ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | RIPPONPETE NEWS | 20 ಜೂನ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಂಗಡಿಗಳಿಗೆ ಜೂಸ್ ಕಬ್ಬು ಸರಬರಾಜು ಮಾಡುತ್ತಿದ್ದ ವ್ಯಾಪಾರಿಯೊಬ್ಬರಿಗೆ ಕರೋನ ಸೋಂಕು ಕಾಣಿಸಿಕೊಂಡಿದ್ದು, ರಿಪ್ಪನ್‌ಪೇಟೆಯಾದ್ಯಂತ ಆತಂಕ ಸೃಷ್ಟಿಯಾಗಿದೆ. ವ್ಯಾಪಾರಿಯ ಮನೆಯ ಸುತ್ತಲು ಈಗ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ. ವ್ಯಾಪಾರಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಇನ್ನಷ್ಟು ಸಂಪರ್ಕಿತರ ಪತ್ತೆ ಕಾರ್ಯ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಯಾರಿದು ವ್ಯಾಪಾರಿ?
ರಿಪ್ಪನ್‌ಪೇಟೆ ಸಮೀಪದ ಗ್ರಾಮದವೊಂದರ ಜೂಸ್ ಕಬ್ಬು ವ್ಯಾಪಾರಿಯೊಬ್ಬರಲ್ಲಿ (೪೨) ಸೋಂಕು ಪತ್ತೆಯಾಗಿದೆ. ಇವರಲ್ಲಿ ಐಎಲ್‌ಐ (ಇನ್‌ಫ್ಲೂಯೆಂಜಾ ಲೈಕ್ ಇಲ್ನೆಸ್) ಇದೆ ಎಂದು ಸರ್ಕಾರದ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.
ಜ್ವರ ಅಂತಾ ಖಾಸಗಿ ಆಸ್ಪತ್ರೆಗೆ
ಜ್ವರ, ಕೆಮ್ಮೆ ಕಾಣಿಸಿಕೊಂಡ ಹಿನ್ನೆಲೆ, ಕಬ್ಬು ವ್ಯಾಪಾರಿ ತೀರ್ಥಹಳ್ಳಿಯ ಖಾಸಗಿ ಅಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರು. ಆದರೆ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕರೋನ ಚಿಕಿತ್ಸೆ ಮಾಡಿಸಿಕೊಂಡು ಬರುವಂತೆ ಸೂಚಿಸಿದ್ದರು. ಪರೀಕ್ಷೆಯಲ್ಲಿ ಕರೋನ ಪಾಸಿಟಿವ್ ಬಂದಿದೆ. ಕೂಡಲೇ ಕಬ್ಬು ವ್ಯಾಪಾರಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೋಂಕು ತಗುಲಿದ್ದು ಹೇಗೆ?
ಕೆಲ ದಿನದ ಹಿಂದೆ ಕಬ್ಬು ವ್ಯಾಪಾರಿ ಉಡುಪಿ ಮತ್ತು ದಾವಣಗೆರೆ ಜಿಲ್ಲೆಗೆ ಹೋಗಿ ಬಂದಿದ್ದಾರೆ. ಆ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧೆಡೆ ವ್ಯಾಪಾರ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಸೋಂಕು ತಗುಲಿದ್ದು ಹೇಗೆ ಅನ್ನುವುದು ಇನ್ನು ದೃಢವಾಗಿಲ್ಲ. ಆದರೆ ಇವರು ಹೆಚ್ಚು ಕಡೆ ಓಡಾಡಿದ್ದಾರೆ ಅನ್ನುವುದು ಜನರಲ್ಲಿ ಆತಂಕ ಮೂಡಿಸಿದೆ.
ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕ್ವಾರಂಟೈನ್
ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈಗೆ ಒಳಪಡಿಸಲಾಗಿದೆ. ಪತ್ನಿ, ಮಕ್ಕಳು, ತಾಯಿ, ಚಾಲಕ ಸೇರಿದಂತೆ ಐವರನ್ನು ಹೋಂ ಕ್ವಾಂಟೈನ್ ಮಾಡಲಾಗಿದೆ. ವ್ಯಾಪಾರಿಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಗ್ರಾಮದಲ್ಲಿರುವ ಆರು ಮನೆಗಳನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ. ಇನ್ನೊಂದೆಡೆ ಚಿಕಿತ್ಸೆ ನೀಡಿದ್ದ ವೈದ್ಯ ಮತ್ತು ಲ್ಯಾಬ್ ಟೆಕ್ನಿಷಿಯನ್ ಕೂಡ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]