ಹೊಳೆಹೊನ್ನೂರು ಬಳಿ ಡಣಾಯಕಪುರದಲ್ಲಿನ ಮರ್ಡರ್ ಕೇಸ್, ಯುವಕ ಅರೆಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 APRIL 2021 ಕಲ್ಲಿನಿಂದ ಜಜ್ಜಿ ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೃತನ ಸಂಬಂಧಿಯೊಬ್ಬನನ್ನು ಬಂಧಿಸಿದ್ದಾರೆ. ಹಣಕಾಸು ವಿಚಾರವಾಗಿ ಶುರುವಾಗದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ. ಭದ್ರಾವತಿ ತಾಲೂಕು ಡಣಾಯಕಪುರದಲ್ಲಿ ಬಸಪ್ಪ (54) ಎಂಬುವವರ ಹತ್ಯೆ ಮಾಡಲಾಗಿತ್ತು. ಏಪ್ರಿಲ್ 12ರಂದು ರಾತ್ರಿ ಘಟನೆ ಸಂಭವಿಸಿತ್ತು. ಬಸಪ್ಪ ಅವರ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಹೊಳೆಹೊನ್ನೂರು ಠಾಣೆ ಪೊಲೀಸರು, ಡಣಾಯಕಪುರದ ಚೌಡಪ್ಪ (27) … Read more

ಗಾಂಧಿ ಬಜಾರ್ ಸಮೀಪ ಮನೆಯಲ್ಲಿ ಖಾಸಗಿ ಕಾಲೇಜು ಉಪನ್ಯಾಸಕಿ ನೇಣು ಬಿಗಿದು ಸಾವು

Suicide-Hanging-General

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 APRIL 2021 ಖಾಸಗಿ ಕಾಲೇಜೊಂದರ ಉಪನ್ಯಾಸಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಜೆ.ಸ್ವಾತಿ (26) ನೇಣು ಬಿಗಿದುಕೊಂಡ ಉಪನ್ಯಾಸಕಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಂಧಿ ಬಜಾರ್‍ ಬಳಿಯ ತಿಗಳಯ್ಯನ ಕೇರಿಯಲ್ಲಿ ಸ್ವಾತಿ ಅವರ ಮನೆ ಇದೆ. ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494 ವಾಟ್ಸಪ್‍ನಲ್ಲಿ ಸುದ್ದಿಗಾಗಿ … Read more

ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಹೊಳೆಯಲ್ಲಿ ಮುಳುಗಿದ್ದ ಯುವಕ ಸಾವು, ಮೃತದೇಹ ಪತ್ತೆ

130421 Hole Bhairanahalli Youth Drowned in Tunga River 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021 ಹೊಳೆಯಲ್ಲಿ ಸ್ನಾನಕ್ಕೆ ಹೋಗಿ ಕಣ್ಮರೆಯಾಗಿದ್ದ ಯುವಕ ಶವವಾಗಿ ಪತ್ತೆಯಗಿದ್ದಾನೆ. ಯುವಕ ಮುಳುಗಿದ್ದಾನೆ ಎನ್ನಲಾದ ಸ್ಥಳದಿಂದ ಸನಿಹದಲ್ಲೆ ಮೃತದೇಹ ಪತ್ತೆಯಾಗಿದೆ. ಹೊಳೆಭೈರನಹಳ್ಳಿ ಗ್ರಾಮದ ಅರುಣ್ (15) ಮೃತನು. ಸೋಮವಾರ ತನ್ನ ಸ್ನೇಹಿತರೊಂದಿಗೆ ಅರುಣ್ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ಎಂದು ತಿಳಿದು ಬಂದಿದೆ. ಈತ ಈಜಲು ಬಾರದೆ ಹೊಳೆಯಲ್ಲಿ ಮುಳುಗಿರುವ ಶಂಕೆ ಇದೆ. ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಇವತ್ತು ಮಧ್ಯಾಹ್ನ ಮೃತದೇಹ … Read more

ಕಲ್ಲಿನಿಂದ ಮುಖ, ತಲೆಗೆ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ

murder graphical image

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021 ವ್ಯಕ್ತಿಯೊಬ್ಬನ ತಲೆ ಮತ್ತು ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಡಣಾಯಕಪುರ ಗ್ರಾಮದ ನಿವಾಸಿ ಬಸಪ್ಪ (54) ಎಂಬುವವರ ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಕೃತ್ಯ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಯಲ್ಲಿ ಕೃತ್ಯ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿವಮೊಗ್ಗ ಲೈವ್‍ಗೆ … Read more

ಗಾಂಜಾ ಸಾಗಿಸುತ್ತಿದ್ದವರ ಬಳಿ ಹರಿತವಾದ ತಲ್ವಾರ್​​ಗಳು, ಟಿಪ್ಪುನಗರದಲ್ಲಿ ಪೊಲೀಸರ ದಾಳಿ

Tunga Nagara Police station

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 APRIL 2021 ಗಾಂಜಾ ಸಾಗಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ತಲ್ವಾರ್‍ಗಳು ಪತ್ತೆಯಾಗಿವೆ. ತಲ್ವಾರ್, ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ಟಿಪ್ಪುನಗರದಲ್ಲಿ ಕಾರ್ಯಾಚರಣೆ ನಡೆಸಿ, ಅಣ್ಣಾನಗರದ ಅಬ್ದುಲ್ ಮುನಾಫ್‍ (22), ಮಿಳಘಟ್ಟದ ಅಸಾದಿ ಅಲಿಯಾಸ್ ಅಸಾದುಲ್ಲಾ ಖಾನ್ (22), ಮಂಜುನಾಥ ಬಡಾವಣೆಯ ಮಹಮ್ಮದ್ ಅನಾಸ್ (18), ಟಿಪ್ಪುನಗರದ ಸಯ್ಯದ್ ಇಬ್ರತ್ ಖಾನ್ (19), ಸದಾತ್ ಇಮ್ತಿಯಾಜ್ (23) ಮತ್ತು ಗುಲಾಮ್ ನಾಜ್ … Read more

ಹೊಸನಗರ ಪೊಲೀಸರ ಭರ್ಜರಿ ಬೇಟೆ, ಗಾಂಜಾಗಾಗಿ ಕಾರು ಶೋಧಿಸುತ್ತಿದ್ದ ಖಾಕಿ ಪಡೆಗೆ ಕಾದಿತ್ತು ಶಾಕ್

Hosanagara Police Station 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 7 APRIL 2021 ಹೊಸನಗರ ಠಾಣೆ ಪೊಲೀಸರು ದೊಡ್ಡ ಬೇಟೆಯಾಡಿದ್ದಾರೆ. ಕಾರಿನಲ್ಲಿದ್ದ ಲಕ್ಷಾಂತರ ಮೌಲ್ಯದ ಗಾಂಜಾ, ನಾಲ್ಕು ಬಂದೂಕು, ಜೀವಂತ ಗುಂಡುಗಳು, ಮೊಬೈಲ್ ಮತ್ತು ನಗದು ವಶಕ್ಕೆ ಪಡೆದಿದ್ದಾರೆ. ಕಳೂರು ನಂದ್ಯಾಲಕೊಪ್ಪ ಗ್ರಾಮದ ಸುನಿಲ್ (45) ಎಂಬುವವರ ಕಾರಿನಲ್ಲಿ ಗಾಂಜಾ ಇರಿಸಿಕೊಂಡಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರಿಗೆ ಲಕ್ಷಾಂತರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಕಾರಿನಲ್ಲಿತ್ತು ಕೆಜಿಗಟ್ಟಲೆ ಗಾಂಜಾ ಸುನಿಲ್‍ನ ಕಾರಿನಲ್ಲಿ … Read more

ಅವನು ಫೋನ್ ಇಟ್ಟ ಕೆಲವೇ ಕ್ಷಣದಲ್ಲಿ ಭದ್ರಾವತಿ ವ್ಯಕ್ತಿಯ ಅಕೌಂಟ್‌ನಿಂದ 92 ಸಾವಿರ ಮಾಯ

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 APRIL 2021 ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿ ವಂಚಿಸುತ್ತಿದ್ದವರು ಈಗ ಬ್ಯಾಂಕ್ ಅಧಿಕಾರಿ ಎಂದು ತಿಳಿಸಿ, ಭದ್ರಾವತಿ ವ್ಯಕ್ತಿಯೊಬ್ಬರ ಅಕೌಂಟ್‍ನಿಂದ ಹಣ ಲಪಟಾಯಿಸಿದ್ದಾರೆ. ಇದನ್ನೂ ಓದಿ | ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಫೋನ್ ಮಾಡಿ ಹೊಸ ಕಥೆ ಹೆಣೆದು ಮಹಾ ವಂಚನೆ ಸ್ಟೇಟ್ ಬ್ಯಾಂಕ್‍ ಆಫ್‍ ಇಂಡಿಯಾದ ಅಧಿಕಾರಿ ಎಂದು ಭದ್ರಾವತಿ ತಾಲೂಕಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ವಂಚಕನೊಬ್ಬ, 92,200 ರೂ. ಲಪಟಾಯಿಸಿದ್ದಾನೆ. ಇದನ್ನೂ ಓದಿ  | ಹಣ … Read more

ಸಿವಿಲ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಗೆ ನಕಲಿ ಅಭ್ಯರ್ಥಿ, ಬಿತ್ತು ಕೇಸ್

Kote Police Station 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 APRIL 2021 ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿಯ ಬದಲು ಮತ್ತೊಬ್ಬರು ಪರೀಕ್ಷೆ ಬರೆದ ಸಂಬಂಧ, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಪೂಜಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜ ಕಾಲೇಜಿನಲ್ಲಿ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಿತ್ತು. 2020ರ ಸೆಪ್ಟಂಬರ್ 20ರಂದು ನಡೆದ ಪರೀಕ್ಷೆಗೆ ಬೆಳಗಾವಿಯ ರಾಯಭಾಗ ತಾಲೂಕಿನ ಹಿಡ್ಕಲ್ ಗ್ರಾಮದ ಅಕ್ಷಯ್ ಗಲಗಲಿ ಬದಲು ಮತ್ತೊಬ್ಬ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿದ್ದಾನೆ. ಪರಿಶೀಲನೆ ವೇಳೆ … Read more

KSRTC ಕಂಡಕ್ಟರ್ ಮೇಲೆ ಹಲ್ಲೆ, ಕಲೆಕ್ಷನ ಹಣ ಕಳ್ಳತನ, ವಾಟ್ಸಪ್‌ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸಿದವನಿಂದ ಕೃತ್ಯ

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 APRIL 2021 ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹಲ್ಲೆ ನಡೆಸಿ, ಟಿಕೆಟ್ ಕಲೆಕ್ಷನ್ ಹಣವನ್ನು ಕಿಡಿಗೇಡಿಗಳು ಕಿತ್ತೊಯ್ದಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಕಡೂರು ಘಟಕದ ಕೆಎಸ್‌ಆರ್‌ಟಿಸಿ ಬಸ್ಸಿನ ಕಂಡಕ್ಟರ್ ಶಶಿಧರ್ ಮತ್ತು ಚಾಲಕ ದೂದ್ಯನಾಯ್ಕ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಯುನಿಫಾರಂ ಹರಿದು, ಕೊರಳಲ್ಲಿದ್ದ ಚೈನು, ಜೇಬಿನಲ್ಲಿದ್ದ ಟಿಕೆಟ್ ಕಲೆಕ್ಷನ್‍ ಹಣ 18 ಸಾವಿರ ರೂ.ಗಳನ್ನು ಕಿತ್ತೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಶ್ಲೀಲ ವಿಡಿಯೋ … Read more

ತುಂಗಾ ನದಿಯಲ್ಲಿ ಮುಳುಗಿ ತೀರ್ಥಹಳ್ಳಿ ವಕೀಲ ಸಾವು, ವೈರಲ್ ಆಯ್ತು ವರ್ಷದ ಹಿಂದಿನ ಫೇಸ್ಬುಕ್ ಪೋಸ್ಟ್

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 2 APRIL 2021 ತುಂಗಾ ನದಿಯಲ್ಲಿ ಈಜಲು ಹೋಗಿದ್ದ ವಕೀಲರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕುಶಾವತಿ ಪಾರ್ಕ್‍ ಹಿಂಭಾಗ ತುಂಗಾ ನದಿಯಲ್ಲಿ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಜೆಎಂಎಫ್‍ಸಿ ಕೋರ್ಟ್‍ನಲ್ಲಿ ವಕೀಲರಾಗಿದ್ದ ಸಂದೇಶ್ ಕುಮಾರ್ ಮೃತರು. ಗುರುವಾರ ಸಂದೇಶ್ ಅವರು ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ  ಅವಘಡ ಸಂಭವಿಸಿದೆ. ವರ್ಷದ ಹಿಂದಿನ ಪೋಸ್ಟ್ ವೈರಲ್ ಸಂದೇಶ್ ಅವರು ಮೃತರಾದ ವಿಚಾರ ತಿಳಿಯುತ್ತಿದ್ದಂತೆ ವಕೀಲರ ಸಮೂಹ ಕಂಬನಿ ಮಿಡಿಯಿತು. … Read more