SHIVAMOGGA LIVE NEWS | 3 JANUARY 2023
SHIMOGA : ಕಟ್ಟಡದ ಮೇಲ್ಭಾಗದಲ್ಲಿ ಸಚಿವರು, ಹಿರಿಯ ಅಧಿಕಾರಿಗಳ ಸಭೆ. ಕೆಳಗೆ ಅರ್ಜಿ ಸಲ್ಲಿಸಲು ಕಾದು ಕಾದು ಹೈರಾಣಾಗಿ ನೆಲದ ಮೇಲೆ ಕುಳಿತ ಜನ. ಇದು ಶಿವಮೊಗ್ಗ ತಾಲೂಕು ಕಚೇರಿಯಲ್ಲಿನ ದುಸ್ಥಿತಿ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಲೂಕು ಕಚೇರಿ ಕಟ್ಟಡದಲ್ಲಿರುವ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಯುವನಿಧಿ ಯೋಜನೆ ಚಾಲನೆ ಸಂಬಂಧ ಸಭೆ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವ ಶರಣ ಪ್ರಕಾಶ್ ಪಾಟೀಲ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದೆ ಸಭಾಂಗಣದ ಕೆಳ ಮಹಡಿಗಳಲ್ಲಿ ವಿದ್ಯುತ್ ಕಡಿತವಾಗಿದೆ.
ನೆಲದ ಮೇಲೆ ಕುಳಿತ ಜನ
ಸಭಾಂಗಣದಲ್ಲಿ ಲೈಟು, ಮೈಕುಗಳೆಲ್ಲವು ಕಾರ್ಯನಿರ್ವಹಿಸುತ್ತಿವೆ. ಆದರೆ ಇದೆ ಕಟ್ಟಡದ ಕೆಳ ಮಹಡಿಗಳಲ್ಲಿರುವ ಕಚೇರಿಗಳಲ್ಲಿ ವಿದ್ಯುತ್ ಕಡಿತವಾಗಿದೆ. ಕಚೇರಿಯಲ್ಲಿ ತುರ್ತು ಅಗತ್ಯವಿರುವೆಡೆ ಮಾತ್ರ ಲೈಟ್, ಕಂಪ್ಯೂಟರ್ ಬಳಸಲಾಗುತ್ತಿದೆ. ಉಳಿದೆಡೆ ಲೈಟ್, ಕಂಪ್ಯೂಟರ್ಗಳನ್ನು ಬಂದ್ ಮಾಡಲಾಗಿದೆ.
ವಿವಿಧ ಯೋಜನೆಗಳು, ಕೆಲಸ ಕಾರ್ಯಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದವರು ಕಾದು ಕೂತಿದ್ದಾರೆ. 11.30ರವರೆಗೆ ಕಾಯುವಂತೆ ಜನರಿಗೆ ಸಿಬ್ಬಂದಿ ತಿಳಿಸುತ್ತಿದ್ದರು.
ಇದನ್ನೂ ಓದಿ – ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ, ಆನಂದಪುರ, ರಿಪ್ಪನ್ಪೇಟೆಯಲ್ಲಿ ಮೆರವಣಿಗೆ