ಫೋನ್‌ ಪೇ ಹೆಸರಲ್ಲಿ ಬಂತು ಮೆಸೇಜ್‌, ಕ್ಲಿಕ್‌ ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್

crime name image

BHADRAVATHI NEWS, 30 OCTOBER 2024 : ಮೊಬೈಲ್‌ಗೆ ಬಂದ ಮೆಸೇಜ್‌ ಕ್ಲಿಕ್‌ ಮಾಡಿದ ವ್ಯಕ್ತಿಯ ಬ್ಯಾಂಕ್‌ (BANK) ಖಾತೆಯಿಂದ ಮೂರು ಬಾರಿ ಹಣ ವರ್ಗಾವಣೆಯಾಗಿದೆ. ಭದ್ರಾವತಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ತಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ ಖಾತೆಯ ಬ್ಯಾಲೆನ್ಸ್‌ ಚೆಕ್‌ ಮಾಡುತ್ತಿದ್ದರು. ಆಗ ಫೋನ್‌ ಪೇ ಪ್ರೊಸೀಡ್‌ ಎಂಬ ಮೆಸೇಜ್‌ ಬಂದಿತ್ತು. ಅದನ್ನು ಕ್ಲಿಕ್‌ ಮಾಡಿದ್ದರು. ಆ ನಂತರ ಆ ವ್ಯಕ್ತಿಗೆ ತಿಳಿಯದೆಯೇ ಮೂರು ಬಾರಿ ನಾನಾ ಖಾತೆಗೆ ಒಟ್ಟು 2.58 … Read more

ಲಾರಿ ಡಿಕ್ಕಿ, ಪ್ರಾಥಮಿಕ ಶಾಲೆ ಶಿಕ್ಷಕಿ ದುರ್ಮರಣ, ಹೇಗಾಯ್ತು ಘಟನೆ?

School-Teacher-Shakuntala-succumbed-at-agaradalli

HOLEHONNURU NEWS, 26 OCTOBER 2024 : ಲಾರಿ ಡಿಕ್ಕಿ ಹೊಡೆದು ಶಿಕ್ಷಕಿಯೊಬ್ಬರು (Teacher) ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಆಗರದಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಚನ್ನಗಿರಿ ತಾಲೂಕು ಮಾನವಿಕಟ್ಟೆ ಮೂಲದ, ಸಾಗರ ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕಿ ಶಕುಂತಲಾ (29) ಮೃತರು. ಆಗರದಹಳ್ಳಿಯಲ್ಲಿ ಸ್ನೇಹಿತೆ ಮನೆಗೆ ತೆರಳಿ ಆಕೆಯನ್ನು ಭೇಟಿಯಾಗಿ,  ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ತರಬೇತಿಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಬಸ್‌ ಹತ್ತಲು ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದಿತ್ತು. ಇದನ್ನೂ ಓದಿ » MRPಗಿಂತಲು ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡದಂತೆ … Read more

ಟ್ರಾಕ್ಟರ್‌ನಲ್ಲಿ ತೋಟಕ್ಕೆ ನುಗ್ಗಿ ಅಡಿಕೆ ಕಳವು

crime name image

HOLEHONNURU NEWS, 24 OCTOBER 2024 : ತೋಟಕ್ಕೆ ಅತಿಕ್ರಮ ಪ್ರವೇಶ ಮಾಡಿ ಅಡಿಕೆ (Adike) ಕೊಯ್ದು ಟ್ರಾಕ್ಟರ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ತಡೆದ ಮಾಲೀಕನಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಘಟನೆ ಸಂಭವಿಸಿದೆ. ಈಶ್ವರಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಟ್ರಾಕ್ಟರ್‌ ಮತ್ತು ಬೈಕುಗಳಲ್ಲಿ ಬಂದವರು ತೋಟದಲ್ಲಿ ಸುಮಾರು 20 ರಿಂದ 25 ಕ್ವಿಂಟಾಲ್‌ ಅಡಿಕೆ ಕೊಯ್ದು ತುಂಬಿಕೊಂಡು ಹೋಗುತ್ತಿದ್ದರು. ಇದನ್ನು … Read more

ಟ್ರಾಕ್ಟರ್‌ನಲ್ಲಿ ತೋಟಕ್ಕೆ ನುಗ್ಗಿ ಅಡಿಕೆ ಕೊಯ್ದು ಕಳ್ಳತನ

Areca-Farm-Adike-tota-in-Shimoga

HOLEHONNURU NEWS, 22 OCTOBER 2024 : ತೋಟಕ್ಕೆ ನುಗ್ಗಿ 20 ಚೀಲ ಅಡಿಕೆ (Adike) ಕೊಯ್ದು ಟ್ರಾಕ್ಟರ್‌ನಲ್ಲಿ ಕಳ್ಳತನ ಮಾಡಿಕೊಂಡು ಹೋಗಲಾಗಿದೆ. ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಘಟನೆ ನಡೆದಿದೆ. ಕಿರಣ್‌ ಕುಮಾರ್‌ ಎಂಬುವವರ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮೂವರು, ಸುಮಾರು 20 ಚಿಲದಷ್ಟು ಹಸಿ ಅಡಿಕೆ ಕೊಯ್ದು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡುವ ವ್ಯಕ್ತಿ ಕಿರಣ್‌ ಕುಮಾರ್‌ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆ ದೂರು ನೀಡಿದ್ದಾರೆ. ಒಟ್ಟು 90 ಸಾವಿರ ರೂ. ಮೌಲ್ಯದ … Read more

ಇಡೀ ರಾಜ್ಯದಲ್ಲಿ ಭದ್ರಾವತಿಯ ದಾಸರ ಕಲ್ಲಹಳ್ಳಿಯಲ್ಲೇ ಅತ್ಯಧಿಕ ಮಳೆ

Rain-at-Shimoga

RAINFALL NEWS, 21 OCTOBER 2024 : ಕಳೆದ 24 ಗಂಟೆಯಲ್ಲಿ ಭದ್ರಾವತಿ ತಾಲೂಕು ದಾಸರಕಲ್ಲಹಳ್ಳಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು (Highest) ಮಳೆಯಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ ಅ.20ರ ಬೆಳಗ್ಗೆ 8.30ರಿಂದ ಅ.21ರ ಬೆಳಗ್ಗೆ 8.30ರವರೆಗೆ ದಾಸರಕಲ್ಲಹಳ್ಳಿ ಭಾಗದಲ್ಲಿ 146 ಮಿ.ಮೀ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಇದು ಅತ್ಯಧಿಕ ಮಳೆ ಪ್ರಮಾಣವಾಗಿದೆ. ಇದನ್ನೂ ಓದಿ » ಸೇತುವೆ ಮೇಲೆ ನೀರು, ಯಡವಾಲ – ಹಿಟ್ಟೂರು ರಸ್ತೆ ಸಂಚಾರ ಬಂದ್

ಲಾಭದ ಆಸೆಗೆ ಬಿದ್ದ ಭದ್ರಾವತಿ ಕೃಷಿಕ, ಕಳೆದುಕೊಂಡಿದ್ದು 21 ಲಕ್ಷ, ಆಗಿದ್ದೇನು?

Online-Fraud-Case-image

BHADRAVATHI NEWS, 20 OCTOBER 2024 : ಟೆಲಿಗ್ರಾಂ ಆಪ್‌ನಲ್ಲಿ ಮೆಸೇಜ್‌ ಮಾಡಿ ಟ್ರಾವೆಲ್ಸ್‌ ಗ್ರೂಪ್‌ಗೆ ಹಣ ಹೂಡಿಕೆ (Investment) ಮಾಡಿದರೆ, ಶೇ.30ರಷ್ಟು ಕಮಿಷನ್‌ ಮತ್ತು ಪಾರ್ಟ್‌ ಟೈಮ್‌ ಉದ್ಯೋಗ ಕೊಡುವ ಭರವಸೆ ನೀಡಿ 21.90 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ತಾಲೂಕಿನ ಕೃಷಿಕರೊಬ್ಬರು (ಹೆಸರು ಗೌಪ್ಯ) ವಂಚನೆಗೊಳಗಾಗಿದ್ದಾರೆ. ಟ್ರಾವೆಲ್ಸ್‌ ಪಾರ್ಟ್‌ನರ್‌ ಇಂಡಿಯಾ, 91 ಕ್ಲಬ್‌ ಸರ್ವಿಸ್‌ ಎಂಬ ಹೆಸರು ಬಳಸಿ ಕೃಷಿಕರೊಬ್ಬರಿಗೆ ಮೆಸೇಜ್‌ ಕಳುಹಿಸಲಾಗಿತ್ತು. ಅಧಿಕ ಲಾಭದ ಆಸೆಗೆ ಬಿದ್ದ ಕೃಷಿಕ ತನ್ನ ಬ್ಯಾಂಕ್‌ ಖಾತೆ, … Read more

ಶಿವಮೊಗ್ಗ, ಭದ್ರಾವತಿ ತಾಲೂಕಿನ ವಿವಿಧೆಡೆ ಜೋರು ಮಳೆ, ಎಲ್ಲೆಲ್ಲಿ?

Rain-General-Image-youth-With-an-Umbrella

RAIN NEWS, 20 OCTOBER 2024 : ಸಂಜೆ ಹೊತ್ತಿಗೆ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನಲ್ಲಿ ಪುನಃ ಮಳೆ ಆರಂಭವಾಗಿದೆ. ಗುಡುಗು ಸಹಿತ ಮಳೆ ಸುರಿಯುತ್ತಿದ್ದು ಜನರು ಆತಂಕಕ್ಕೀಡಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಶಿವಮೊಗ್ಗ ನಗರ, ಕುಂಚೇನಹಳ್ಳಿ, ಪಿಳ್ಳಂಗೆರೆ, ಅಬ್ಬಲಗೆರೆ, ಕೂಡ್ಲಿ, ಭದ್ರಾವತಿ ತಾಲೂಕಿನ ನಿಂಬೆಗೊಂದಿ, ಮಂಗೋಟೆ, ಮೈದೊಳಲು, ಗುಡಮಘಟ್ಟ, ಎಮ್ಮೆಹಟ್ಟಿ, ದಾಸರಕಲ್ಲಹಳ್ಳಿ, ಕಲ್ಲಿಹಾಳ್‌, ಅರೆಬಿಳಚಿ, ಅರಕೆರೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನು, ಉಳಿದ ತಾಲೂಕುಗಳಲ್ಲಿ ಅಲ್ಲಲ್ಲಿ ಚುದರಿದಂತೆ ಸಾಧಾರಣ ಮಳೆಯಾಗುತ್ತಿದೆ. ಇದನ್ನೂ ಓದಿ » ಶಿವಮೊಗ್ಗಕ್ಕೆ ಆರೆಂಜ್‌ ಅಲರ್ಟ್‌, ನಾಳೆಯೂ … Read more

ರಾತ್ರೋರಾತ್ರಿ ಮನೆ ಮುಂದಿದ್ದ 2 ಕ್ವಿಂಟಾಲ್‌ ಅಡಿಕೆ ಮಾಯ

Areca-in-gunny-bag-APMC-Shimoga

HOLEHONNURU NEWS, 19 OCTOBER 2024 : ಮನೆ ಮುಂದೆ ಇಟಿದ್ದ 2 ಕ್ವಿಂಟಾಲ್‌ ಅಡಿಕೆ (Adike) ರಾತ್ರೋರಾತ್ರಿ ಕಳುವಾಗಿದೆ. ಭದ್ರಾವತಿ ತಾಲೂಕು ಸಿದ್ಲಿಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅಮಿತ್‌ ಎಂಬುವವರು ತಮ್ಮ ತೋಟದಲ್ಲಿ ಅಡಿಕೆ ಕೊಯಿಸಿ, ಬೇಯಿಸಿ, ಒಣಗಿಸಿ ಮನೆ ಬಳಿ ಇರಿಸಿದ್ದರು. ಒಟ್ಟು 7 ಚೀಲ ಅಡಿಕೆಯನ್ನು ಮನೆ ಮುಂಭಾಗ ಇರಿಸಿದ್ದರು. ಬೆಳಗ್ಗೆ 4 ಗಂಟೆಗೆ ಎದ್ದು ನೋಡಿದಾಗ ಮೂರು ಚೀಲ ಅಡಿಕೆ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿ ಬಳಿಕ ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ. … Read more

ಭದ್ರಾವತಿಯಲ್ಲಿ ಮಳೆಗೆ ಕುಸಿದ ಸೇತುವೆ, ರೈತರಿಗೆ ಸಂಕಷ್ಟ

bridge-at-Hanchina-siddapura-near-Holehonnuru.

HOLEHONNURU NEWS, 15 OCTOBER 2024 : ಕಳೆದ ಕೆಲವು ದಿನ ಸುರಿದ ಮಳೆಗೆ ಭದ್ರಾವತಿ ತಾಲೂಕು ಹಂಚಿನಸಿದ್ದಾಪುರ ಗ್ರಾಮದಲ್ಲಿ ಭದ್ರಾ ನಾಲೆಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರು ಸೇತುವೆ (Bridge) ಕುಸಿದು ಬಿದಿದೆ. ಇದರಿಂದ ರೈತರ ಜಮೀನುಗಳಿಗೆ ಸಂಪರ್ಕ ಕಡಿತವಾಗಿದೆ. ಹಂಚಿನಸಿದ್ದಾಪುರ ಗ್ರಾಮದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಶಿಥಿಲಗೊಂಡಿತ್ತು. ಭಾರಿ ಮಳೆಗೆ ಶನಿವಾರ ಸೇತುವೆ ಕುಸಿದು ಬಿದ್ದಿದೆ. ಇದನ್ನೂ ಓದಿ » ಸಿಗಂದೂರು ಸೇತುವೆ, ಸಂಸದ ರಾಘವೇಂದ್ರ ಪ್ರಕಟಿಸಿದ ಫೋಟೊ ವೈರಲ್ ಇದು ಸುಮಾರು … Read more

ಭದ್ರಾವತಿಯಲ್ಲಿ ಮುಂದುವರೆದ ಮಳೆ, ಕಾಂಪೌಂಡ್‌ ಕುಸಿತ, ಮನೆಗಳು ಜಲಾವೃತ

Rainfall-at-bhadravathi-taluk

BHADRAVATHI NEWS, 12 OCTOBER 2024 : ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರ (RAIN) ಮುಂದುವರೆದಿದೆ. ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಗೋಡೆ ಕುಸಿತದ ವರದಿಯಾಗಿದೆ. ಮುಂದುವರೆದ ಮಳೆ ಅಬ್ಬರ ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸಿಂಗನಮನೆ, ಮಾವಿನಕೆರೆ, ಹಿರಿಯೂರು, ಅರಳಹಳ್ಳಿ, ಕಾಗೆಕೊಡಮಗ್ಗಿ, ತಡಸ, ಬಿಳಕಿ, ನಾಗತಿಬೆಳಗಲು, ಅರೆಬಿಳಚಿ, ಕಲ್ಲಿಹಾಳ್‌, ಎಮ್ಮೆಹಟ್ಟಿ, ಗುಡುಮಘಟ್ಟ, ಮಂಗೋಟೆ, ನಿಂಬೆಗೊಂದಿ, ದಾಸರಕಲ್ಲಹಳ್ಳಿ, ಯರೆಹಳ್ಳಿ ಸುತ್ತಮುತ್ತ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ. ಗೋಡೆ ಕುಸಿತ, ಮನೆಗಳಿಗೆ ನೀರು ಮಳೆ ಮುಂದುವರೆದ ಹಿನ್ನೆಲೆ … Read more