ಬೆಳಗ್ಗೆಯಿಂದ ಈ ಊರಲ್ಲಿ ಚಲಾವಣೆಯಾಗಿದ್ದು ಎರಡೇ ಮತ, ಮತಗಟ್ಟೆಯಿಂದ ನೂರು ಮೀಟರ್‌ ದೂರ ಉಳಿದ ಜನ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 10 MAY 2023

BHADRAVATHI : ಮೂಲ ಸೌಕರ್ಯಕ್ಕೆ ಆಗ್ರಹಿಸಿ ಕನಸಿನಕಟ್ಟೆ ಗ್ರಾಮಸ್ಥರು ಮತದಾನ ಬಹಿಷ್ಕಾರಿಸಿದ್ದಾರೆ (Boycott). ಗ್ರಾಮದಲ್ಲಿ ಸ್ಥಾಪಿಸಿರುವ ಬೂತ್‌ನಲ್ಲಿ ಬೆಳಗ್ಗೆಯಿಂದ ಇಬ್ಬರು ಮಾತ್ರ ಮತದಾನ ಮಾಡಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Voting-Bahishkara-at-Kanasinakatte-Village

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಭದ್ರಾವತಿ ತಾಲೂಕಿನ ಕನಸಿಕಟ್ಟೆ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿದೆ. ರಾಜಕೀಯ ನಾಯಕರು ಊರೊಳಗೆ ಪ್ರವೇಶಿಸಬಾರದು ಎಂದು ಬ್ಯಾನರ್‌ ಹಾಕಿದ್ದರು. ಹೀಗಿದ್ದೂ ಗ್ರಾಮಸ್ಥರ ಮನವೊಲಿಸಲು ಯಾರೊಬ್ಬರು ಬಂದಿಲ್ಲ.

ಎರಡು ಮತ ಮಾತ್ರ ಚಲಾವಣೆ

ಕನಸಿನಕಟ್ಟೆ ಗ್ರಾಮದ ಬೂತ್‌ನಲ್ಲಿ 1021 ಮತಗಳಿವೆ. ಬೆಳಗ್ಗೆಯಿಂದ ಎರಡು ಮತಗಳು ಮಾತ್ರ ಚಲಾವಣೆಯಾಗಿದೆ. ಮತಗಟ್ಟೆಯಿಂದ ನೂರು ಮೀಟರ್‌ ಹೊರಗೆ ಮತದಾನ ಬಹಿಷ್ಕಾರದ (Boycott) ಬ್ಯಾನರ್‌ ಕಟ್ಟಿದ್ದಾರೆ. ಮತದಾರರು ನೂರು ಮೀಟರ್‌ ಹೊರಗೆ ನಿಂತು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಜನರ ಆಕ್ರೋಶಕ್ಕೆ ಕಾರಣವೇನು?

ಕನಸಿನಕಟ್ಟೆಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಿಗುವುದಿಲ್ಲ. ಇದರಿಂದ ಜನರು ಹೊರ ಜಗತ್ತಿನಿಂದ ದೂರಾಗಿದ್ದಾರೆ. ಇನ್ನು, ಊರಿಗೆ ಬಸ್‌ ಸೌಕರ್ಯವಿಲ್ಲ. ಊರಿನ ಮಕ್ಕಳು ಶಾಲೆ, ಕಾಲೇಜಿಗೆ ತೆರಳುವುದು ಕಷ್ಟವಾಗಿದೆ. ಊರಿನಲ್ಲಿ ಸ್ಮಶಾನವು ಇಲ್ಲ. ತಮ್ಮ ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ರಾಜಕಾರಣಿಗಳು ತಮ್ಮೂರಿಗೆ ಪ್ರವೇಶಿಸಬಾರದು ಎಂದು ಬ್ಯಾನರ್‌ ಕಟ್ಟಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment