ಭದ್ರಾವತಿಗೆ ಬಂದಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ ಡಿಕೆಶಿ

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರಕ್ಕೆ ಬರುತ್ತಿದ್ದಂತೆ, ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಭದ್ರಾವತಿ ಹೆಲಿಪ್ಯಾಡ್’ಗೆ ಬಂದಿಳಿಯುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು. ವ್ಯಕ್ತಿ ನಿಷ್ಠೆಗಿಂತಲೂ ಪಕ್ಷ ನಿಷ್ಠೆ ಮುಖ್ಯ ಅಂದರು. ನಾಳೆಯಿಂದ ಒಂದೇ ಕಾರಲ್ಲಿ ಹೋಗಬೇಕು ತೀರ್ಥಹಳ್ಳಿ ಮತ್ತು ಭದ್ರಾವತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಡುವೆ ಸಮನ್ವಯತೆಯಿಲ್ಲ, ನಾಯಕರು ಒಟ್ಟಾಗಿ ಪ್ರಚಾರ ನಡೆಸುವುದಿಲ್ಲ ಎಂದು ಬಹಿರಂಗ … Read more

ಭದ್ರಾವತಿ ಮೆಸ್ಕಾಂಗೆ ಬಿಜೆಪಿ ಕಾರ್ಯಕರ್ತ ಅಂತಾ ಪತ್ರ, ಜ.30ರಂದು ಬಾಂಬ್ ಇಡ್ತೀವಿ ಅಂತಾ ಬೆದರಿಕೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | 29 ಮಾರ್ಚ್ 2019 ಜನವರಿ 30ರಂದು ಟಿವಿಯಲ್ಲಿ ಯಶ್ ಅಭಿನಯನದ ಕೆಜಿಎಫ್ ಚಲನಚಿತ್ರ ಪ್ರಸಾರವಾಗುತ್ತಿದೆ. ಈ ವೇಳೆ ರಾಜಕೀಯ ಕುಮ್ಮಕ್ಕಿನಿಂದ ಕರೆಂಟ್ ತೆಗೆದರೆ ನಿಮ್ಮ ಕಚೇರಿಗೆ ಬೆಂಕಿ ಹಾಕುತ್ತೇವೆ. ನಿಮ್ಮ ಜೀವ ಹೋಗುತ್ತದೆ ಎಂದು ಪುಡಾರಿಗಳು ಕೆಇಬಿ ಹಾಗೂ ಮೆಸ್ಕಾಂ ಕಚೇರಿಗೆ ಬೆದರಿಕೆ ಪತ್ರ ಬರೆದಿದ್ದಾರೆ. ಭದ್ರಾವತಿಯ ಕೆಇಬಿ ಕಚೇರಿಗೆ ಅಂಚೆ ಪತ್ರ ಬರೆಯಲಾಗಿದ್ದು, ಚಲನಚಿತ್ರ ಪ್ರಸಾರವಾಗುವ ಸಮಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅಪ್ಪಾಜಿ ಕುಮ್ಮಕ್ಕಿನಿಂದ ಕರೆಂಟ್ ತೆಗೆದ್ರೆ ನಿಮ್ಮ ಆಫೀಸ್’ಗೆ ಬಾಂಬ್ ಫಿಕ್ಸ್ ಮಾಡ್ತೀವಿ … Read more

ಭದ್ರಾವತಿಯ ಆಶಾ ಭಟ್ ಈಗ ಹಿಂದಿ ಸಿನಿಮಾ ಹೀರೋಯಿನ್, ರಿಲೀಸ್’ಗೆ ರೆಡಿಯಾಗಿದೆ ಚಿತ್ರ

ಶಿವಮೊಗ್ಗ ಲೈವ್.ಕಾಂ | 14 ಮಾರ್ಚ್ 2019 ಭದ್ರಾವತಿಯ ಬೆಡಗಿ ಈಗ ಬಾಲಿವುಡ್ ಸಿನಿಮಾದ ಹೀರೋಯಿನ್. ಈಕೆ ಆಭಿನಯಿಸುತ್ತಿರುವ ಚಿತ್ರ ಹಿಂದಿ ಭಾಷೆಯಲ್ಲಿ ಮಾತ್ರವಲ್ಲ, ಇಂಗ್ಲೀಷ್ ಭಾಷೆಯಲ್ಲೂ ರಿಲೀಸ್ ಆಗಲಿದೆ. ಈ ಮೂಲಕ ಭದ್ರಾವತಿಯ ಆಶಾ ಭಟ್, ಈಗ ಹಾಲಿವುಡ್ ಮತ್ತು ಬಾಲಿವುಡ್’ನಲ್ಲಿ ಏಕಕಾಲದಲ್ಲಿ ಮಿಂಚಲಿದ್ದಾರೆ. ಜಂಗ್ಲಿ ಅನ್ನುವ ಹಿಂದಿ ಸಿನಿಮಾದಲ್ಲಿ ಭದ್ರಾವತಿಯ ಆಶಾ ಭಟ್ ಅಭಿನಯಿಸುತ್ತಿದ್ದಾರೆ. ಮೀರಾ ಅನ್ನುವ ಪತ್ರಕರ್ತೆಯ ಪಾತ್ರದಲ್ಲಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಜಂಗ್ಲಿ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಮಾರ್ಚ್ 29ಕ್ಕೆ … Read more

ಭದ್ರಾವತಿಯಲ್ಲಿ ಸರ್ಕಾರಿ ಶಾಲೆಗೆ ಬೆಂಕಿ ಇಟ್ಟು, ‘ಐ ಲವ್ ಯು’ ಅಂತಾ ಬರೆದ ಕಿಡಿಗೇಡಿಗಳು

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | 10 ಮಾರ್ಚ್ 2019 ಸರ್ಕಾರಿ ಶಾಲೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬಳಿಕ ಗೋಡೆ ಮೇಲೆ ಐ ಲವ್ ಯು ಎಂದು ಬರೆದಿದ್ದಾರೆ. ಶನಿವಾರ ಬೆಳಗ್ಗೆ ಘಟನೆ ನಡೆದಿದೆ. ದೊಣಬಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಿಟಕಿ ಮೂಲಕ, ಬೆಂಕಿಕಡ್ಡಿ ಗೀರಿ ಹಾಕಲಾಗಿದೆ. ಇದರಿಂದ ಕೊಠಡಿಯಲ್ಲಿದ್ದ ಎರಡು ಕುರ್ಚಿಗಳು ಸುಟ್ಟು ಹೋಗಿವೆ. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ಲೈವ್.ಕಾಂ … Read more

‘ವಿಐಎಸ್ಎಲ್’ಗೆ ಗಣಿ ಮಂಜೂರು ಮಾಡಿಸಿದ್ದಾಯ್ತು, ಎಂಪಿಎಂ ಆರಂಭಿಸುವ ಪ್ರಯತ್ನವೂ ಶುರುವಾಗಿದೆ’

VISL Bhadravathi 1

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ಗಣಿ ಮಂಜೂರು ಮಾಡಿಸಿದರೆ ವಿಎಐಎಸ್ಎಲ್’ಗೆ ಬಂಡಾವಳ ಹಾಕುತ್ತೇವೆ, ಕಾರ್ಖಾನೆಯನ್ನು ಪುನಾರಂಭ ಮಾಡಿಸುತ್ತೇವೆ ಎಂದು ಭಾಷಣ ಮಾಡಿದ ಬಿಜೆಪಿ ಮಂತ್ರಿಗಳು ಮತ್ತು ಸಂಸದರು, ಈವರೆಗೂ ಕಾರ್ಖಾನೆಗಾಗಿ ಏನನ್ನೂ ಮಾಡಿಲ್ಲ ಎಂದು ಭದ್ರಾವತಿ ಶಾಸಕ ಸಂಗಮೇಶ್ವರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಎಸ್ಎಲ್ ಕಾರ್ಖಾನೆಗೆ ಗಣಿ ಮಂಜೂರಾಗಿದೆ. ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಈಗ ಕಾರ್ಖಾನೆಯನ್ನು ಆರಂಭಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಗುತ್ತಿಗೆ ಕಾರ್ಮಿಕರಿಗೆ 26 ದಿನ ಕೆಲಸ ನೀಡಬೇಕು ಎಂಬ ಹೋರಾಟಕ್ಕೆ … Read more

ಭದ್ರಾವತಿಯ ವಿಐಎಸ್ಎಲ್’ಗೆ ಮರುಜೀವ, ಕೊನೆಗೂ ಮಂಜೂರಾಯ್ತು 150 ಎಕರೆಯ ಗಣಿ

VISL Bhadravathi 1

ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019 ಮುಚ್ಚುವ ಹಂತ ತಲುಪಿದ್ದ ವಿಐಎಸ್ಎಲ್ ಕಾರ್ಖಾನೆಗೆ ಮರುಜೀವ ಸಿಕ್ಕಂತಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 150 ಎಕರೆ ಗಣಿ ಮಂಜೂರಾಗಿದೆ. ಈ ಸಂಬಂಧ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಸಂಡೂರಿನ ರಮಣದುರ್ಗದ ಬ್ಲಾಕ್ ನಂಬರ್ 13/1ರಲ್ಲಿ 150 ಎಕರೆ ಭೂಮಿಯನ್ನು ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ 10 ವರ್ಷಗಳವರೆಗೆ  ಮಂಜೂರು ಮಾಡಲಾಗಿದೆ. ಹತ್ತು ವರ್ಷದ ಬಳಿಕ ನವೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿಐಎಸ್ಎಲ್ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ. ಸಿದ್ದರಾಮಯ್ಯ ಅವರು ಸಿಎಂ … Read more

ಪುನಿತ್ ರಾಜ್’ಕುಮಾರ್ ಸಿನಿಮಾದಲ್ಲಿ ಮಾಡಿದ್ದನ್ನು, ಭದ್ರಾವತಿಯ ಯುವಕ ರಿಯಲ್ ಲೈಫ್’ನಲ್ಲಿ ಮಾಡಿ ತೋರಿಸಿದ

ಶಿವಮೊಗ್ಗ ಲೈವ್.ಕಾಂ | 20 ಫೆಬ್ರವರಿ 2019 ಪವರ್ ಸ್ಟಾರ್ ಸಿನಿಮಾದಲ್ಲಿ ಮಾಡಿದ್ದನ್ನ, ಭದ್ರಾವತಿ ಯುವಕ, ರಿಯಲ್ ಲೈಫ್’ನಲ್ಲಿ ಮಾಡಿದ್ದಾನೆ. ಈತನ ಕೆಲಸಕ್ಕೆ ಭಾರೀ ಮೆಚ್ಚುಗೆ ಸಿಕ್ಕಿದೆ. ಈ ಹುಡುಗನ ವಿಡಿಯೋ ವೈರಲ್ ಆಗಿದೆ. ಈ ಸುದ್ದಿ ಓದುವ ಮೊದಲು ಪುನಿತ್ ರಾಜ್’ಕುಮಾರ್ ಅವರ ಈ ಹಾಡನ್ನು ಒಮ್ಮೆ ನೋಡಿಬಿಡಿ. ಯಾರೇ ಕೂಗಾಡಲಿ ಸಿನಿಮಾದ ಈ ಹಾಡಿನಲ್ಲಿ, ಪುನಿತ್ ರಾಜ್’ಕುಮಾರ್ ಅವರು ಭಿಕ್ಷುಕನೊಬ್ಬನಿಗೆ ಹೊಸ ರೂಪ ನೀಡ, ನೂತನ ಬದುಕು ಕಲ್ಪಿಸುತ್ತಾರೆ. ಇದು ರೀಲ್ ಸ್ಟೋರಿ. ಆದರೆ … Read more

ಭದ್ರಾವತಿಯಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ನಾಲ್ವರು ಅರೆಸ್ಟ್, ಹಣ ವಶಕ್ಕೆ

prison hand cuff image

ಶಿವಮೊಗ್ಗ ಲೈವ್.ಕಾಂ | 5 ಜನವರಿ 2019    ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಖಾಸಗಿ ಬಸ್ ನಿಲ್ದಾಣದ ಬಳಿ ಮಟ್ಕಾ ಜೂಜಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನದ ಸಂದರ್ಭ ಹಣವನ್ನು ವಶಕ್ಕೆ ಪಡೆಯಲಾಗಿದೆ. ಕೂಡ್ಲಿಗೆರೆಯ ಚಿನ್ನಪ್ಪಯ್ಯ, ಅಶೋಕ್, ತಿಲಕ್’ನಗರದ ಶಿವಣ್ಣ, ಕಾಗದ ನಗರದ ಪ್ರಸನ್ನ ಬಂಧಿತರು. ಇವರಿಂದ 2915 ರೂ. ನಗದು ವಶಕ್ಕೆ ಪಡೆಯಲಾಗಿದೆ. ಸಿಪಿಐ ಯೋಗೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ನಟರಾಜ್, ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.   ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ … Read more

ಭಗವಾನ್ ಗಡಿಪಾರಿಗೆ ಭದ್ರಾವತಿಯಲ್ಲಿ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | 4 ಜನವರಿ 2019    ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಎಸ್.ಕೆ.ಭಗವಾನ್ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ, ವಿಶ್ವಹಿಂದೂ ಪರಿಷತ್, ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಭಗವಾನ್ ಎಂದು ಹೆಸರಿಟ್ಟುಕೊಂಡು ಅದಕ್ಕೆ ವಿರುದ್ಧವಾಗಿ ಹಿಂದೂ ಧರ್ಮದ  ದೇವರುಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ವಿರೋಧಿಸಿದರು. ಇದಕ್ಕೂ ಮೊದಲು, ರಂಗಪ್ಪ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ತಹಶೀಲ್ದಾರ್ ಅವರಿಗೆ ಮನವಿಸಲ್ಲಿಸಿದರು. ಪ್ರಮುಖರಾದ ಓಂಕಾರಪ್ಪ, ಧರ್ಮಪ್ರಸಾದ್, ಬಿ.ಕೆ.ಶ್ರೀನಾಥ್, ರಾಮಚಂದ್ರ, ಆರ್.ಎಸ್.ಶೋಭ, ಹೇಮಾವತಿ … Read more

ನೀರಿಗಾಗಿ ಭದ್ರಾವತಿ ಮಿಲ್ಟ್ರಿಕ್ಯಾಂಪ್ ಬಳಿ ರೈತರ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಅನ್ನದಾತರು ಗರಂ

ಶಿವಮೊಗ್ಗ ಲೈವ್.ಕಾಂ | 1 ಜನವರಿ 2019 ಭದ್ರಾ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮಿಲ್ಟ್ರಿಕ್ಯಾಂಪ್’ನ ನೀರಾವರಿ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಲಾಯಿತು. ನೀರು ಹರಿಸುವುದನ್ನು ನಿಲ್ಲಿಸಿ 46 ದಿನ ಕಳೆದಿದೆ. ನೀರು ಹರಿಸಲು ಇದು ಸಕಾಲವಾಗಿದೆ. ಆದ್ದರಿಂದ ಸರ್ಕಾರ ಮತ್ತು ನೀರಾವರಿ ಇಲಾಖೆ ತಡ ಮಾಡದೆ ನಾಲೆಗಳಲ್ಲಿ ನೀರು ಹರಿಸಬೇಕು. ಇಲ್ಲವಾದಲ್ಲಿ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೈತ ಮುಖಂಡರಾದ … Read more