ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 10 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಅಹೋರಾತ್ರಿ ವೀಣಾ ಮಹೋತ್ಸವ ಆಯೋಜಿಸಲಾಗಿತ್ತು. ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ ಮತ್ತು ಶ್ರೀ ಗುರುಗುಹ ಸಂಗೀತ ಮಹಾ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶನಿವಾರ ಸಂಜೆ 5.30ರಿಂದ ಇವತ್ತು ಬೆಳಗ್ಗೆ 6 ಗಂಟೆವರೆಗೆ ನಿರಂತರವಾಗಿ ವೀಣಾ ಮಹೋತ್ಸವ ನಡೆಯಿತು. ಕೀರ್ತಿಶೇಷ ವಿದ್ವಾನ್ ಶ್ರೀ ಹೆಚ್.ಆರ್. ಪ್ರಸನ್ನ ವೆಂಕಟೇಶ್ ಅವರಿಗೆ ಈ ಮಹೋತ್ಸವವನ್ನು ಸಮರ್ಪಿಸಲಾಯಿತು.
ಶ್ರೀ ಗುರುಗುಹ ಸಂಗೀತ ಮಹಾ ವಿದ್ಯಾಲಯದ 17 ನೇ ವರ್ಷದ ಮಾರ್ಗಶಿರ ರಾಷ್ಟ್ರೀಯ ವೀಣಾ ಮಹೋತ್ಸವ ಸಪ್ತಾಹದ ಅಂಗವಾಗಿ ಕಾರ್ಯಕ್ರಮ ನಡೆಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್ ಉದ್ಘಾಟಿಸಿದರು. ಕಾರ್ಪೊರೇಟರ್ ಆರತಿ ಪ್ರಕಾಶ್, ಸರಸ್ವತಿ ಸಂಗೀತ ವಿದ್ಯಾಲಯದ ವಿದುಷಿ ವಿಜಯಲಕ್ಷ್ಮೀ ರಾಘು ಉಪಸ್ಥಿತರಿದ್ದರು. ಭಾರತೀಯ ವಿದ್ಯಾ ಭವನದ ಉಪಾಧ್ಯಕ್ಷ ಎನ್ ದಿವಾಕರರಾವ್ ಅಧ್ಯಕ್ಷತೆ ವಹಿಸಿದ್ದರು.
ಮೈಸೂರಿನ ಆರ್.ಕೆ. ಪದ್ಮನಾಭ, ಬೆಂಗಳೂರಿನ ನಿಟ್ಟೂರು ಶ್ರೀಕಾಂತ್, ಶಿವಮೊಗ್ಗದ ಬಿ.ಕೆ. ವಿಜಯಲಕ್ಷ್ಮೀ ರಾಘು, ಬೆಂಗಳೂರಿನ ಎಂ.ಆರ್. ಮಂಜುಳಾ, ವೈ.ಜಿ. ಶ್ರೀಲತಾ ನಿಶ್ಚಿತ್ ಅಹೋರಾತ್ರಿ ವೀಣಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಶಿವಮೊಗ್ಗದ ಪಿ.ಎ. ಅರವಿಂದ ಹೊಳ್ಳ, ಮೈಸೂರಿನ ಪಿ.ಎಸ್. ಶ್ರೀಧರ್, ಬೆಂಗಳೂರಿನ ಪುತ್ತೂರು ನಿಶ್ಚಿತ್, ಬಿ.ಆರ್. ಶ್ರೇಯಸ್ ಮೃದಂಗದಲ್ಲಿ ನುಡಿಸಿದರು.
ಬಾಲ ಮತ್ತು ಯುವ ಕಲಾವಿದರಾದ ವೀರನರಸಿಂಹ ರಾವ್, ನಿತ್ಯಾ ರಾವ್, ಸುಮಾ, ಸಂಧ್ಯಾ, ಶುಭ, ಧನ್ಯ, ಮಹಾಲಕ್ಷ್ಮಿ, ವೀಣಾ, ಉಷಾ, ವೈಷ್ಣವಿ, ಪ್ರತಿಭಾ, ಶ್ರೀಯಾ, ಸಂಜನಾ, ಶಿಲ್ಪಾ, ಸಹನೆ, ಸುರಕ್ಷಾ ಭಾಗವಹಿಸಿದ್ದರು.
ಫೋಟೊ, ಮಾಹಿತಿ : ಮುರಳೀಧರ್. ಹೆಚ್.ಸಿ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]