SHIVAMOGGA LIVE NEWS | SHIMOGA | 18 ಏಪ್ರಿಲ್ 2022
ನಾಗರಿಕ ಸೇವಾ ದಿನವನ್ನು ಇನ್ಮುಂದೆ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಗಣರಾಜ್ಯೋತ್ಸವದ ಸಂದರ್ಭ ನೀಡುತ್ತಿದ್ದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಅದೆ ಸಂದರ್ಭ ಪ್ರದಾನ ಮಾಡಲಾಗುತ್ತದೆ. ಈ ಭಾರಿ 20 ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಷ್.ಷಡಾಕ್ಷರಿ ಅವರು, ಏಪ್ರಿಲ್ 21ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಮಾಡಲಾಗುತ್ತಿದೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಆ ದಿನ ಸರ್ಕಾರಿ ನೌಕರರು ಎದುರಿಸುತ್ತಿರುವ ಸವಾಲು, ಒತ್ತಡಗಳ ಪರಿಹಾರ, ಸಾಮಾಜಿಕ, ಕೌಟುಂಬಿಕ ನಿರ್ವಹಣೆಗೆ ಮಾರ್ಗದರ್ಶನ ಕುರಿತು ಉಪನ್ಯಾಸ ಆಯೋಜಿಸಲಾಗಿದೆ. ಚಟ್ನಳ್ಳಿ ಮಹೇಶ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದರು.
20 ಸರ್ಕಾರಿ ನೌಕರರಿಗೆ ಪ್ರಶಸ್ತಿ
ಅನನ್ಯ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲಾಗುತ್ತದೆ. ಈ ಭಾರಿ 2021, 2022ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 20 ಮಂದಿ ಸರ್ಕಾರಿ ನೌಕರರನ್ನು ಆಯ್ಕೆ ಮಾಡಲಾಗಿದೆ ಎಂದು ಸಿ.ಎಸ್.ಷಡಾಕ್ಷರಿ ತಿಳಿಸಿದರು.
2021ನೇ ಸಾಲಿನ ಪ್ರಶಸ್ತಿ : ಶಿಕಾರಿಪುರ ತಾಲೂಕು ವೈದ್ಯಾಧಿಕಾರಿ ಡಾ. ಎಂ.ಜಿ.ಚಂದ್ರಪ್ಪ, ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ. ಎ.ಎಸ್.ಇರ್ಫಾನ್ ಅಹಮದ್, ಶಿವಮೊಗ್ಗದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಜೆ.ಮಧುಕುಮಾರ್, ಸಾಗರ ತಾಲೂಕು ಬಂದಗದ್ದೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಲತಾ, ಭದ್ರಾವತಿ ತಾಲೂಕು ವೈದ್ಯಾಧಿಕಾರಿ ಡಾ. ಎಂ.ವಿ.ಅಶೋಕ್, ಸೊರಬ ತಾಲೂಕು ಆಸ್ಪತ್ರೆ ಶೂಶ್ರೂಷಕ ಅಧಿಕಾರಿ ರಾಧಮ್ಮ, ಜಿಲ್ಲಾಧಿಕಾರಿ ಕಚೇರಿ ಶೀಘ್ರಲಿಪಿಗಾರರಾದ ಟಿ.ವಿ.ಕಾಂತಮ್ಮ, ಶಿವಮೊಗ್ಗ ತಾಲೂಕು ಕಚೇರಿ ಭೂಮಿ ಕೇಂದ್ರದ ಗ್ರಾಮ ಲೆಕ್ಕಿಗರಾದ ಈ.ಪುಷ್ಪಲತಾ, ಚೋರಡಿಯ ಪಿಡಿಒ ಶ್ರೀನಿವಾಸ್, ಶಿಕಾರಿಪುರ ಭೂಮಾಪನ ಇಲಾಖೆಯ ಭೂಮಾಪಕರಾದ ಎಂ.ನೇತ್ರಮ್ಮ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
2022ನೇ ಸಾಲಿನ ಪ್ರಶಸ್ತಿ : ಕೃಷಿ ಇಲಾಖೆ ಉಪ ನಿರ್ದೇಶಕ ಡಿ.ಎಂ.ಬಸವರಾಜ, ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ, ಭದ್ರಾವತಿಯ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಕೆ.ಎನ್.ಸಾವಿತ್ರಿ, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ಕಚೇರಿಯ ತಾಂತ್ರಿಕ ಸಹಾಯಕ ಹೆಚ್.ಜಿ.ಕೃಷ್ಣಪ್ರಸಾದ್, ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಎನ್.ಯಶವಂತ್, ಜಿಲ್ಲಾ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಕೆ.ಶಿವಕುಮಾರ್, ಶಿಕಾರಿಪುರದ ಗ್ರಾಮ ಲೆಕ್ಕಾಧಿಕಾರಿ ಎಂ.ಹೆಚ್.ಹರ್ಷ, ತೀರ್ಥಹಳ್ಳಿ ತಾಲೂಕು ಹೊಸಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ.ಟಿ.ಜಯಂತಿ, ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಸಹಾಯಕಿ ಕೋಕಿಲಾ, ಶಿವಮೊಗ್ಗದ ಮೆಟ್ರಿಕ್ ನಂತರದ ಬಾಲಕ ವಿದ್ಯಾರ್ಥಿ ನಿಲಯದ ಅಡುಗೆಯವರಾದ ಎನ್.ಸತೀಶ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ನಟ ವಸಿಷ್ಠ ಸಿಂಹ, ಸೆಲ್ಫಿ, ಫೋಟೊಗೆ ಮುಗಿಬಿದ್ದ ಫ್ಯಾನ್ಸ್