ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜೂನ್ 2020
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ಇವತ್ತು ಏಳು ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿಗೆಲ್ಲ ಸೋಂಕು ತಗುಲಿದೆ?
ಪಿ7265 – 19 ವರ್ಷದ ಪುರುಷ
ಪಿ7266 – 25 ವರ್ಷದ ಮಹಿಳೆ
ಪಿ7267 – 63 ವರ್ಷದ ಪುರುಷ
ಪಿ7268 – 3 ವರ್ಷದ ಗಂಡು ಮಗು
ಪಿ7269 – 28 ವರ್ಷದ ಪುರುಷ
ಪಿ7270 – 78 ವರ್ಷದ ಮಹಿಳೆ
ಪಿ7271 – 80 ವರ್ಷದ ಪುರುಷ
ಐದು ಜನರಿಗೆ ಮಹಾರಾಷ್ಟ್ರ ಲಿಂಕ್
ಇವತ್ತು ಸೋಂಕು ತಗುಲಿರುವ ಏಳು ಮಂದಿಯ ಪೈಕಿ ಐವರಿಗೆ ಮಹಾರಾಷ್ಟ್ರದ ಲಿಂಕ್ ಇದೆ. ಪಿ7265, ಪಿ7266, ಪಿ7267, ಪಿ7268, ಪಿ7269 ಅವರು ಮಹಾರಾಷ್ಟ್ರದಿಂದ ಹಿಂತಿರುಗಿದ್ದಾರೆ. ಇವರಿಗೆ ಸೋಂಕು ತಗುಲಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಪಿ6149 ಕಡೆಯಿಂದ ಇಬ್ಬರಿಗೆ ಕರೋನ
ಪಿ6149 ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರಿಗೆ ಕರೋನ ಸೋಂಕು ತಗುಲಿದೆ. ಇವರಿಗೆ 78 ವರ್ಷದ ಮಹಿಳೆ ಮತ್ತು 80 ವರ್ಷದ ಪುರುಷರೊಬ್ಬರಿಗೆ ಸೋಂಕು ತಗುಲಿದೆ. ಜೂನ್ 11ರಂದು ಪಿ6149ಗೆ ಸೋಂಕು ತಗುಲಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿತ್ತು.
ಶತಕ ದಾಟಿದ ಕರೋನ
ಶಿವಮೊಗ್ಗದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ನೂರಕ್ಕಿಂತಲೂ ಹೆಚ್ಚಾಗಿದೆ. ಇವತ್ತಿನ ಏಳು ಪ್ರಕರಣ ಸೇರಿ ಶಿವಮೊಗ್ಗದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಈವರೆಗೂ 54 ಮಂದಿ ಗುಣವಾಗಿದ್ದು, 47 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಐಸಿಯುನಲ್ಲಿ ಮೂವರು
ಚಿಕಿತ್ಸೆ ಪಡೆಯುತ್ತಿರುವ 47 ಮಂದಿ ಕರೋನ ಸೋಂಕಿತರ ಪೈಕಿ, ಮೂವರಿಗೆ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]