ಪಲ್ಸರ್‌ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದರು, ಚಾಕು ತೋರಿಸಿ ಹಣ ದೋಚಿದರು

Crime-News-General-Image

SHIVAMOGGA LIVE NEWS | 21 MARCH 2024 HOLEHONNURU : ಅರದೊಟ್ಲು ಗ್ರಾಮದ ಬಳಿ ಸೋಮವಾರ ವ್ಯಕ್ತಿಯೋರ್ವನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ 22 ಸಾವಿರ ರೂ. ಅಪಹರಿಸಲಾಗಿದೆ. ಕೊಲೆ ಬೆದರಿಕೆ ಹಾಕಿ 22 ದರೋಡೆ ಅರದೊಟ್ಲು ಗ್ರಾಮದ ದೊರೆ ಎಂಬುವರು ಭದ್ರಾವತಿಯಿಂದ ಕೆಲಸ ಮುಗಿಸಿ ಸಂಜೆ ಮನೆಗೆ ಮರಳುವಾಗ ಪಲ್ಸರ್ ಬೈಕ್‌ನಲ್ಲಿ ಬಂದ ಮೂವರು ಯುವಕರು ಅಡ್ಡಗಟ್ಟಿದ್ದಾರೆ. ತಕ್ಷಣ ಒಬ್ಬ ಯುವಕ ಚಾಕು ತೋರಿಸಿ ಹಣ ಹಾಗೂ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ … Read more

ಸಿದ್ಲೀಪುರ, ಕಮಲಾಪುರದಲ್ಲಿ ಹುಲ್ಲಿಗೆ ಬೆಂಕಿ | ಸಾಗರದ ಕಾಡಿನಲ್ಲಿ ಕುಮಟಾದ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Holehonnuru-Sidlipura-incident

SHIVAMOGGA LIVE NEWS | 16 MARCH 2024 ಸಿದ್ಲೀಪುರದಲ್ಲಿ ಹುಲ್ಲಿನ ಬಣವೆಗೆ ಬೆಂಕಿ HOLEHONNURU : ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 280 ಪೆಂಡಿ ಹುಲ್ಲು ಸುಟ್ಟು ಹೋಗಿದೆ. ಸಿದ್ಲೀಪುರ ಗ್ರಾಮದ ಜಯಮ್ಮ ಹನುಮಂತಪ್ಪ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಹೊತ್ತುಕೊಂಡಿತ್ತು. ಕೂಡಲೆ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. 70 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹೊಳೆಹೊನ್ನೂರು … Read more

ಆಗರದಹಳ್ಳಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಗುದ್ದಿದ ಬೈಕ್‌ | ಭದ್ರಾವತಿಯಲ್ಲಿ ಲಾರಿ ಚಾಲಕ ಸೇರಿ ಇಬ್ಬರ ಮೇಲೆ ಅಟ್ಯಾಕ್‌

crime name image

SHIVAMOGGA LIVE NEWS | 15 MARCH 2024 ‌ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್‌ HOLEHONNURU : ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಬೈಕ್‌ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಅಗರದಳ್ಳಿ ಕ್ಯಾಂಪ್‌ನಲ್ಲಿ ಕೂಲಿ ಕೆಲಸಕ್ಕೆ ಹೋಗಿ ಸಿದ್ದರ ಕಾಲೋನಿಯ ಮನೆಗೆ ಮರಳುತ್ತಿದ್ದ ನಾಗರಾಜಪ್ಪ ಅವರಿಗೆ ಬೈಕ್‌ ಡಿಕ್ಕಿ ಹೊಡೆದಿದೆ. ಅಗರದಳ್ಳಿ ಕ್ಯಾಂಪ್‌ ಕಡೆಯಿಂದ ವೇಗವಾಗಿ ಬಂದ ಬೈಕ್‌ ಹಿಂಬದಿಯಿಂದ ನಾಗರಾಜಪ್ಪ ಅವರಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಕೂಡಲೆ ನಾಗರಾಜಪ್ಪ ಅವರನ್ನು ಹೊಳೆಹೊನ್ನೂರು ಸಮುದಾಯ ಕೇಂದ್ರಕ್ಕೆ ಕರೆದೊಯ್ದು … Read more

ನಿಲ್ದಾಣದ ಗೇಟ್‌ನಲ್ಲೆ ಮಹಿಳೆ ಕಾಲ ಮೇಲೆ ಹತ್ತಿದ KSRTC ಬಸ್‌, CCTVಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

Bhadravathi-KSRTC-Bus-incident-at-Bus-Stand

SHIVAMOGGA LIVE NEWS | 01 MARCH 2024 BHADRAVATHI : ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ಸು ಆಕೆಯ ಕಾಲಿನ ಮೇಲೆ ಹರಿದಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಘಟನೆ ಸಂಭವಿಸಿದೆ. ಪಟ್ಟಣದ ನಿವಾಸಿ ಚಂದ್ರಾಬಾಯಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಲ್ದಾಣದ ಗೇಟ್‌ನಲ್ಲಿ ಚಂದ್ರಾಬಾಯಿ ನಡೆದು ಹೋಗುತ್ತಿದ್ದಾಗ ಏಕಾಎಕಿ ಬಂದ ಬಸ್‌ ಆಕೆಗೆ ಡಿಕ್ಕಿ ಹೊಡೆದಿದೆ. ಬಸ್ಸಿನ ಮುಂದಿನ ಚಕ್ರ ಚಂದ್ರಬಾಯಿ ಕಾಲಿನ … Read more

ಮೈಸೂರು ಪೇಪರ್‌ ಮಿಲ್ಸ್‌ ಪುನಾರಂಭ ಕುರಿತು ಪರಿಷತ್‌ನಲ್ಲಿ ರುದ್ರೇಗೌಡ ಪ್ರಶ್ನೆ, ಸರ್ಕಾರದ ಉತ್ತರವೇನು?

MLC-Rudregowda-Questions-about-MPM-In-the-Session

SHIVAMOGGA LIVE NEWS | 20 FEBRUARY 2024 SESSION NEWS : ನೀಲಗಿರಿ ಬೆಳೆಯಲು ವಿನಾಯಿತಿ ಮತ್ತು ಹೊಣೆಗಾರಿಕೆಗಳಿಲ್ಲದ ಕಂಪನಿ ಕಾರ್ಯಾಚರಣೆಗೆ ಬಿಡ್‌ದಾರರು ಬಯಸಿದ್ದಾರೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೃಹತ್‌ ಮತ್ತು       ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಸದನಲ್ಲಿ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಎಸ್.ರುದ್ರೇಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಎಂಪಿಎಂ ಕುರಿತು … Read more

ಭದ್ರಾವತಿಯಲ್ಲಿ ಸರಣಿ ಅಪಘಾತ, ಸಂಪೂರ್ಣ ನುಜ್ಜುಗುಜ್ಜಾಯಿತು ಆಟೋ, ಘಟನೆಗೇನು ಕಾರಣ?

Car-Auto-and-bus-incident-at-bhadravathi.

SHIVAMOGGA LIVE NEWS | 19 FEBRUARY 2024 BHADRAVATHI : ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಬಳಿ ಕಳೆದ ರಾತ್ರಿ ಸರಣಿ ಅಪಘಾತ ಸಂಭವಿಸಿದೆ. ಕಾರೊಂದು ಆಟೋ, ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಂದು ಆಟೋ ಸಂಪೂರ್ಣ ಜಖಂ ಆಗಿದೆ. ವೇಗವಾಗಿ ಬಂದ ಕಾರು ಎರಡು ಆಟೋಗಳು ಮತ್ತು ಖಾಸಗಿ ಬಸ್‌ ಒಂದಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ. ಕಾರು ಚಾಲಕ ಮದ್ಯ ಸೇವಿಸಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತದ ರಭಸಕ್ಕೆ … Read more

ಚಲಿಸುತ್ತಿದ್ದ ಗೂಡ್ಸ್‌ ವಾಹನದಿಂದ ಜಿಗಿದ ಹಸು, ಒಳಗಿದ್ದವು ಇನ್ನೂ ಏಳೆಂಟು ಗೋವು, ಮುಂದೇನಾಯ್ತು?

Police-Van-Jeep-at-Shimoga-Nehru-Road

SHIVAMOGGA LIVE NEWS | 17 FEBRUARY 2024 BHADRAVATHI : ಚಲಿಸುತ್ತಿದ್ದ ಗೂಡ್ಸ್‌ ವಾಹನದಿಂದ ಹಸುವೊಂದು ಕೆಳಗೆ ಹಾರಿ ಪರಾರಿಯಾಗಿದೆ. ವಾಹನದಲ್ಲಿ ಇನ್ನಷ್ಟು ಗೋವುಗಳಿದ್ದು, ಹತ್ಯೆ ಮಾಡುವ ಉದ್ದೇಶದಿಂದ ಕೊಂಡೊಯ್ದಿರುವ ಶಂಕೆ ವ್ಯಕ್ತಪಡಿಸಿ ದೂರು ನೀಡಲಾಗಿದೆ. ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭದ್ರಾವತಿಯ ತರೀಕೆರೆ ರಸ್ತೆಯ ಗಾಂಧಿ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಗೂಡ್ಸ್‌  ವಾಹನದಿಂದ ಹಸು ಕೆಳಗೆ ಹಾರಿದೆ. ವಾಹನದಲ್ಲಿ ಏಳೆಂಟು ಗೂವುಗಳಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾಧವಾಚಾರ ಸರ್ಕಲ್‌ ಮೂಲಕ ಗೂಡ್ಸ್‌ ವಾಹನ … Read more

ಪೊಲೀಸ್‌ ಸಿಬ್ಬಂದಿ ಮನೆಯಲ್ಲಿ ಬೀರು ತೆಗೆದ ಕುಟುಂಬದವರಿಗೆ ಕಾದಿತ್ತು ಆಘಾತ, ಏನಾಗಿತ್ತು?

crime name image

SHIVAMOGGA LIVE NEWS | 17 FEBRUARY 2024 BHADRAVATHI : ನಕಲಿ ಕೀ ಬಳಸಿ ಪೊಲೀಸ್‌ ಕ್ವಾರ್ಟರ್ಸ್‌ನಲ್ಲಿ ಪೊಲೀಸ್‌ ಸಿಬ್ಬಂದಿಯೊಬ್ಬರ ಮನೆಯ ಬಾಗಿಲು ತೆಗೆದು, ಬೀರುವಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಹಣ, ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಭದ್ರಾವತಿ ಹನುಮಂತನಗರದಲ್ಲಿರುವ ಪೊಲೀಸ್‌ ಕ್ವಾರ್ಟರ್ಸ್‌ನಲ್ಲಿ ಘಟನೆ ಸಂಭವಿಸಿದೆ. ಪೊಲೀಸ್‌ ಸಿಬ್ಬಂದಿ ಕುಬೇರಪ್ಪ ಎಂಬುವವರ ಮನೆಗೆ ನಕಲಿ ಕೀ ಬಳಸಿ ಒಳ ನುಗ್ಗಿರುವ ಕಳ್ಳರು, ಅಡಿಕೆ ಮಾರಾಟದಿಂದ ಬಂದಿದ್ದ 5 ಲಕ್ಷ ರೂ. ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು … Read more

ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಶಾಲೆ ಬಸ್ ಪಲ್ಟಿ, ಮಕ್ಕಳಿಗೆ ಗಾಯ

170224 School bus incident at BHADRAVATHI bypass

SHIVAMOGGA LIVE NEWS | 16 FEBRUARY 2024 BHADRAVATHI : ಖಾಸಗಿ ಶಾಲೆ ಬಸ್ ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಓವರ್ ಟೇಕ್ ಮಾಡುವ ರಭಸದಲ್ಲಿ ಕಾರೊಂದು ಅಡ್ಡಾದಿಡ್ಡಿ ಚಲಿಸಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಶಾಲೆ ಬಸ್, ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಮಕ್ಕಳ ರಕ್ಷಣೆ ಮಾಡಿದ್ದಾರೆ. ಅವರನ್ನು ಸಮೀಪದ ದುರ್ಗ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಇನ್ನು, ವಿಷಯ ತಿಳಿದು ಪೋಷಕರು ಆಸ್ಪತ್ರೆಗೆ … Read more

ಗ್ರಾಮ ಪಂಚಾಯಿತಿಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ದಿಢೀರ್‌ ಭೇಟಿ, ಏನೆಲ್ಲ ಪರಿಶೀಲಿಸಿದರು?

IAS-Snehal-Sudhakar-Lokande-Sudden-visit-to-Arahatolalu-village

SHIVAMOGGA LIVE NEWS | 16 FEBRUARY 2024 HOLEHONNURU : ಅರಹತೊಳಲು ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ದಿಢೀರ್ ಭೇಟಿ ನೀಡಿದರು. ವಿವಿಧ ಕಾಮಗಾರಿಗಳು, ಗ್ರಾಮದ ಸ್ವಚ್ಛತೆ ಕುರಿತು ಪರಿಶೀಲಿಸಿದರು. ಏನೇನೆಲ್ಲ ಪರಿಶೀಲಿಸಿದರು? ಎನೆಲ್ಲ ಸೂಚಿಸಿದರು? ಅರಹತೊಳಲು ಗ್ರಾಮದ ವಿವಿಧ ಕೇರಿಗಳಿಗೆ ಸ್ನೇಹಲ್‌ ಸುಧಾಕರ್‌ ಲೋಖಂಡೆ ಭೇಟಿ ನೀಡಿದರು.  ನರೇಗಾ ಯೋಜನೆಯ ಕಾಮಗಾರಿಗಳು ಮತ್ತು ಚರಂಡಿಗಳನ್ನು ಪರಿಶೀಲಿಸಿದರು. ಕೆಲವೆಡೆ ಚರಂಡಿಯಲ್ಲಿ ಕೊಳಚೆ ನೀರು ನಿಂತಿರುವುದನ್ನು ಗಮನಿಸಿದರು. ಗ್ರಾಮ ಪಂಚಾಯಿತಿ … Read more