ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಕುಂಸಿ: ಸಮೀಪದ ರಾಮನಗರದಲ್ಲಿ ಸೋಮವಾರ ಸಂಜೆ ಸಿಡಿಲು (lightning) ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹಾರನಹಳ್ಳಿಯ ಶೇಖ್ ಮುಜೀಬ್ ಉರ್ ರಹಮಾನ್ (45) ಮೃತಪಟ್ಟಿದ್ದಾರೆ.

ಇವರು ರಾಮನಗರದ ಬಸ್ಟ್ಯಾಂಡ್ ಬಳಿಯ ಮರದ ಕೆಳಗೆ ಕೋಳಿ ಅಂಗಡಿ ನಡೆಸುತ್ತಿದ್ದರು. ಸೋಮವಾರ ಸಂಜೆ ಮಳೆಯ ಜತೆ ಕೋಳಿ ಅಂಗಡಿಗೆ ಹಾಗೂ ಪಕ್ಕದಲ್ಲಿರುವ ಮರಕ್ಕೆ ಸಿಡಿಲು ಬಡಿದಿದೆ. ಇದೇ ವೇಳೆ ಅಂಗಡಿಯಲ್ಲಿದ್ದ ಶೇಖ್ ಮುಜೀಬ್ ಉರ್ ರಹಮಾನ್ ಅವರಿಗೂ ಸಿಡಿಲು ಬಡಿದಿದ್ದು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಗಡಿಗೆ ಬೆಂಕಿ ಬಿದ್ದಿದ್ದು, ಕೋಳಿಗಳು ಸುಟ್ಟಿವೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ : ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಸಂಘದ ಸಾಲದ ಹೆಸರಲ್ಲಿ ನಡೆಯಿತು ಮಹಾ ವಂಚನೆ, ಆಗಿದ್ದೇನು?

LATEST NEWS
- ಹೊಂಬುಜದಲ್ಲಿ ಮಹಾವೀರ ಜಯಂತಿ, ಶ್ರೀಗಳ ಸಂದೇಶವೇನು?

- ಶಿಕಾರಿಪುರ, ಸೊರಬ, ಸಾಗರದ ಕೆರೆಗಳ ಮೀನುಗಾರಿಕೆ ಟೆಂಡರ್, ನಿಯಮ ಉಲ್ಲಂಘನೆಗೆ ಆಕ್ರೋಶ

- ಒಂದೂವರೆ ಕೋಟಿ ಮೌಲ್ಯದ ಅಡಿಕೆ ನಾಪತ್ತೆ, ಆಗಿದ್ದೇನು?

- ಪ್ರಸಿದ್ಧ ರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ, ಮಿನಿಸ್ಟರ್ ಏನೆಲ್ಲ ಹೇಳಿದರು?

- ಶಿವಮೊಗ್ಗದ ಯುವಕರಿಗೆ ಉದ್ಯೋಗವಕಾಶ, ಉತ್ತಮ ಸಂಬಳ, PF, ESI, OT ಸೇರಿ ಹಲವು ಸೌಲಭ್ಯ, ಎಲ್ಲಿ?

About The Editor
ನಿತಿನ್ ಆರ್.ಕೈದೊಟ್ಲು















