ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020
ಕರೋನ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಇವತ್ತು ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. ಡಿಎಆರ್‍ನ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ‍್ವರಪ್ಪ ಧ್ವಜಾರೋಹಣ ಮಾಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಖಾಕಿ ಪಡೆಯಿಂದ ಪಥ ಸಂಚಲನ
ಸರಳ ಆಚರಣೆ ಹಿನ್ನೆಲೆ ಶಿವಮೊಗ್ಗದಲ್ಲಿ ಈ ಬಾರಿ ಖಾಕಿ ಪಡೆಯಿಂದ ಮಾತ್ರ ಪಥ ಸಂಚಲನ ನಡೆಸಲಾಯಿತು. ಪೊಲೀಸರ ಡಿಎಆರ್ ಪಡೆ, ಸಿವಿಲ್ ವಿಭಾಗ, ಕೆಎಸ್‍ಆರ್‍ಪಿ, ಹೋಂ ಗಾರ್ಡ್ಸ್ ಪುರುಷ ಮತ್ತು ಮಹಿಳಾ ವಿಭಾಗ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಬ್ಯಾಂಡ್ ಮಾತ್ರ ಪಥ ಸಂಚಲನದಲ್ಲಿದ್ದವು.
ಸ್ಯಾನಿಟೈಸರ್, ಥರ್ಮಲ್ ಟೆಸ್ಟ್
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿತ್ತು. ಥರ್ಮಲ್ ಟೆಸ್ಟ್ ಮಾಡಿಯೇ ಆವರಣದೊಳಗೆ ಬಿಡಲಾಗುತ್ತಿತ್ತು. ವೇದಿಕೆಯಲ್ಲಿ ಕುರ್ಚಿಗಳನ್ನು ಸಾಮಾಜಿಕ ಅಂತರದಲ್ಲಿ ಹಾಕಲಾಗಿತ್ತು.
ಜನರಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ
ಪ್ರತಿ ವರ್ಷದ ಸಮಾರಂಭದಲ್ಲಿ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಶಾಲೆಗಳಿಗೆ ರಜೆ, ಕೋವಿಡ್ ನಿಯಂತ್ರಣಕ್ಕೆ ರೂಪಿಸಿರುವ ನಿಯಮ ಪಾಲಿಸಬೇಕಿರುವ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿತ್ತು. ಇನ್ನು ಸಭೀಕರು ಸಂಖ್ಯೆಯು ಬೆರಳೆಣಿಕೆಯಷ್ಟಿತ್ತು.
ಮಕ್ಕಳು, ಸಾಧಕರಿಗೆ ಸನ್ಮಾನ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಉತ್ತಮ ಸಾಧನೆ ತೋರಿದ ಅಧಿಕಾರಿಗಳು, ಕಲಾವಿದರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗ ಡಿಎಆರ್ ಮೈದಾನದಲ್ಲಿ ಧ್ವಜಾರೋಹಣದ ವಿಡಿಯೋ ರಿಪೋರ್ಟ್
https://www.facebook.com/liveshivamogga/videos/302353677690556/?t=3
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]