SHIVAMOGGA LIVE NEWS | 9 JANUARY 2025
ಶಿವಮೊಗ್ಗ : ಆಕಸ್ಮಿಕವಾಗಿ ಚಾನಲ್‌ಗೆ ಬಿದ್ದಿದ್ದ ಕುದುರೆಯೊಂದನ್ನು (Horse) ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಆಲ್ಕೊಳ ಸಮೀಪದ ಗೋಲ್ಡನ್ ಸಿಟಿ ಲೇಔಟ್ ಬಳಿ ಇಂದು ಸಂಜೆ ಕಾರ್ಯಾಚರಣೆ ನಡೆಸಿ, ಕುದುರೆಯನ್ನು ಮೇಲೆತ್ತಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಮೇಯಲು ಹೋಗಿದ್ದ ಕುದುರೆ ಮೂರು ದಿನದ ಹಿಂದೆ ಆಯಾತಪ್ಪಿ ಚಾನಲ್‌ಗೆ ಬಿದ್ದಿರುವ ಸಾಧ್ಯತೆ ಇದೆ. ಹಾಗಾಗಿ ಆಹಾರವಿಲ್ಲದೆ ನಿತ್ರಾಣಗೊಂಡಿತ್ತು.
ಕತ್ತಲಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಹರಸಾಹಸ ಪಡಬೇಕಾಯಿತು. ಅಲ್ಲದೆ ಅತ್ಯಂತ ಆಳವಿದ್ದರಿಂದ ಸಿಬ್ಬಂದಿ ರೋಪ್ ಬಳಸಿ ಚಾನಲ್‌ಗೆ ಇಳಿದು ಕಾರ್ಯಾಚರಣೆ ನಡೆಸಿದರು. ರೋಪ್, ಲ್ಯಾಡರ್ ಬಳಿಸಿ ಕುದುರೆಯನ್ನು ಮೇಲೆತ್ತಲಾಗಿದೆ. ಸದ್ಯ ಕುದುರೆ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.ಜೀವದ ಹಂಗು ತೊರೆದು ರಕ್ಷಣೆ
ಇದನ್ನೂ ಓದಿ » ಅಮೆರಿಕದಿಂದಲೇ ಆನ್‌ಲೈನ್ ಮೀಟಿಂಗ್, ಜವಾಬ್ದಾರಿ ಮೆರೆದ ಮಿನಿಸ್ಟರ್, ಯಾವೆಲ್ಲ ಸಭೆ ನಡೆಸಿದ್ದಾರೆ?
ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ನರೇಂದ್ರ, ಶರತ್, ರಾಜೀವ್ ಸುಣಗಾರ, ಸಂತೋಷ್, ಯಶ್ವಂತ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಫಟಾಫಟ್ ನ್ಯೂಸ್