ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲಿನ ಗುಟ್ಕಾ ಕಂಪನಿ ಜಾಹೀರಾತುಗಳನ್ನು (Advertisements) ತೆರವುಗೊಳಿಸಿದ ಕರವೇ ಸಿಂಹಸೇನೆ ಸದಸ್ಯರು ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿಹಂಚಿದರು.
ಸಂಘಟನೆಯ ಅಧ್ಯಕ್ಷ ಎಂ.ರವಿಪ್ರಸಾದ್ ಮಾತನಾಡಿ, ಎರಡು ತಿಂಗಳ ಹಿಂದೆಯೇ ಕೆಎಸ್ಆರ್‌ಟಿಸಿ ಬಸ್ ಮೇಲಿನ ಗುಟ್ಕಾ ಮತ್ತಿತರ ಮಾದಕ ವಸ್ತುಗಳ ಜಾಹೀರಾತು ಹಾಗೂ ಆಂಗ್ಲ ಭಾಷೆಯಲ್ಲಿರುವ ಜಾಹೀರಾತುಗಳನ್ನು ತೆರವು ಮಾಡುವಂತೆ ಶಿವಮೊಗ್ಗದಿಂದಲೇ ಹೋರಾಟ ಆರಂಭಿಸಿದ್ದೆವು ಎಂದರು.
ಇದನ್ನೂ ಓದಿ – ಸಕ್ರೆಬೈಲು ಬಳಿ ಬಸ್ಸು ಕಾರು ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರಿನಲ್ಲೂ ಇದೇ ವಿಷಯದಲ್ಲಿ ಹೋರಾಟ ಮಾಡಲಾಗಿತ್ತು. ಈ ಸಂಬಂಧ ಸಾರಿಗೆ ಸಚಿವರಿಗೂ ಮನವಿ ನೀಡಲಾಗಿತ್ತು. ಈ ಹಿನ್ನೆಲೆ ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ಬಸ್‌ಗಳ ಮೇಲಿನ ಮಾದಕ ವಸ್ತುಗಳು, ಒಳ ಉಡುಪುಗಳು, ಇಂಗ್ಲಿಷ್ ಬರಹದ ಜಾಹೀರಾತುಗಳನ್ನು ತೆರವು ಮಾಡುವಂತೆ ಆದೇಶ ಮಾಡಿತ್ತು ಎಂದು ತಿಳಿಸಿದರು.

ಕೆಲವು ಬಸ್‌ಗಳಲ್ಲಿ ಇನ್ನೂ ಆಕ್ಷೇಪಾರ್ಹ ಜಾಹೀರಾತುಗಳು ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲ ಜಾಹೀರಾತುಗಳನ್ನು ತೆರವು ಮಾಡಿದ್ದೇವೆ. ಸಂಬಂಧಿಸಿದವರು ಇನ್ನು ಮುಂದಾದರೂ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಂಘಟನೆಯ ಪ್ರಮುಖರಾದ ಮಧುಸೂದನ್, ನೂರುಲ್ಲಾ, ಅಭಿಜಿತ್ ನವುಲೆ, ರಫೀಕ್ ಇತರರಿದ್ದರು.

LATEST NEWS
- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

- ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

About The Editor
ನಿತಿನ್ ಆರ್.ಕೈದೊಟ್ಲು






