ಶಿವಮೊಗ್ಗ ಲೈವ್.ಕಾಂ | SHIMOGA | 17 ಏಪ್ರಿಲ್ 2020
ಜಿಲ್ಲೆಯ ವಿವಿಧೆಡೆ ಲಾಕ್‍ಡೌನ್ ಪರಿಸ್ಥಿತಿ ಪರಿಶೀಲನೆಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರೌಂಡ್ಸ್ ಆರಂಭಿಸಿದ್ದಾರೆ. ವಿವಿಧೆಡೆಗೆ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಭದ್ರಾವತಿಗೆ ಡಿಸಿ ವಿಸಿಟ್
ಜಿಲ್ಲಾಧಿಕಾರಿ ಅವರು ಗುರುವಾರ ಭದ್ರಾವತಿ ಪಟ್ಟಣಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಲಾಕ್‍ಡೌನ್ ಪರಿಸ್ಥಿತಿಯ ಅವಲೋಕನ ನಡೆಸಿದರು. ಈ ವೇಳೆ ಜನ ಸಂಚಾರ ಕಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿವಿಧೆಡೆ ಚೆಕ್‍ಪೋಸ್ಟ್‍ನಲ್ಲಿದ್ದ ಪೊಲೀಸ್ ಸಿಬ್ಬಂದಿಗಳ ಜೊತೆಗೂ ಜಿಲ್ಲಾಧಿಕಾರಿ ಅವರು ಚರ್ಚೆ ನಡೆಸಿದರು. ಕೆಲವು ಸಲಹೆ ನೀಡಿದರು. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ.
ವಿನೋಬನಗರದಲ್ಲಿ ಜನರಿಗೆ ಕ್ಲಾಸ್
ವಿನೋಬನಗರದ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿದ ವೇಳೆ, ಹಲವರು ವಾಹನದಲ್ಲಿ ಸಂಚರಿಸುತ್ತಿದ್ದವರನ್ನು ಗಮನಸಿ, ತಡೆದು ಜಿಲ್ಲಾಧಿಕಾರಿ ಅವರೆ ಪ್ರಶ್ನೆ ಮಾಡಿದರು. ಈ ವೇಳೆ ಆಸ್ಪತ್ರೆ, ಮೆಡಿಕಲ್ ಶಾಪ್, ಅಗತ್ಯ ವಸ್ತು ಖರೀದಿ ಅಂತಾ ಜನರು ಸಬೂಬು ಹೇಳಿದರು. ಹಾಗಾಗಿ ಮನೆಯಿಂದ ಹೊರಬಂದವರಿಗೆ ಲಾಕ್‍ಡೌನ್ ಕುರಿತು ತಿಳಿ ಹೇಳಿದರು.
ಎಳನೀರು ವ್ಯಾಪಾರಿಗೆ ಎಚ್ಚರಿಕೆ ಪಾಠ
ಇವತ್ತು ಶಿವಮೊಗ್ಗ ನಗರದ ವಿವಿಧೆಡೆ ಜಿಲ್ಲಾಧಿಕಾರಿ ಅವರು ಸಂಚಾರ ನಡೆಸಿದರು. ಈ ವೇಳೆ ಸೋಮಿನಕೊಪ್ಪ ಬಳಿ ಎಳನೀರು ಗಾಡಿ ಮುಂದೆ ಜನರು ನಿಂತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಶಿವಕುಮಾರ್, ವ್ಯಾಪಾರಿಯನ್ನು ಕರೆಯಿಸಿ ಲಾಕ್‍ಡೌನ್ ಕುರಿತು ತಿಳಿಸಿದರು. ಅಲ್ಲದೆ, ಇನ್ಮುಂದೆ ಎಳನೀರು ಕತ್ತರಿಸಿ ಪಾರ್ಸಲ್ ಕಳುಹಿಸಬೇಕು. ಅಲ್ಲಿಯೇ ಕುಡಿಯಲು ಅವಕಾಶ ಕೊಡಬಾರದು ಎಂದು ಸೂಚಿಸಿದ್ದಾರೆ. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ.
ರಿಪ್ಪನ್‍ಪೇಟೆಗೆ ಡಿಸಿ ಭೇಟಿ
ರಿಪ್ಪನ್‍ಪೇಟೆಗೆ ತೆರಳಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು, ವಿವಿಧೆಡೆ ಪರಿಶೀಲನೆ ನಡೆಸಿದರು. ಆನಂದಪುರದ ಹಲವು ಕಡೆಗು ಜಿಲ್ಲಾಧಿಕಾರಿ ಅವರು ಭೇಟಿ ನೀಡಿದರು
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]