ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020
ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆಗೆ ಸಫಾರಿಗೆ ತೆರಳಿ, ಪ್ರಾಣಿಗಳು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಿಸ್ತರಣೆಯ ಹೊಸ ಪ್ಲಾನ್
ಹುಲಿ, ಸಿಂಹಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಮಾಡುವ ಸಲುವಾಗಿ ಹೊಸ ಪ್ಲಾನ್’ಗಳನ್ನು ಸಿದ್ಧಪಡಿಸಲಾಗಿದೆ. ಇದರ ಕುರಿತು ಅಧಿಕಾರಿಗಳ ಜೊತೆಗೆ ಸಂಸದ ರಾಘವೇಂದ್ರ ಚರ್ಚಿಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸದ ಸಂಸದ ಬಿ.ವೈ.ರಾಘವೇಂದ್ರ, ತಾವರೆಕೊಪ್ಪ ಹುಲಿ – ಸಿಂಹಧಾಮವನ್ನು 40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಹುಲಿ – ಸಿಂಹಧಾಮದಲ್ಲಿ 24 ವಿವಿಧ ಜಾತಿಯ ಪ್ರಾಣಿ ಪಕ್ಷಿಗಳು ಇವೆ. ಇನ್ಮುಂದೆ 67 ಜಾತಿಯ 450ಕ್ಕೂ ಹೆಚ್ಚು ಪ್ರಾಣಿಪಕ್ಷಿಗಳ ವೀಕ್ಷಣೆಗೆ ಅವಕಾಶವಾಗಲಿದೆ. ಸದ್ಯ 80 ಹೆಕ್ಟರ್ ಅರಣ್ಯ ಪ್ರದೇಶವಿದೆ. ಇದನ್ನು 200 ಹೆಕ್ಟರ್’ಗೆ ವಿಸ್ತರಿಸಲಾಗುವುದು. ಈ ಕುರಿತು ಕೇಂದ್ರ ಸರ್ಕಾರದ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಅಭಿವೃದ್ದಿ ಕಾರ್ಯ ಆರಂಭಗೊಳ್ಳಲಿದೆ ಎಂದು ಸಂಸದ ರಾಘವೇಂದ್ರ ಸ್ಪಷ್ಟಪಡಿಸಿದರು.
ಪ್ರಾಣಿಗಳಿಗೆ ನೈಸರ್ಗಿಕ ಗುಹೆ
ಈಗಾಗಲೇ 9 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪೂರ್ಣಗೊಂಡಿದೆ. ಇದರಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಪ್ರಾಣಿಗಳಿಗೆ ನೈಸರ್ಗಿಕ ಗುಹೆ ನಿರ್ಮಿಸಲಾಗುತ್ತಿದೆ. ಮುಂದೆ ಸಿಂಹಧಾಮದ ಸಂಪೂರ್ಣ ಚಿತ್ರಣ ಬದಲಾಗಲಿದೆ. ಮೈಸೂರು ಮೃಗಾಲಯದ ಮಾದರಿಯಲ್ಲಿ ತ್ಯಾವರೆಕೊಪ್ಪ ಸಿಂಹಧಾಮವನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ಹುಲಿ – ಸಿಂಹಧಾಮಕ್ಕೆ ಈಗ ವಾರ್ಷಿಕ 2.3 ಕೋಟಿ ರೂ. ಆದಾಯವಿದೆ. ಆದರೆ ಖರ್ಚು ಮಾತ್ರ ವಾರ್ಷಿಕ 3 ಕೋಟಿ ರೂ. ಇದೆ. ವ್ಯತ್ಯಾಸದ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಅರಣ್ಯಾಧಿಕಾರಿಗಳಾದ ಬಿ.ಪಿ ರವಿ, ನಾಗರಾಜ್ ನಾಯ್ಕ್, ಮುಕುಂದ ಚಂದ್ರ, ಎ.ಆರ್.ರವಿ ಸೇರಿದಂತೆ ಮತ್ತಿತರರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Shivamogga MP BY Raghavendra visited Lion and Tiger Safari in Tyavarekoppa.