಲಕ್ಷ ರೂ. ವಂಚನೆ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]