ಸಂಕ್ರಾಂತಿಗೆ ಯಶವಂತಪುರ – ತಾಳಗುಪ್ಪ ಮಧ್ಯೆ ಎರಡು ವಿಶೇಷ ರೈಲು, ಯಾವ್ಯಾವ ದಿನ? ಟೈಮಿಂಗ್‌ ಏನು?

Train-Jan-Shatabdi-General-Image

ಬೆಂಗಳೂರು: ಸಂಕ್ರಾಂತಿ ಹಬ್ಬದ ಸಂದರ್ಭ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಿಕೊಡಲು ನೈರುತ್ಯ ರೈಲ್ವೆಯು ಯಶವಂತಪುರ ಮತ್ತು ತಾಳಗುಪ್ಪ ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು (Special Train) ಓಡಿಸಲು ನಿರ್ಧರಿಸಿದೆ. ಜನವರಿ 13 ಮತ್ತು ಜನವರಿ 23ರಂದು ರಾತ್ರಿ 10.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 4.45ಕ್ಕೆ ತಾಳಗುಪ್ಪ ತಲುಪಲಿದೆ. ಜನವರಿ 14 ಮತ್ತು 24ರಂದು ಬೆಳಿಗ್ಗೆ 10ಕ್ಕೆ ತಾಳಗುಪ್ಪದಿಂದ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ. ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, … Read more

ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

Electric-Locomotive-train-for-Shimoga

ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ಇಲಾಖೆಯು ಜನವರಿ 1ರಿಂದ ಹಲವು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಶಿವಮೊಗ್ಗ – ಬೆಂಗಳೂರು ಮಧ್ಯೆ ಸಂಚರಿಸುವ ಕೆಲವು ರೈಲುಗಳ ವೇಳಾಪಟ್ಟಿಯಲ್ಲಿಯು ಬದಲಾವಣೆಯಾಗಿದೆ. ಅವುಗಳ ವೇಳಾಪಟ್ಟಿ (train timings) ಇಲ್ಲಿದೆ. ಶಿವಮೊಗ್ಗ – ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12090) ವಾರದ ಎಲ್ಲ ದಿನವು ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಮಜೆಸ್ಟಿಕ್‌ ರೈಲ್ವೆ ನಿಲ್ದಾಣ ತಲುಪಲಿದೆ. ಭದ್ರಾವತಿಗೆ 5.31ಕ್ಕೆ ತಲುಪಿ 5.33ಕ್ಕೆ ಹೊರಡಲಿದೆ. ತರೀಕೆರೆ (5.50/5.51), ಬೀರೂರು … Read more

BREAKING NEWS – ಶಿವಮೊಗ್ಗದ ಒಂದು ರೈಲು ಜನವರಿ 4ರಂದು ರದ್ದು

Train-Jan-Shatabdi-General-Image

ರೈಲ್ವೆ ಸುದ್ದಿ: ಶಿವಮೊಗ್ಗ ಟೌನ್ ಮತ್ತು ಕುಂಸಿ ನಿಲ್ದಾಣಗಳ ಮಧ್ಯೆ ಕೋಟೆಗಂಗೂರು ನಿಲ್ದಾಣದಲ್ಲಿ ಮುಖ್ಯ ಮಾರ್ಗದ ಪುನರ್ ನಿರ್ಮಾಣ ಕೆಲಸ ನಡೆಯುತ್ತಿದೆ. ಇದರ ಹಿನ್ನೆಲೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಮಾಡಲಾಗುತ್ತಿದೆ. ಹಾಗಾಗಿ ಒಂದ ರೈಲು ಸೇವೆಯನ್ನು ಒಂದು ದಿನ ರದ್ದುಪಡಿಸಲಾಗಿದೆ (train cancelled). ಇದನ್ನೂ ಓದಿ » ತಾಳಗುಪ್ಪ, ಶಿವಮೊಗ್ಗದ ಹಲವು ರೈಲುಗಳ ಸಮಯ ಬದಲಾವಣೆ, ಇಲ್ಲಿದೆ ಲಿಸ್ಟ್‌ ತಾಳಗುಪ್ಪ–ಶಿವಮೊಗ್ಗ ಟೌನ್ ಪ್ಯಾಸೆಂಜರ್ (ರೈಲು ಸಂಖ್ಯೆ 56217) ಹಾಗೂ ಶಿವಮೊಗ್ಗ ಟೌನ್–ತಾಳಗುಪ್ಪ ಪ್ಯಾಸೆಂಜರ್ (ರೈಲು ಸಂಖ್ಯೆ … Read more

ತಾಳಗುಪ್ಪ, ಶಿವಮೊಗ್ಗದ ಹಲವು ರೈಲುಗಳ ಸಮಯ ಬದಲಾವಣೆ, ಇಲ್ಲಿದೆ ಲಿಸ್ಟ್‌

Train-Timing-Changed - Shivamogga Trains

ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ವ್ಯಾಪ್ತಿಯ 414 ರೈಲುಗಳು ವಿವಿಧೆಡೆ ನಿಲುಗಡೆ ಮತ್ತು ಹೊರಡುವ ಸಮಯ ಬದಲಾಗಿದೆ. ಈ ಪೈಕಿ ಶಿವಮೊಗ್ಗದ 16 ರೈಲುಗಳು (Shivamogga trains) ಇವೆ. ಯಶವಂತಪುರ – ಶಿವಮೊಗ್ಗ ಸೂಪರ್‌ ಫಾಸ್ಟ್‌ (ರೈಲು ಸಂಖ್ಯೆ 20689(16579): ಜನವರಿ 1ರಿಂದ ತುಮಕೂರಿಗೆ ಬೆಳಗ್ಗೆ 10.05ಕ್ಕೆ ತಲುಪಲಿದ್ದು 10.07ಕ್ಕೆ ಹೊರಡಲಿದೆ. ಅದೇ ರೀತಿ ತಿಪಟೂರು 10.52/10.54, ಅರಸಿಕೆರೆ 11.15/11.20, ಕಡೂರು 11.50/11.52, ಬೀರೂರು 12.02/12.04, ತರೀಕೆರೆ 12.30/12.32, ಭದ್ರಾವತಿ 12.50/12.52 ತಲುಪಲಿದೆ. ಶಿವಮೊಗ್ಗ – ತುಮಕೂರು … Read more

ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲುಗಳ ಪ್ರಯಾಣ ಅವಧಿ ಕಡಿತ, ಯಶವಂತಪುರ ರೈಲಿನ ವೇಳಾಪಟ್ಟಿ ಬದಲು

Shimoga-Janshatabdi-train-speed-up

ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ನೂತನ ವೇಳಾಪಟ್ಟಿ ಪ್ರಕಟಿಸಿದೆ. ಜನವರಿ 1ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರಲಿದೆ. ಅದರಂತೆ ಶಿವಮೊಗ್ಗದ ಕೆಲವು ರೈಲುಗಳ (Shivamogga trains) ಪ್ರಯಾಣ ಅವಧಿ ಕಡಿತವಾಗಲಿದೆ. ನಿಗದಿಗಿಂತಲು ಕೆಲವು ನಿಮಿಷ ಬೇಗ ನಿಲ್ದಾಣಗಳನ್ನು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಾವ್ಯಾವ ರೈಲು? ಏನೇನು ಬದಲಾವಣೆ? ರೈಲುಗಳ ಪ್ರಯಾಣ ಅವಧಿ ಕಡಿತ ನೈಋತ್ಯ ರೈಲ್ವೆ ವ್ಯಾಪ್ತಿಯ 123 ರೈಲುಗಳು ಸ್ಪೀಡ್‌ ಆಗಲಿವೆ. ಈ ಪೈಕಿ ಶಿವಮೊಗ್ಗ ಜಿಲ್ಲೆಗೆ ಸೇರಿದ ರೈಲುಗಳು ಇವೆ. ಅವುಗಳ ಪಟ್ಟಿ … Read more

ಶಿವಮೊಗ್ಗದ ಎರಡು ಎಕ್ಸ್‌ಪ್ರೆಸ್‌ ರೈಲುಗಳು ಇನ್ಮುಂದೆ ಸೂಪರ್‌ ಫಾಸ್ಟ್‌ ರೈಲುಗಳು, ಯಾವ್ಯಾವ ರೈಲು?

Super-Fast-Trains-for-Shivamogga

ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ಪರಿಷ್ಕೃತ ಟೈಮ್‌ಟೇಬಲ್‌ ಬಿಡುಗಡೆ ಮಾಡಿದೆ. 2026ರ ಜನವರಿ 1ರಿಂದ ಇದು ಜಾರಿಗೊಳ್ಳಲಿದೆ. ಈ ವೇಳಾಪಟ್ಟಿಯ ಪ್ರಕಾರ ನೈಋತ್ಯ ರೈಲ್ವೆಯ 16 ಎಕ್ಸ್‌ಪ್ರೆಸ್‌ ರೈಲುಗಳನ್ನು ಸೂಪರ್‌ ಫಾಸ್ಟ್‌ ರೈಲುಗಳಾಗಿ (Superfast Trains) ಪರಿವರ್ತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಕೆಲವು ರೈಲುಗಳನ್ನು ಸೂಪರ್‌ ಫಾಸ್ಟ್‌ ರೈಲುಗಳಾಗಿ ಪರಿವರ್ತಿಸಲಾಗಿದೆ.   ಸೂಪರ್‌ ಫಾಸ್ಟ್‌ ಆಗಲಿರುವ ರೈಲುಗಳು » TRAIN 1 ಎಂಜಿಆರ್‌ ಚೆನ್ನೈ – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 12691) ಜನವರಿ 2ರಿಂದ ಸೂಪರ್‌ ಫಾಸ್ಟ್‌ … Read more

ಬಸ್‌ ಪಾಸ್‌ ನವೀಕರಣಕ್ಕೆ ಅರ್ಜಿ ಸಲ್ಲಿಕೆಗೆ ಸೂಚನೆ, ಹೇಗೆ ಸಲ್ಲಿಸಬೇಕು? ಏನೆಲ್ಲ ದಾಖಲೆ ಬೇಕು?

ksrtc-news-update-thumbnail.webp

ಶಿವಮೊಗ್ಗ: ಅಂಗವಿಕಲರಿಗೆ 2026ನೇ ಸಾಲಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್‌ಗಳ (bus passes) ವಿತರಣೆ ಹಾಗೂ ನವೀಕರಣಕ್ಕೆ ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿ.30ರಿಂದ ಫೆ.28ರವರೆಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಹೊಸದಾಗಿ ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂಬ ಕೌಂಟರ್ ಆಯ್ಕೆ ಮಾಡಿಕೊಳ್ಳಬೇಕು. 2025ನೇ ಸಾಲಿನಲ್ಲಿ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಬೇಕು. ಇದನ್ನೂ ಓದಿ » ಹೋಂ ಸ್ಟೇ ಮಾಲೀಕ, ರೂಂ … Read more

ತಾಳಗುಪ್ಪ – ಬೆಂಗಳೂರು ರೈಲು ಅರಸೀಕೆರೆವರೆಗೆ ಮಾತ್ರ, ಯಶವಂತಪುರ ಎಕ್ಸ್‌ಪ್ರೆಸ್‌ಗೆ ಬದಲಿ ಮಾರ್ಗ

Electric-Locomotive-train-for-Shimoga

ರೈಲ್ವೆ ಸುದ್ದಿ: ವಿವಿಧ ಕಾಮಗಾರಿಗಳ ಹಿನ್ನೆಲೆ ತಾಳಗುಪ್ಪ – ಬೆಂಗಳೂರು ಸೂಪರ್‌ ಫಾಸ್ಟ್‌ ರೈಲನ್ನು ಅರಸೀಕರೆವರೆಗೆ ನಿಯಂತ್ರಿಸಲಾಗುತ್ತಿದೆ. ಇನ್ನು ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲು (Trains) ಬದಲಿ ಮಾರ್ಗಗದಲ್ಲಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರತಿದಿನ ಬೆಳಗ್ಗೆ 5.20ಕ್ಕೆ ಹೊರಡುವ ತಾಳಗುಪ್ಪ – ಬೆಂಗಳೂರು ಸೂಪರ್‌ ಫಾಸ್ಟ್‌ ರೈಲು (ರೈಲು ಸಂಖ್ಯೆ 20652) ನಾಲ್ಕು ದಿನ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತಿದೆ. ಈ ರೈಲು ಡಿಸೆಂಬರ್‌ 17, 20, 21 ಮತ್ತು 24ರಂದು ಈ … Read more

ರೈಲ್ವೆ ಪ್ರಯಾಣಿಕರೆ ಗಮನಿಸಿ, ರಾಜ್ಯದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ, ಯಾವಾಗ?

Prayanikare-Gamanisi-Indian-Railway-News

ರೈಲ್ವೆ ಸುದ್ದಿ: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ವಿವಿಧ ಇಂಜಿನಿಯರಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್‌ವೇನಲ್ಲಿ ಗಾರ್ಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ, ಹಾಗೂ ನಿಡವಂದ ಮತ್ತು ಹಿರೇಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್–28 ರಲ್ಲಿನ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ವಿವಿಧ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ (Train) ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಯಾವೆಲ್ಲ ರೈಲುಗಳ ರದ್ದಾಗಲಿವೆ? ಡಿ.17 ಮತ್ತು ಡಿ.24ರಂದು ರೈಲು ಸಂಖ್ಯೆ 16239 … Read more

ಶಿವಮೊಗ್ಗ, ಹುಬ್ಬಳ್ಳಿ ಜನಶತಾಬ್ದಿ ರೈಲುಗಳ ಕುರಿತು ನೈಋತ್ಯ ರೈಲ್ವೆಯಿಂದ ಮಹತ್ವದ ಅಪ್‌ಡೇಟ್‌

shimoga-to-bangalore-jan-shatabdi-train-railway.webp

ರೈಲ್ವೆ ಸುದ್ದಿ: ಶಿವಮೊಗ್ಗ ಮತ್ತು ಹುಬ್ಬಳ್ಳಿ ಜನಶತಾಬ್ದಿ (Jan Shatabdi) ರೈಲುಗಳು ತಿಪಟೂರು ನಿಲ್ದಾಣದಲ್ಲಿ ನೀಡುತ್ತಿದ್ದ ನಿಲುಗಡೆ ಅವಧಿಯನ್ನು ಮತ್ತೆ ಮುಂದುವರೆಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ತಿಪಟೂರು ನಿಲ್ದಾಣದಲ್ಲಿ ರೈಲು ಸಂಖ್ಯೆ 12079/12080 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ ಮತ್ತು 12089/12090 ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ ಟೌನ್ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ … Read more