ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 20 DECEMBER 2022
ಶಿವಮೊಗ್ಗ : ಚಲಿಸುತ್ತಿದ್ದ ಬೈಕಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಳೆಗೆ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. (car hits bike)

ಶಿವಮೊಗ್ಗ ವಿದ್ಯಾನಗರದ ಮಹಾದೇವಿ ಟಾಕೀಸ್ ಬಳಿ ಘಟನೆ ಸಂಭವಿಸಿದೆ. ಗಾಡಿಕೊಪ್ಪದ ಲೋಕೇಶ್ ನಾಯ್ಕ ತನ್ನ ಅತ್ತೆಯನ್ನು ಬೈಕಿನಲ್ಲಿ ದುಮ್ಮಳ್ಳಿಗೆ ಕರೆದೊಯ್ಯವ ವೇಳೆ ಅಪಘಾತವಾಗಿದೆ. ಗಂಗಾ ಬಾಯಿ ಅವರ ಎಡ ಕಣ್ಣಿನ ಬಳಿ, ಮೂಗು, ಬಲಗಾಲಿಗೆ ಗಾಯವಾಗಿದೆ. ಕೂಡಲೆ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಚಾರಿ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. (car hits bike)
ಇದನ್ನೂ ಓದಿ – ಅರ್ಧ ವರ್ಷದಲ್ಲಿ 7 ರೌಡಿಗಳ ಕಾಲಿಗೆ ಗುಂಡಿಟ್ಟ ಶಿವಮೊಗ್ಗ ಪೊಲೀಸರು, ಯಾರೆಲ್ಲರಿಗೆ ಫೈರ್ ಮಾಡಲಾಗಿದೆ?

LATEST NEWS
- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

- ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

- ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

- ವಕ್ತರರಾಗಿ ಜಿ.ಡಿ.ಮಂಜುನಾಥ್ ನೇಮಕ

About The Editor
ನಿತಿನ್ ಆರ್.ಕೈದೊಟ್ಲು

CLICK & JOIN – SHIVAMOGGA LIVE COMMUNITY














