ಶಿವಮೊಗ್ಗ ಪೊಲೀಸರ ದಿಢೀರ್‌ ಕಾರ್ಯಾಚರಣೆ, ರೌಡಿಗಳ ಮನೆಗಳ ಮೇಲೆ ದಾಳಿ

Police-raid-on-rowdy-houses-in-Shimoga-district

ಶಿವಮೊಗ್ಗ: ಜಿಲ್ಲೆಯಾದ್ಯಂತ ಇಂದು ಬೆಳಗಿನ ಜಾವ ಪೊಲೀಸರು ರೌಡಿಗಳ ಮನೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್‌ ಕಾರ್ಯಾಚರಣೆ (raid) ನಡೆಸಿದ ಪೊಲೀಸರು, ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ರೌಡಿಗಳ ಮನೆಗಳಲ್ಲಿ ಮಾದಕ ವಸ್ತುಗಳು, ಮಾರಕಾಸ್ತ್ರಗಳಿಗಾಗಿ ಶೋಧ ನಡೆಸಲಾಯಿತು. ಅಲ್ಲದೆ ರೌಡಿಗಳು ಮಾಡುತ್ತಿರುವ ಕೆಲಸ ಸೇರಿದಂತೆ ಪ್ರಮುಖ ಮಾಹಿತಿ ಸಂಗ್ರಹಿಸಲಾಯಿತು. ಕಾನೂನು ಬಾಹಿರ ಚುಟವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಎಎಸ್‌ಪಿಗಳಾದ ಅನಿಲ್‌ … Read more

ಸೋಮಿನಕೊಪ್ಪದಲ್ಲಿ ವಿದ್ಯುತ್‌ ಶಾಕ್‌ಗೆ ಕಾರ್ಮಿಕ ಸಾವು, ಹೇಗಾಯ್ತು ಘಟನೆ?

crime name image

ಶಿವಮೊಗ್ಗ: ಕಟ್ಟಡಕ್ಕೆ ಕಬ್ಬಿಣದ ರಾಡ್‌ಗಳನ್ನು ಎಳೆಯುವಾಗ ಪಕ್ಕದಲ್ಲಿ ಹಾದು ಹೊಗಿದ್ದ ವಯರ್‌ ತಗುಲಿ ವಿದ್ಯುತ್‌ ಶಾಕ್‌ಗೆ (electrocution) ಕಾರ್ಮಿಕ ಸಾವನ್ನಪ್ಪಿದ್ದಾನೆ. ಸೋಮಿನಕೊಪ್ಪದ ನಿವಾಸಿ ನಿಜಾಮುಲ್‌ ಹಕ್‌ (32) ಮೃತ ವ್ಯಕ್ತಿ. ಜೆ.ಹೆಚ್‌.ಪಟೇಲ್‌ ಬಡಾವಣೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕೆ ನಿಜಾಮುಲ್‌ ಹಕ್‌ ತೆರಳಿದ್ದರು. ನೆಲದಿಂದ ಎರಡನೇ ಮಹಡಿಗೆ ಕಬ್ಬಿಣದ ರಾಡ್‌ಗಳನ್ನು ಎಳೆಯುವಾಗ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್‌ ತಂತಿಗೆ ಕಬ್ಬಿಣದ ರಾಡ್‌ ತಗುಲಿದೆ. ವಿದ್ಯುತ್ ಪ್ರವಹಿಸಿ ನಿಜಾಮುಲ್‌ ಹಕ್‌ ಅವರಿಗೆ ಶಾಕ್‌ ತಗುಲಿತ್ತು. ಕೂಡಲೆ ಅವರನ್ನು ಮೆಗ್ಗಾನ್‌ … Read more

ನಿರ್ಮಾಣ ಹಂತದ ಸರ್ಕಾರಿ ನೌಕರರ ಭವನಕ್ಕೆ ಮಧ್ಯಾಹ್ನ ಬಂದ ಸೂಪರ್‌ವೈಸರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಕೆ.ಇ.ಬಿ ಸರ್ಕಲ್‌ ಸಮೀಪ ನಿರ್ಮಾಣ ಹಂತದ ಸರ್ಕಾರಿ ನೌಕರರ ಭವನದ ಕೊಠಡಿಯಲ್ಲಿದ್ದ 1.35 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಲ್‌ ವಯರ್‌ (Wire) ಕಳ್ಳತನ ಮಾಡಲಾಗಿದೆ. ಪ್ಲೇವುಡ್‌, ಮರಳು ಜಾಡಿಸುವ ಜಾಲರಿಯಿಂದ ಮುಚ್ಚಿದ್ದ ಮೇಲ್ಛಾವಣಿ ತೆಗೆದು 27 ಬಾಕ್ಸ್‌ ವಯರ್‌ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಏ.30ರ ರಾತ್ರಿ 29 ಬಂಡಲ್‌ ವಯರ್‌ಗಳನ್ನು ತಂದು ಇರಿಸಲಾಗಿತ್ತು. ಮರುದಿನ ಮಧ್ಯಾಹ್ನ ಸೂಪರ್‌ ವೈಸರ್‌ ಸ್ಥಳಕ್ಕೆ ಬಂದಾಗ ವಯರ್‌ ಕಳುವಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ … Read more

ಹೊಸನಗರದಲ್ಲಿ ದೇವರ ಕಾರ್ಯದ ವೇಳೆ ಕಲಹ, ವ್ಯಕ್ತಿಯ ಕೊಲೆ

Hosanagara-News-Update

ಹೊಸನಗರ: ದೇವರ ಕಾರ್ಯದ ಸಂದರ್ಭ ಕಲಹವಾಗಿ ವ್ಯಕ್ತಿಯೊಬ್ಬನ (Person) ಹತ್ಯೆ ಮಾಡಲಾಗಿದೆ. ಹೊಸನಗರ ತಾಲೂಕು ನಿಟ್ಟೂರು ಕರ್ಕಮುಡಿಯಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರಸ್ತೆ ಪಕ್ಕದ ತೋಟಕ್ಕೆ ಹಾರಿ ಉಲ್ಟಾ ಬಿದ್ದ ಆಟೋ, ಐವರಿಗೆ ಗಾಯ ದೇವಿಚಂದ್ರ (52) ಮೃತ ವ್ಯಕ್ತಿ. ದೇವಿಚಂದ್ರನ ಪತ್ನಿಯ ಸಹೋದರ ಮತ್ತು ಪತ್ನಿಯ ಮೊದಲ ಪತಿಯ ಪುತ್ರ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಓಂಕಾರ್‌ ಮನೆ ಸಮೀಪ ನಾಗಚೌಡಿ ದೇವಸ್ಥಾನದಲ್ಲಿ ಪೂಜೆ ಕಾರ್ಯವಿತ್ತು. ದೇವಿಚಂದ್ರ ಕೂಡ … Read more

KSRTC ಬಸ್‌ ಹತ್ತಿ ಟಿಕೆಟ್‌ ಮಾಡಿಸಲು ಜೇಬಿಗೆ ಕೈ ಹಾಕಿದ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-General-Image

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ಹತ್ತುವಾಗ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ 50 ಸಾವಿರ ರೂ. ಹಣ (Money) ಕಳ್ಳತನ ಮಾಡಲಾಗಿದೆ. ಗೋಪಾಳದ ಪರಮೇಶ್ವರಪ್ಪ ಎಂಬುವವರ ಜೇಬಿನಲ್ಲಿದ್ದ ಹಣ ಕಳುವಾಗಿದೆ. ಪರಮೇಶ್ವರಪ್ಪ ಕೃಷಿ ಪಂಪ್‌ ಸೆಟ್‌ ಖರೀದಿಗೆಂದು ಬ್ಯಾಂಕ್‌ನಿಂದ 50 ಸಾವಿರ ರೂ. ಹಣ ಬಿಡಿಸಿಕೊಂಡು ಬಂದಿದ್ದರು. ಹೊನ್ನಾಳಿಗೆ ತೆರಳಬೇಕಿದ್ದರಿಂದ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್‌ ಹತ್ತುವಾಗ ರಶ್‌ ಇತ್ತು. ಆದರೂ ಪರಮೇಶ್ವರಪ್ಪ ಅವರು ಬಸ್‌ ಏರಿ, ಸೀಟ್‌ ಹಿಡಿದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.   ಬಸ್ಸು ನಿಲ್ದಾಣದಿಂದ … Read more

ಕೇರಳ ಬಂಪರ್‌ ಲಾಟರಿ, ರಿಯಲ್‌ ಎಸ್ಟೇಟ್‌ ಉದ್ಯಮಿಗೆ 12 ಲಕ್ಷ ರೂ. ಬಹುಮಾನ, ಆಮೇಲೆ ಕಾದಿತ್ತು ಆಘಾತ

Online-Fraud-Case-image

ಶಿವಮೊಗ್ಗ: ಕೇರಳ ಲಾಟರಿಯಲ್ಲಿ (Lottery) 12 ಲಕ್ಷ ರೂ. ಗೆದ್ದಿದ್ದೀರ ಎಂದು ನಂಬಿಸಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರಿಗೆ 17.55 ಲಕ್ಷ ರೂ. ವಂಚಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಕೇರಳ ಲಾಟರಿ ಟಿಕೆಟ್‌ ಆನ್‌ಲೈನ್‌ ಮಾರಾಟ ಎಂದು ನಂಬಿಸಲಾಗಿತ್ತು. ರಿಯಲ್‌ ಎಸ್ಟೇಟ್‌ ಉದ್ಯಮಿಯು ಫೇಸ್‌ಬುಕ್‌ ವೀಕ್ಷಿಸುತ್ತಿದ್ದಾಗ ಕೇರಳ ಬಂಪರ್‌ ಲಾಟರಿ ಖರೀದಿಸಿದರೆ ಮೊದಲ ಬಹುಮಾನ 50 ಲಕ್ಷ ರೂ., ಎರಡನೇ ಬಹುಮಾನ 25 ಲಕ್ಷ ರೂ., ಮೂರನೇ ಬಹುಮಾನ 12 ಲಕ್ಷ ರೂ. ಎಂದು ಜಾಹೀರಾತು ಪ್ರಕಟಿಸಲಾಗಿತ್ತು. ಅದನ್ನು ಕ್ಲಿಕ್‌ … Read more

ಶಿವಮೊಗ್ಗದಲ್ಲಿ ಬೆಳಗಿವ ಜಾವ ಬಸ್‌ ಹತ್ತಿದ ಮಹಿಳೆ, ಸ್ವಲ್ಪ ದೂರ ಹೋದ್ಮೇಲೆ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

ಶಿವಮೊಗ್ಗ: ಬೆಳಗಿನ ಜಾವ ಬಸ್‌ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಬಂಗಾರದ ನೆಕ್ಲೇಸ್‌ (necklace) ಇದ್ದ ಬಾಕ್ಸ್‌ ಕಳ್ಳತನ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕೃತ್ಯ ನಡೆದಿದೆ. ಭದ್ರಾವತಿಯ ಮುಕ್ತ ಎಂಬುವವರಿಗೆ ಸೇರಿದ ನೆಕ್ಲೇಸ್‌ ಕಳುವಾಗಿದೆ. ಕುಟುಂಬ ಸಹಿತ ಹುಬ್ಬಳ್ಳಿಗೆ ತೆರಳಲು ಬೆಳಗಿನ ಜಾವ 5 ಗಂಟೆಗೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್‌ ಹತ್ತಿದ್ದರು. ಬಸ್ಸು ಶಿವಮೊಗ್ಗದ ಹೊನ್ನಾಳಿ ರಸ್ತೆಯ ಮೇಲ್ಸೇತುವೆ ಬಳಿ ತೆರಳುವಾಗ, ಮುಕ್ತ ಅವರು ಮಕ್ಕಳಿಗೆ ಕರೆ ಮಾಡಲು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲ್‌ಗೆ ತೆಗೆಯಲು ಮುಂದಾದರು. … Read more

ಮದುವೆ ಸಮಾರಂಭ ಮುಗಿಸಿ ಕಲ್ಯಾಣ ಮಂಟಪದ ರೂಮ್‌ಗೆ ಬಂದ ಕುಟುಂಬಕ್ಕೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಕಲ್ಯಾಣ ಮಂಟಪದ ಕೊಠಡಿಯಲ್ಲಿ ಇಟ್ಟಿದ್ದ ಬ್ಯಾಗ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ (gold) ಕಳ್ಳತನವಾಗಿದೆ. ನಗರದ ಮದಾರಿಪಾಳ್ಯದ ಹೆವೆನ್‌ ಪ್ಯಾಲೆಸ್‌ ಕಲ್ಯಾಣ ಮಂಟಪದಲ್ಲಿ ಘಟನೆ ಸಂಭವಿಸಿದೆ. ಅರಸೀಕೆರೆಯ ಮೆಹಬೂಬ ಪಾಷಾ ಅವರ ಕುಟುಂಬ, ಸಂಬಂಧಿಯ ಮದುವೆಗೆ ಬಂದಿದ್ದರು. ಕಲ್ಯಾಣ ಮಂಟಪದ ಕೊಠಡಿಯಲ್ಲಿ ಬ್ಯಾಗ್‌ಗಳನ್ನು ಇರಿಸಿ, ಸಭಾಂಗಣಕ್ಕೆ ತೆರಳಿದ್ದರು. ರಾತ್ರಿ ಕೊಠಡಿಗೆ ಹಿಂತಿರುಗಿದಾಗ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಬಂಗಾರದ ಮಾಂಗಲ್ಯ ಸರ, ಚಿನ್ನದ ಸರ ಮತ್ತು ಪೆಂಡೆಂಟ್‌, ಉಂಗುರಗಳು, ಮಕ್ಕಳ ಉಂಗುರಗಳು, ಕಿವಿ ಓಲೆಗಳು ಸೇರಿ … Read more

ಶಿವಮೊಗ್ಗದ ಸಿಟಿ ಸೆಂಟರ್‌ ಮಾಲ್‌ ಬಳಿ ಹೋಮ್‌ ಗಾರ್ಡ್‌ ಮೇಲೆ ಹಲ್ಲೆ, ಆಟೋ ಚಾಲಕ ಅರೆಸ್ಟ್‌, ಏನಿದು ಕೇಸ್‌?

auto-driver-attacks-home-guard.

ಶಿವಮೊಗ್ಗ: ನೋ ಪಾರ್ಕಿಂಗ್‌ ಜಾಗದಲ್ಲಿ ಆಟೋ ನಿಲ್ಲಿಸದಂತೆ ಸೂಚಿಸಿದ ಹೋಂ ಗಾರ್ಡ್‌ (Home Guard) ಮೇಲೆ ಚಾಲಕನೊಬ್ಬ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದ ಸಿಟಿ ಸೆಂಟರ್‌ ಮಾಲ್‌ ಪಕ್ಕದ ಬಸ್‌ ಸ್ಟಾಪ್‌ ಬಳಿ ಘಟನೆ ಸಂಭವಿಸಿದೆ. ಪಶ್ಚಿಮ ಸಂಚಾರ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹೋಂ ಗಾರ್ಡ್‌ ನಾಗರಾಜ ನಾಯ್ಕ್‌ ಮೇಲೆ ಹಲ್ಲೆಯಾಗಿದೆ. ಪ್ರಕರಣ ಸಂಬಂಧ ಆಟೋ ಚಾಲಕ ಮನೋಜ್‌ ಎಂಬಾತನನ್ನು ಬಂಧಿಸಲಾಗಿದೆ. ನೋ ಪಾರ್ಕಿಂಗ್‌ನಲ್ಲಿ ಆಟೋ ಸಿಟಿ ಸೆಂಟರ್‌ ಪಕ್ಕದಲ್ಲಿ ಶಾಸಕರ … Read more

ಓಮ್ನಿ ಕಾರು ಅಡ್ಡಗಟ್ಟಿ ಲಕ್ಷ ಲಕ್ಷದ ಗುಜರಿ ವಸ್ತು ದರೋಡೆ, ನಾಲ್ವರು ಅರೆಸ್ಟ್‌, ಏನಿದು ಕೇಸ್‌?

Scrap-theft-case-four-arrested-by-bhadravathi-police

ಭದ್ರಾವತಿ : ಕಾರು ಅಡ್ಡಗಟ್ಟಿ 3.50 ಲಕ್ಷ ರೂ. ಮೌಲ್ಯದ ತಾಮ್ರ ಮತ್ತು ಹಿತ್ತಾಳೆಯ ಗುಜರಿ (Scrap) ವಸ್ತುಗಳನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಗುಜರಿ ವಸ್ತುಗಳು ಸೇರಿ ಒಟ್ಟು 7.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ » ಕೆಎಫ್‌ಡಿ ಸೋಂಕು, ತೀರ್ಥಹಳ್ಳಿಯ ಬಾಲಕ ಮಣಿಪಾಲದಲ್ಲಿ ಸಾವು ಭದ್ರಾವತಿ ಹೊಸಮನೆಯ ಭೋವಿ ಕಾಲೋನಿಯ ಕವಿರಾಜ್‌ (21), ಶಿವಮೊಗ್ಗದ ಮೇಲಿನ ತುಂಗಾನಗರದ ಮುಬಾರಕ್‌ (24), ಭದ್ರಾವತಿ ಬಾರಂದೂರಿನ ಅಜಿತ್‌ ಅಲಿಯಾಸ್‌ … Read more