ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 25 MARCH 2021
ಶಿವಮೊಗ್ಗ ಮೆಡಿಕಲ್ ಕಾಲೇಜು (ಸಿಮ್ಸ್) ನಿರ್ದೇಶಕ ಡಾ. ಸಿದ್ದಪ್ಪ ಅವರ ನೇಮಕಾತಿ ಕಾನೂನು ಬಾಹಿರವಾಗಿದೆ. ಹಾಗಾಗಿ ಅವರ ನೇಮಕಾತಿಯನ್ನು ಕೂಡಲೆ ರದ್ದುಗೊಳಿಸಬೇಕು. ಇನ್ನು, ಅವರ ಅವಧಿಯಲ್ಲಿ ನಡೆದ ಹಗರಣಗಳ ಕುರಿತು ತನಿಕೆ ನಡೆಸಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನಕುಮಾರ್, ವೈದ್ಯಕೀಯ ಕಾಲೇಜುಗಳ ಬೈಲಾ ನಿಯಮಗಳ ಪ್ರಕಾರ ಡಾ.ಸಿದ್ದಪ್ಪ ಅವರ ನೇಮಕಾತಿಯೇ ತಪ್ಪಾಗಿದೆ. 58 ವರ್ಷ ಮೀರಿದವರನ್ನು ನಿರ್ದೇಶಕರ ಸ್ಥಾನಕ್ಕೆ ನೇಮಿಸುವಂತಿಲ್ಲ. ಆದರೆ ಡಾ. ಸಿದ್ದಪ್ಪ ಅವರಿಗೆ ಈಗ 68 ವರ್ಷವಾಗಿದೆ. 10 ವರ್ಷ ವ್ಯತ್ಯಾಸ ಇರುವವರನ್ನು ಸಿಮ್ಸ್ಗೆ ತಂದು ಕೂರಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
120 ಕೋಟಿ ರೂ. ಚೆಕ್ಗಳು
ಡಾ. ಸಿದ್ದಪ್ಪ ಅವರು ಅಧಿಕಾರ ವಹಿಸಿಕೊಂಡು 10 ತಿಂಗಳಾಗಿದೆ. ಈ ವೇಳೆಯಲ್ಲಿ 120 ಕೋಟಿ ರೂ. ಮೊತ್ತದ ಚೆಕ್ಗಳಿಗೆ ಸಹಿ ಹಾಕಿದ್ದಾರೆ. ಇಷ್ಟೊಂದು ಮೊತ್ತದ ಚೆಕ್ಗೆ ಅವರು ಸಹಿ ಹಾಕಲು ಬರುವುದಿಲ್ಲ. ಇದರ ಕುರಿತು ತನಿಕೆ ನಡಸಬೇಕು ಎಂದು ಪ್ರಸನ್ನ ಕುಮಾರ್ ಅವರು ಆಗ್ರಹಿಸಿದರು.
ಮಾಸ್ಕ್, ಪಿಪಿಇ ಕಿಟ್, ಕಾಟ್ನಲ್ಲಿ ಹಗರಣ
ಸಿಮ್ಸ್ ಕಾಲೇಜಿನ ಪ್ರತಿ ಖರೀದಿಯಲ್ಲೂ ಹಗರಣ ನಡೆದಿರುವ ಸಂಶಯವಿದೆ. 400 ರೂ. ಪಿಪಿಇ ಕಿಟ್ಗಳನ್ನು 2100 ರೂ.ಗೆ ಖರೀದಿ ಮಾಡಲಾಗಿದೆ. 58 ರೂ. ಬೆಲೆಯ ಎನ್-95 ಮಾಸ್ಕ್ಗಳಿಗೆ 128 ರೂ.ಗೆ ಖರೀದಿಸಲಾಗಿದೆ. ವೈದ್ಯಕೀಯ ಉಪಕರಣ, ಔಷಧ ಖರೀದಿ, ಕಟ್ಟಡಗಳ ನಿರ್ಮಾಣದಲ್ಲೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಪ್ರಸನ್ನಕುಮಾರ್ ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಶಿವಾನಂದ, ಪ್ರವೀಣ್ ಕುಮಾರ್, ದೀಪಕ್ ಸಿಂಗ್, ಕೆ.ರಂಗನಾಥ್, ರಘು, ಆಸೀಫ್, ಪುಷ್ಪಲತಾ, ಮಂಜುನಾಥ, ಲಕ್ಷ್ಮಣ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]