ಹೆದ್ದಾರಿ ಮಧ್ಯೆ ಅಡಿಕೆ ಸಸಿ ನೆಟ್ಟ ರೈತ, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಹೊಸನಗರ: ರಾಷ್ಟ್ರೀಯ ಹೆದ್ದಾರಿಯ ಬೃಹತ್‌ ಗುಂಡಿಗಳನ್ನು (Pot Holes) ಮುಚ್ಚದ ಸರ್ಕಾರದ ನಡೆ ಖಂಡಿಸಿ ನಗರದಲ್ಲಿ ಮತ್ತಿಮನೆ ಶ್ರೀಕಾಂತ್‌ ಎಂಬುವವರು ವಿಭಿನ್ನ ಪ್ರತಿಭಟಿನೆ ಆರಂಭಿಸಿದ್ದಾರೆ. ಪ್ರತಿ ಗುಂಡಿಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಹೊಸನಗರ – ನಗರ ಮಾರ್ಗದಲ್ಲಿ ಭಾರಿ ಗಾತ್ರದ ಗುಂಡಿಗಳಾಗಿವೆ. ಇವುಗಳಿಂದ ನಿತ್ಯ ಒಂದಿಲ್ಲೊಂದು ಅಪಘಾತವಾಗುತ್ತಿವೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಮತ್ತಿಮನೆ ಶ್ರೀಕಾಂತ್‌ ಗುಂಡಿ ಮುಚ್ಚಿ, ಅಡಿಕೆ ಸಸಿ ನೆಡುವ ಪ್ರತಿಭಟನೆ ಮಾಡುತ್ತಿದ್ದಾರೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ವಾರದ ಹಿಂದೆ ಬಿದ್ದು ಗಾಯಗೊಂಡಿದ್ದರು

ಈ ಕುರಿತು ಮಾತನಾಡಿದ ಮತ್ತಿಮನೆ ಶ್ರೀಕಾಂತ್‌, ‘ಸರ್ಕಾರದ ಗಮನ ಸೆಳೆಯಲು ಪ್ರತಿ ಗುಂಡಿಯನ್ನು ಮುಚ್ಚಿ ಅದರಲ್ಲಿ ಅಡಿಕೆ ಸಸಿ ನೆಡುತ್ತಿದ್ದೇನೆ. ಹೊಸನಗರ – ನಗರ ಮಧ್ಯೆ 16 ಕಿ.ಮೀ ರಸ್ತೆಯಲ್ಲಿ ಆಳ, ಅಗಲವಾದ ಗುಂಡಿಗಳಿವೆ. ವಾಹನ ಸಂಚಾರಕ್ಕೆ ಬಹಳ ತೊಂದರೆ ಆಗುತ್ತಿದೆ. ವಾರದ ಹಿಂದೆ ಬೈಕಿನಲ್ಲಿ ತೆರಳುವಾಗ ಹೊಂಡ ಗುಂಡಿಯ ಕಾರಣಕ್ಕೆ ಬಿದ್ದಿದ್ದೆ. ಅದೃಷ್ಟವಶಾತ್‌ ಪಾರಾದೆ. ನನ್ನಂತೆ ಮತ್ಯಾರಿಗು ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂತ ಈ ರೀತಿಯ ಪ್ರತಿಭಟೆನೆ ನಡೆಸುತ್ತಿದ್ದೇನೆʼ ಎಂದು ತಿಳಿಸಿದರು.

ಮತ್ತಿಮನೆ ಶ್ರೀಕಾಂತ್‌ ಪ್ರತಿಭಟನೆಗೆ ಜನರು ಉತ್ತಮ ಪ್ರತಿಕ್ರಿಯೆ ಲಭಿಸಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಸರ್ಕಾರ ಗುಂಡಿಗಳನ್ನು ಮುಚ್ಚಿದರೆ ಈ ಭಾಗದ ಜನರು, ವಾಹನ ಸವಾರರು ನಿಶ್ಚಿಂತೆಯಿಂದ ಓಡಾಡಬಹುದಾಗಿದೆ.

Villager-plant-areca-Sappling-at-a-pot-hole-in-highway-at-hosanagara

ಇದನ್ನೂ ಓದಿ » ಶಿವಮೊಗ್ಗ ಹಾಪ್‌ಕಾಮ್ಸ್‌ಗೆ 15 ನಿರ್ದೇಶಕರು ಅವಿರೋಧ ಆಯ್ಕೆ, ವಿಜಯ್‌ಕುಮಾರ್‌ ಹ್ಯಾಟ್ರಿಕ್‌ ಸಾಧನೆ

Pot Holes

Leave a Comment