ಸಾಗರದ ಕಸಕಸೆಕೊಡ್ಲುವಿನಲ್ಲಿ ತಾಯಿ, ಮಗನ ಕೊಲೆ ಪ್ರಕರಣ, ಗಮನಿಸಬೇಕಾದ ಪಾಯಿಂಟ್‍ಗಳಿವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

120830080 973000173179893 4449507748960184350 o.jpg? nc cat=109& nc sid=8024bb& nc ohc= qkJw9Hn9FMAX 9mH2k& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SAGARA NEWS | 12 ಅಕ್ಟೋಬರ್ 2020

ಭಾನುವಾರ ಬೆಳಗಿನ ಜಾವದ ಜೋಡಿ ಕೊಲೆ ಸಾಗರ ತಾಲೂಕಿನಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಬ್ಯಾಕೋಡಿನ ದಂಪತಿ ಹತ್ಯೆ ನೆನಪು ಹಸಿರಾಗಿರುವಾಗಲೆ ಈ ಜೋಡಿ ಕೊಲೆ ನಡೆದಿದೆ. ಸಾಗರ ಪೊಲೀಸರಿಗೆ ತಲೆನೋವು ಸೃಷ್ಟಿಸಿದ್ದರೆ, ಜನರು ತಲ್ಲಣಗೊಂಡಿದ್ದಾರೆ.

ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಕಸೆಕೊಡ್ಲು ಮಜರೆ ಗ್ರಾಮದಲ್ಲಿ ತಾಯಿ – ಮಗನ ಹತ್ಯೆ ಮಾಡಲಾಗಿದೆ. ಬಂಗಾರಮ್ಮ (62) ಮತ್ತು ಅವರ ಮಗ ಪ್ರವೀಣ್ ಕುಮಾರ್ (36) ಮೃತ ದುರ್ದೈವಿಗಳು. ಈ ಕೊಲೆ ಪ್ರಕರಣದಲ್ಲಿ ಗಮನಿಸಬೇಕಾದ ಅಂಶಗಳಿವು.

119060214 954258745054036 6933822829653446782 o.jpg? nc cat=105& nc sid=110474& nc ohc=XxkfaKGqL3MAX JHRqz& nc ht=scontent.fixe1 1

ಮನೆಯ ಮಹಡಿಗೆ ನುಗ್ಗಿ, ಅಲ್ಲಿಂದ ಕೆಳಗಿಳಿದು ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಪ್ರವೀಣ್ ಕುಮಾರ್ ಅವರ ಹತ್ಯೆ ಮಾಡಿದ್ದಾರೆ. ಪ್ರವೀಣ್ ಕುಮಾರ್ ಅವರು ಬೆನ್ನು ಮೇಲೆ ಮಾಡಿ ಬಿದ್ದಿದ್ದಾರೆ. ಅವರ ಮೃತದೇಹದ ಸುತ್ತಲು ನೆತ್ತರು ಹರಿದ್ದಿದ್ದು, ಕೊಲೆಯ ಭೀಕರತೆಗೆ ಸಾಕ್ಷಿಯಾಗಿತ್ತು.

ಮಗನ ಮೇಲಿನ ದಾಳಿ ತಡೆಯಲು ಮುಂದಾದ ತಾಯಿ ಬಂಗಾರಮ್ಮ ಅವರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಸ್ಥಳದಲ್ಲೇ ಬಂಗಾರಮ್ಮ ಅವರು ಮೃತರಾಗಿದ್ದಾರೆ. ಪ್ರವೀಣ್ ಮೃತರಾದ ಕೊಠಡಿಯ ಹೊಸ್ತಿಲ ಮೇಲೆ ಬಂಗಾರಮ್ಮ ಅವರ ಮೃತದೇಹವಿತ್ತು.

121232594 1237703706591047 795819035917221618 n.png? nc cat=108& nc sid=8024bb& nc ohc= W xRusHhJIAX9ltCVx& nc ht=scontent.fixe1 1

ಪ್ರವೀಣ್ ಅವರು ರೋಹಿಣಿ ಅವರ ಜೊತೆ ವಿವಾಹವಾಗಿದ್ದರು. ತಾಯಿ – ಮಗನ ಹತ್ಯೆ ಮಾಡಿದ್ದ ದುಷ್ಕರ್ಮಿಗಳು, ರೋಹಿಣಿ ಅವರ ಬಾಯಿಗೆ ಪ್ಲಾಸ್ಟರ್ ಹಚ್ಚಿ, ಕೈ ಕಾಲು ಕಟ್ಟಿ ಕೂಗಾಡದಂತೆ ನೋಡಿಕೊಂಡಿದ್ದಾರೆ. 10 ತಿಂಗಳ ಮಗುವು ರೋಹಿಣಿ ಜೊತೆಗಿತ್ತು.

ಜೋಡಿ ಕೊಲೆ ಮಾಡಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಯಾವುದೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ತಿಳಿದು ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರವೀಣ್ ಕುಮಾರ್ ಮತ್ತು ಅವರ ತಾಯಿಯ ಹತ್ಯೆಯಾದ ಕೊಠಡಿಯಲ್ಲಿದ್ದ ಬೀರುಗಳ ಬಾಗಿಲು ಮುಚ್ಚಿದಂತೆಯೆ ಇದ್ದವು.

121149352 1237703823257702 8250646242756652479 n.png? nc cat=102& nc sid=8024bb& nc ohc=A8AgtkKv12gAX aLU0y& nc ht=scontent.fixe1 1

ಕೊಲೆ ಬಳಿಕ ದುಷ್ಕರ್ಮಿಯು ಪ್ರವೀಣ್ ಕುಮಾರ್ ಅವರ ಬಟ್ಟೆ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.

ಪ್ರವೀಣ್ ಅವರು ಜೇಬಿನಲ್ಲಿಟ್ಟದ್ದ 4 ಸಾವಿರ ನಗದು ಮತ್ತು ಮೊಬೈಲ್ ಫೋನ್‍ ಅನ್ನು ದುಷ್ಕರ್ಮಿ ಕದ್ದೊಯ್ದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಂಟಿ ಮನೆಯಾದ್ದರಿಂದ ಪ್ರಕರಣ ಬೆಳಕಿಗೆ ಬರುವುದು ತಡವಾಗಿದ್ದು, ಬೆಳಗ್ಗೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.

ಪ್ರವೀಣ್ ಕುಮಾರ್ ಅವರಿಗೆ ಅರ್ಧ ಎಕರೆ ಗದ್ದೆ ಇತ್ತು. ಕೃಷಿ ಮಾಡಿ ಜೀವನ ನಡೆಸುತ್ತಿದ್ದರು.

ಜೋಡಿ ಕೊಲೆ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖೆಗೆ ತಂಡ ರಚಿಸಲಾಗಿದೆ. ಇನ್ಸ್‍ ಪೆಕ್ಟರ್‍ಗಳಾದ ಕುಮಾರಸ್ವಾಮಿ, ಅಶೋಕ್‍ ಕುಮಾರ್, ಅಭಯ್ ಪ್ರಕಾಶ್, ಭರತ್, ಸುಜಾತಾ ಅವರನ್ನೊಳಗೊಂಡ ತಂಡ ಪ್ರಕರಣದ ತನಿಖೆ ಆರಂಭಿಸಿದೆ.

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 12, 2020

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

ಮಾಜಿ ಮಿನಿಸ್ಟರ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಮಾಜಿ ಮಿನಿಸ್ಟರ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

ವಕ್ತರರಾಗಿ ಜಿ.ಡಿ.ಮಂಜುನಾಥ್‌ ನೇಮಕ

ವಕ್ತರರಾಗಿ ಜಿ.ಡಿ.ಮಂಜುನಾಥ್‌ ನೇಮಕ

ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

ಶಿವಮೊಗ್ಗದ ವಿವಿಧೆಡೆ ಎರಡು ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಎರಡು ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

Leave a Comment