ಕುಂಸಿ ಬಳಿಯಿಂದ ಕುಮಟಾಗೆ ತೆರಳಿ ಬಾಕ್ಸ್‌ ತೆಗೆದ ಶಿಕ್ಷಕಿ, ನರ್ಸ್‌ಗೆ ಕಾದಿತ್ತು ಬಿಗ್‌ ಶಾಕ್‌, ಮಹಾ ವಂಚನೆ ವಿರುದ್ಧ ಕೇಸ್‌

crime name image

SHIVAMOGGA LIVE NEWS | 5 SEPTEMBER 2023 SHIMOGA : ಸುತ್ತೂರು ಮಠದ ಹೆಸರು ದುರ್ಬಳಕೆ ಮಾಡಿಕೊಂಡು ಶಿಕ್ಷಕಿ ಮತ್ತು ನರ್ಸ್‌ಗೆ ಸಿನಿಮೀಯ ರೀತಿಯಲ್ಲಿ 6 ಲಕ್ಷ ರೂ. ಹಣ ವಂಚಿಸಲಾಗಿದೆ. ದುಪ್ಪಟ್ಟು ಹಣದ (Money Doubling) ಆಸೆಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಮಹಿಳೆಯರು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸುತ್ತೂರು ಮಠದ ಹೆಸರು ಬಳಕೆ ಸುತ್ತೂರು ಮಠದಲ್ಲಿ ಮ್ಯಾನೇಜರ್‌ ಎಂದು ಹೇಳಿಕೊಂಡು ಕುಮಟದ ಶಿಕ್ಷಕಿ ಸುರೇಖಾ ಅವರಿಗೆ ವ್ಯಕ್ತಿಯೊಬ್ಬ ಕರೆ ಮಾಡಿದ್ದ. … Read more

ಶಿವಮೊಗ್ಗದಲ್ಲಿ ಸೆ.6ರಂದು ಮಾಂಸ ಮಾರಾಟ ನಿಷೇಧ

Mayanna-Gowda-Shimoga-Palike-Commissioner

SHIVAMOGGA LIVE NEWS | 5 SEPTEMBER 2023 SHIMOGA : ಸೆಪ್ಟಂಬರ್ 06 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ (Meat Sale) ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಏಕವ್ಯಕ್ತಿ ರಂಗ ಪ್ರಯೋಗ | ಕುಂಸಿಯಲ್ಲಿ ಮಳೆಗಾಗಿ ಪೂಜೆ, ಹೋಮ – 3 ಫಟಾಫಟ್‌ ನ್ಯೂಸ್‌

050923-Shruthi-Adarsha-Humchadakatte-Drama-in-Shimoga.webp

SHIVAMOGGA LIVE NEWS | 5 SEPTEMBER 2023 ಶಿವಮೊಗ್ಗದಲ್ಲಿ ‘ನಿರಾಕರಣೆʼಗೆ ಉತ್ತಮ ಪ್ರತಿಕ್ರಿಯೆ SHIMOGA : ಹೊಂಗಿರಣ ಸಂಸ್ಥೆ ವತಿಯಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ‘ನಿರಾಕರಣೆʼ ಏಕವ್ಯಕ್ತಿ ರಂಗಪ್ರಯೋಗ ಆಯೋಜಿಸಲಾಗಿತ್ತು. ಲೇಖಕಿ ವೀಣಾ ಶಾಂತೇಶ್ವರಿ ಅವರ ಕಥೆ ಆಧರಿಸಿ ಡಾ. ಸಾಸ್ವೆಹಳ್ಳಿ ಸತೀಶ್‌ ನಿರ್ದೇಶಿಸಿರುವ ನಾಟಕದಲ್ಲಿ ಶೃತಿ ಆದರ್ಶ ಅವರು ಅಭಿನಯಿಸಿದರು. ಏಕವ್ಯಕ್ತಿ ರಂಗ ಪ್ರಯೋಗಕ್ಕೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದನ್ನೂ ಓದಿ – ಅಡಕತ್ತರಿಯಲ್ಲಿ ಶಿವಮೊಗ್ಗದ ಸಾವಿರ ಆಟೋ ಚಾಲಕರು, ಸಾಲ ಕಟ್ಟಲಾಗುತ್ತಿಲ್ಲ, ಜೀವನ ನಿರ್ವಹಣೆ ಮಾಡಲಾಗುತ್ತಿಲ್ಲ … Read more

ನಾದಿನಿ ಮನೆಯಿಂದ ರಾತ್ರಿ ತಮ್ಮ ಮನೆಗೆ ಹಿಂತಿರುಗಿದ ಕುಟುಂಬಕ್ಕೆ ಕಾದಿತ್ತು ಆಘಾತ – 3 ಫಟಾಫಟ್‌ ನ್ಯೂಸ್‌

Doddapete-Police-Station.

SHIVAMOGGA LIVE NEWS | 5 SEPTEMBER 2023 ನಾದಿನಿಯ ಮನೆಯಿಂದ ಹಿಂತಿರುಗುಷ್ಟರಲ್ಲಿ ಮನೆ ಕಳ್ಳತನ SHIMOGA : ನಾದಿನಿಯ ಮನೆಗೆ ಕುಟುಂಬ ಸಹಿತ ಊಟಕ್ಕೆ ತೆರಳಿ ಮಧ್ಯರಾತ್ರಿ ವಾಪಸ್‌ ಬಂದಾಗ ಮನೆಯ ಇಂಟರ್‌ಲಾಕ್‌ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿತ್ತು. ಶಿವಮೊಗ್ಗದ ಹಳೆ ಮಂಡ್ಲಿಯಲ್ಲಿ ಘಟನೆ ಸಂಭವಿಸಿದೆ. ಸಯ್ಯದ್‌ ಅಫ್ರೋಜ್‌ ಎಂಬುವವರ ಮನೆಯ ಇಂಟರ್‌ ಲಾಕ್‌ ಮುರಿದು ಬೀರುವಿನಲ್ಲಿದ್ದ 5.92 ಲಕ್ಷ ರೂ. ಮೊತ್ತದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ. ಹಳೆ ಮಂಡ್ಲಿಯಲ್ಲಿನ ನಾದಿನಿಯ ಮನೆಗೆ ಸಯ್ಯದ್‌ … Read more

ಶಿವಮೊಗ್ಗದ ಉದ್ಯಮಿಗೆ ಕರ್ನಾಟಕ ಸಾಧಕ ಪ್ರಶಸ್ತಿ

040923-Karnataka-Sadhaka-Award-for-Shimoga-Industrialist-1.webp

SHIVAMOGGA LIVE NEWS | 4 SEPTEMBER 2023 RAICHUR : ಉದ್ಯಮಿ, ಶಿವಮೊಗ್ಗದ ಎಸ್‌ಜಿಕೆ ಇಂಡಸ್ಟ್ರೀಸ್ ನಿರ್ದೇಶಕ ಬಿ.ಸಿ. ನಂಜುಂಡ ಶೆಟ್ಟಿ ಅವರಿಗೆ ರಾಜ್ಯ ವಾಣಿಜ್ಯ ಸಂಘಗಳ ಸಮಾವೇಶದಲ್ಲಿ “ಕರ್ನಾಟಕ ಸಾಧಕ ಪ್ರಶಸ್ತಿ” (Karnataka Sadhana Award) ನೀಡಿ ಗೌರವಿಸಲಾಯಿತು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಹಾಗೂ ರಾಯಚೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದಲ್ಲಿ ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ವಾಣಿಜ್ಯ ಸಂಘಗಳ … Read more

ಮಳೆಗಾಗಿ ಹಣಗೆರೆಯಲ್ಲಿ ಪೂಜೆ | ನಾರಾಯಣಗುರು ವಿಚಾರ ವೇದಿಕೆ ಮಹಿಳಾ ಘಟಕ ಅಸ್ತಿತ್ವಕ್ಕೆ – 3 ಫಟಾಫಟ್‌ ನ್ಯೂಸ್‌

Hanagere-Temple-in-Thirthahalli-at-Shimoga

SHIVAMOGGA LIVE NEWS | 4 SEPTEMBER 2023 ನಾರಾಯಣಗುರು ವಿಚಾರ ವೇದಿಕೆ ಮಹಿಳಾ ಘಟಕ SHIMOGA : ನಾರಾಯಣಗುರು ವಿಚಾರ ವೇದಿಕೆ ಜಿಲ್ಲಾ ಮಹಿಳಾ ಘಟಕ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲಾಧ್ಯಕ್ಷರಾಗಿ ಪ್ರಭಾವತಿ ಚಂದ್ರಕಾಂತ್ ಆರೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಾನಸ ಸತೀಶ್, ಖಜಾಂಚಿಯಾಗಿ ನಳಿನಾ ಉಮೇಶ್ ಆಯ್ಕೆಯಾಗಿದ್ದಾರೆ.‌ ಎಸ್‌.ಎನ್‌.ಜಿ.ವಿ ರಾಜ್ಯಾಧ್ಯಕ್ಷ ಸತ್ಯ ಜಿತ್ ಸೂರತ್ಕಲ್ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಗೌರವ ಅಧ್ಯಕ್ಷರಾಗಿ ಗೀತಾಂಜಲಿ ದತ್ತಾತ್ರೇಯ, ಜಯಂತಿ ಕೃಷ್ಣಮೂರ್ತಿ, ಸುಮತಿ ಆರ್. ಪೂಜಾರಿ, ಉಪಾಧ್ಯಕ್ಷರಾಗಿ ಗೀತಾ ರಾಘವೇಂದ್ರ, ಸೀತಮ್ಮ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92ರಷ್ಟು ಭತ್ತ ಬಿತ್ತನೆ ಪೂರ್ಣ, ರೈತರಲ್ಲಿ ಮುಂದುವರೆದ ಆತಂಕ, ಎಲ್ಲೆಲ್ಲಿ ಎಷ್ಟಾಗಿದೆ ಬಿತ್ತನೆ?

Paddy-Sapplings-at-Santekaduru-in-Shimoga.

SHIVAMOGGA LIVE NEWS | 4 SEPTEMBER 2023 SHIMOGA : ಮಳೆ (Rain) ಕೈಕೊಟ್ಟು ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಈ ಮಧ್ಯೆ ಶೇ.92ರಷ್ಟು ಭತ್ತ (paddy) ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ನಾನಾ ಮೂಲದಿಂದ ನೀರಿನ ವ್ಯವಸ್ಥೆ ಮಾಡಿಕೊಂಡು ಬಿತ್ತನೆ ಪೂರ್ಣಗೊಳಿಸಿದ್ದಾರೆ. ಈಗಲು ರೈತರು (Farmers) ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಕೈ ಕೊಟ್ಟಿದೆ. ಇದರಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆಯು ಜಿಲ್ಲೆಯ 72,135 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಕಾರ್ಯ … Read more

ತರಕಾರಿ ಮಂಡಿಗೆ ಎಂಎಲ್‌ಎ ಭೇಟಿ | ನೊಳಂಬ ಸಮಾಜಕ್ಕೆ ನೂತನ ಅಧ್ಯಕ್ಷ – 3 ಫಟಾಫಟ್‌ ನ್ಯೂಸ್‌

040923-MLA-Visited-APMC-Vegetable-Market-in-Shimoga-1.webp

SHIVAMOGGA LIVE NEWS | 5 SEPTEMBER 2023 ತರಕಾರಿ ಮಂಡಿಗೆ ಎಂಎಲ್‌ಎ ಭೇಟಿ SHIMOGA : ವಿನೋಬನಗರದ ಎಪಿಎಂಸಿ (APMC) ತರಕಾರಿ ಮಾರುಕಟ್ಟೆಗೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವ್ಯಾಪಾರಿಗಳು, ರೈತರೊಂದಿಗೆ ಸಮಾಲೋಚನೆ ನಡೆಸಿದರು. ಸಮಸ್ಯೆಗಳನ್ನು ಆಲಿಸಿ ಪರಿಹಾರದ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ವಿಘ್ನೇಶ್ವರ ಸೊಪ್ಪಿನ ಮಂಡಿಯಲ್ಲಿ ಸ್ನೇಹಿತರ ಬಳಗದಿಂದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಡಿ.ಎಸ್‌. ಸೊಪ್ಪು ಚಂದ್ರು, ದಿನೇಶ್‌, ಭಾಸ್ಕರ್‌, ವಾಸು, ಮಂಜಣ್ಣ, ಸಂದೇಶ್‌ ಸೇರಿದಂತೆ ಹಲವರು … Read more

ಶಿವಮೊಗ್ಗದಲ್ಲಿ ಆಟೋಮ್ಯಾಟಿಕ್‌ ದಂಡ, ನಿಮ್ಮ ಗಾಡಿ ಮೇಲೆ ಕೇಸ್‌ ಇದೆಯಾ? ತಿಳಿಯಲು ಇಲ್ಲಿದೆ 2 ಮಾರ್ಗ – JUST ಮಾಹಿತಿ

020923-Shimoga-Traffic-police-and-traffic-camera.webp

SHIVAMOGGA LIVE NEWS | 2 SEPTEMBER 2023 SHIMOGA : ಸಂಚಾರ ನಿಯಮ ಪಾಲಿಸದವರಿಗೆ ಬಿಸಿ ಮುಟ್ಟಿಸಲು ಶಿವಮೊಗ್ಗ ನಗರದಲ್ಲಿ ಆಟೋಮ್ಯಾಟಿಕ್‌ ನೊಟೀಸ್‌ ಜಾರಿ ಮಾಡುವ ವ್ಯವಸ್ಥೆ ಆರಂಭಿಸಲಾಗಿದೆ. ಟ್ರಾಫಿಕ್‌ ರೂಲ್ಸ್‌ (Traffic Rules) ಪಾಲಿಸದ ವಾಹನಗಳ ಪತ್ತೆಗೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಸ್ಮಾರ್ಟ್‌ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಿಗ್ನಲ್‌ ಜಂಪ್‌, ಹೆಲ್ಮೆಟ್‌ ರಹಿತ ಚಾಲನೆ, ಕಾರುಗಳಲ್ಲಿ ಸೀಟ್‌ ಬೆಲ್ಟ್‌ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳನ್ನು ಈ ಕ್ಯಾಮರಾಗಳು ಪತ್ತೆ ಹಚ್ಚುತ್ತವೆ. ಆಟೋಮ್ಯಾಟಿಕ್‌ ಆಗಿ … Read more

ಶಿವಮೊಗ್ಗ ನಗರದ ಹಲವು ಕಡೆ ಸೆ.3ರಂದು ಇಡೀ ದಿನ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 2 SEPTEMBER 2023 SHIMOGA : ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಸೆ.3 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ನಗರದ ವಿವಿಧೆಡೆ ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ (power cut) ಎಂದು ಮೆಸ್ಕಾಂ (mescom) ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಹೊಸಮನೆ, ಜೈಲ್ ರಸ್ತೆ, ಕುವೆಂಪು ರಸ್ತೆ, ಯುನಿಟಿ … Read more