ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆ, ಉಕ್ಕಿ ಹರಿದ ಹಳ್ಳ, ಜಲಾಶಯಗಳ ಒಳ ಹರಿವು ಹೆಚ್ಚಳ

Maani-Dam-Hosanagara

ಶಿವಮೊಗ್ಗ ಲೈವ್.ಕಾಂ | HOSANAGARA NEWS | 16 JUNE 2021 ಹೊಸನಗರ ತಾಲೂಕಿನಾದ್ಯಂತ ಮುಂಗಾರು ಜೋರಿದೆ. ಕಳೆದ 24 ಗಂಟೆ ಅವಧಿಯಲ್ಲಿ 169.6 ಮಿ.ಮೀ ಮಳೆಯಾಗಿದೆ. ಭಾರಿ ಮಳೆಗೆ ಹಳ್ಳ – ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಂಡಗದೋದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಕಿ ಗ್ರಾಮದಲ್ಲಿ ಮಳೆಗೆ ಹಳ್ಳ ಉಕ್ಕಿ ಹರಿಯುತ್ತಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆಗೆ ಚರ್ಚಿಸಿದರು. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಹೊಸನಗರ ತಾಲೂಕಿನ ಮಾಣಿ … Read more

ಹುಲಿಕಲ್ ಘಾಟಿ ಸಂಚಾರಕ್ಕೆ ಮುಕ್ತ, ಎರಡು ಕೋಟಿ ವೆಚ್ಚದಲ್ಲಿ ಇನ್ನಷ್ಟು ಅಭಿವೃದ್ಧಿ

160621 Hulikal Ghat Inauguration in Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 16 JUNE 2021 ಹುಲಿಕಲ್ – ಬಾಳೆಬರೆ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರ ಹುಲಿಕಲ್ ಘಾಟಿಯ ಚಂಡಿಕೇಶ್ವರಿ ದೇಗುಲ ಆವರಣದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿದರು. ನಾಲ್ಕು ಕೋಟಿ ರೂ. ವೆಚ್ಚ ಉದ್ಘಾಟನೆ ಬಳಿಕ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಹುಲಿಕಲ್ ಘಾಟಿಯನ್ನು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇನ್ನೂ ಎರಡು ಕೋಟಿ ರೂ. ವೆಚ್ಚದಲ್ಲಿ ಸಾಯಿಲ್ ನೈಲಿಂಗ್ ಕಾಮಗಾರಿ ನಡೆಯಲಿದೆ. ಘಾಟಿ … Read more

ಹೊಸನಗರದಲ್ಲಿ ಮಳೆ ಜೋರು, ಯಡೂರು, ಹುಲಿಕಲ್ನಲ್ಲಿ ಅಬ್ಬರಿಸಿದ ವರುಣ

HOSANAGARA-TALUK-NEWS-1.jpg

ಶಿವಮೊಗ್ಗ ಲೈವ್.ಕಾಂ | HOSANGARA NEWS | 13 JUNE 2021 ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಕಳೆದ 24 ಗಂಟೆ ಅವಧಿಯಲ್ಲಿ ತಾಲೂಕಿನ ಯಡೂರಿನಲ್ಲಿ 135 ಮಿ.ಮೀ ಮಳೆಯಾಗಿದೆ. ಮಾಣಿ, ಹುಲಿಕಲ್‍ನಲ್ಲಿ 123 ಮಿ.ಮೀ, ಹೊಸನಗರದಲ್ಲಿ  119 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 106 ಮಿ.ಮೀ, ಚಕ್ರಾದಲ್ಲಿ 100 ಮಿ.ಮೀ, ಸಾವೇಹಕ್ಲುವಿನಲ್ಲಿ 96 ಮಿ.ಮೀ ಮಳೆಯಾಗಿದೆ. ಗರಿಗೆದರಿದ … Read more

ಕರೋನ ಸೋಂಕಿತನಿಗೆ ಧೈರ್ಯ ಹೇಳಿ, ಆಸ್ಪತ್ರೆಗೆ ಕರೆತಂದು ದಾಖಲಿಸಿದ ಪಟ್ಟಣ ಪಂಚಾಯಿತಿ ಸದಸ್ಯ, ಫೋಟೊ ವೈರಲ್

070621 Pattana Panchayath Member Helps covid patient 1

ಶಿವಮೊಗ್ಗ ಲೈವ್.ಕಾಂ‌ | HOSANAGARA NEWS | 07 JUNE 2021 ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಕರೋನ ಸೋಂಕಿತರೊಬ್ಬರನ್ನು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಕರೆತಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೊಸನಗರದಿಂದ ಶಿವಮೊಗ್ಗದವರೆಗೆ ಸೋಂಕಿತನ ಜೊತೆಗಿದ್ದು ಧೈರ್ಯ ತುಂಬಿದ್ದಾರೆ. ಇವರ ಕೆಲಸಕ್ಕೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹೊಸನಗರ ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಅವರು ಸೋಂಕಿತನೊಂದಿಗೆ ಆಂಬುಲೆನ್ಸ್‍ನಲ್ಲಿ ಶಿವಮೊಗ್ಗದವರೆಗೆ ಬಂದಿದ್ದಾರೆ. ಹೊಸನಗರದ ಟ್ರಯಾಜ್ ಸೆಂಟರ್‍ನಲ್ಲಿದ್ದ ಸೋಂಕಿತರೊಬ್ಬರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೆ ಅವರನ್ನು ಮೆಗ್ಗಾನ್ … Read more

ಪ್ರೀತಿಸುವಂತೆ ಯುವಕನಿಂದ ಬೆದರಿಕೆ, ವಿಷ ಕುಡಿದಿದ್ದ ಬಾಲಕಿ ಮಣಿಪಾಲ ಆಸ್ಪತ್ರೆಯಲ್ಲಿ ಸಾವು

farmer suicide poison

ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 JUNE 2021 ವಿಷ ಸೇವಿಸಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನೊಬ್ಬ ಪ್ರೀತಿಸುವಂತೆ ಬೆದರಿಕೆ ಹಾಕಿದ್ದೆ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಹೊಸನಗರ ತಾಲೂಕು ಕನ್ನಳ್ಳಿ ಸುಧಾಕರ್ ಅವರ ಪುತ್ರಿ ಸಹನಾ (17) ಆತ್ಮಹತ್ಯೆ ಮಾಡಿಕೊಂಡಾಕೆ. ಮೇ 3ರಂದು ಸಹನಾ ವಿಷ ಸೇವಿಸಿದ್ದಳು. ಕೂಡಲೆ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಹೊಸನಗರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ … Read more

5ಜಿ ಯುಗದಲ್ಲೂ ಇಲ್ಲ ಸಿಗ್ನಲ್, ನೆಟ್​​​ವರ್ಕ್​ಗಾಗಿ ಮರದಡಿ ಟೆಂಟ್, ಆನ್​​ಲೈನ್ ಕ್ಲಾಸ್​​ಗಾಗಿ​​​ 12 ಕಿ.ಮೀ ಹೋಗ್ತಾರೆ ಸ್ಟೂಡೆಂಟ್ಸ್

030621 No Network In Varamaballi At Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA / SAGARA NEWS | 3 JUNE 2021 ಸ್ಥಳ : ವಾರಂಬಳ್ಳಿ , ಹೊಸನಗರ ತಾಲೂಕು   ವರ್ಕ್ ಫ್ರಂ ಹೋಂ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ಬಂದಿರುವ ಸಿಂಧು. ಮನೆ ಬಳಿ ಮೊಬೈಲ್ ನೆಟ್‍ ವರ್ಕ್‍ ಸಿಗುತ್ತಿಲ್ಲ. ಊರಾಚೆಗೆ ಸಿಗ್ನಲ್ ಸಿಗುವ ಕಡೆ, ಟೆಂಟ್ ನಿರ್ಮಿಸಿ ಕೆಲಸ ಮಾಡುತ್ತಿದ್ದಾರೆ. ಸ್ಥಳ : ವಾರಂಬಳ್ಳಿ, ಹೊಸನಗರ ತಾಲೂಕು ಅಪರೂಪಕ್ಕೆ ಸಿಗುತ್ತಿದ್ದ ನೆಟ್‍ ವರ್ಕ್‍ ಮಳೆ ಸುರಿದಿದ್ದರಿಂದ ಮಾಯವಾಗಿತ್ತು. ಪುನಃ ನೆಟ್‍ ವರ್ಕ್‍ … Read more

ಹೊಸನಗರದಲ್ಲೂ ಹಳ್ಳಿ ಹಳ್ಳಿಗೆ ವ್ಯಾಪಿಸಿದ ಕರೋನ, ಯಾವ್ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟೆಷ್ಟಿದೆ ಪ್ರಕರಣ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021 ಹೊಸನಗರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೂ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳಿವೆ. ಕರೋನ ಹರಡುವುದನ್ನು ತಡೆಯಲು ತಾಲೂಕಿನ ವಿವಿಧೆಡೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಯಾವ್ಯಾವ ಹಳ್ಳಿಯಲ್ಲಿ ಎಷ್ಟಿದೆ ಕೇಸ್? ಹೊಸನಗರ ತಾಲೂಕಿನ ಮಾರುತಿಪುರ, ರಿಪ್ಪನ್‍ಪೇಟೆಯಲ್ಲಿ 30ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಬಾಳೂರು, ಜೇನಿ, ಹೆದ್ದಾರಿಪುರ, ಎಂ.ಗುಡ್ಡೇಕೊಪ್ಪ, ಮುಂಬಾರು, ಮೂಡುಗುಪ್ಪ- ನಗರ ವ್ಯಾಪ್ತಿಯಲ್ಲಿ 20ಕ್ಕಿಂತಲೂ ಹೆಚ್ಚು ಕರೋನ … Read more

ಶಿವಮೊಗ್ಗದಲ್ಲಿ ಕರೋನ ಅಟ್ಟಹಾಸ, ಒಂದೆ ದಿನ ತಾಯಿ, ಮಗ ಸಾವು, ಮಗಳ ಹುಟ್ಟುಹಬ್ಬದಂದೆ ಅಪ್ಪ ಕೊನೆಯುಸಿರು

100520 Corona Positive In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 MAY 2021 ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾದ ಕರಾಳತೆ ಮುಂದುವರೆದಿದೆ. ಇಲ್ಲಿನ ಬಸವನಗುಡಿಯಲ್ಲಿ ಕೆಲವೆ ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಇದಕ್ಕೆ ಮಹಾಮಾರಿ ಕರೋನಾವೆ ಕಾರಣವಾಗಿದೆ. ಬಸವನಗುಡಿ ನಾಲ್ಕನೆ ಅಡ್ಡರಸ್ತೆಯ ಪ್ಲಾಸ್ಟಿಕ್ ವ್ಯಾಪಾರಿ ಸುರೇಶ್ ಕರೋನಾಗೆ ತುತ್ತಾಗಿದ್ದರು. ಕಳೆದ ಹತ್ತು ದಿನದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತಾದರೂ, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸ್ಥಿತಿ ಗಂಭೀರವಾಗಿದೆ.  ವೈದ್ಯರು ಈ ವಿಚಾರವನ್ನು ಸುರೇಶ್ ಅವರ … Read more

‘ಗ್ರಾಮ ಸಭೆ ಕರೆದು ಜನರ ಮುಂದೆ ರಾಜೀನಾಮೆ ಕೊಡ್ತೀನಿ’

ಶಿವಮೊಗ್ಗ ಲೈವ್.ಕಾಂ | HOSANAGARA NEWS | 21 MAY 2021 ಪಂಚಾಯಿತಿ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರದಿಂದ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ರಾಜೀನಾಮೆಯ ನಿರ್ಧಾರ ಮಾಡಿದ್ದಾರೆ. ರಾಮಚಂದ್ರಾಪುರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಓ ಸೇರಿಕೊಂಡು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತು ರಾಜೀನಾಮೆಗೆ ನಿರ್ಧರಿಸಿದ್ದೇನೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಾಹಬುದೀನ್ ಆದೀಲ್ ತಿಳಿಸಿದ್ದಾರೆ. ರಾಮಚಂದ್ರಾಪುರ ಗ್ರಾಮ ಪಂಚಾಯಿತಿಯಲ್ಲಿ ಐವರು ಬಿಜೆಪಿ ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲದಿಂದ ತಾವೊಬ್ಬರೆ ಆಯ್ಕೆಯಾಗಿದ್ದೇನೆ. ಗ್ರಾಮ … Read more

ಹೊಸನಗರದಲ್ಲಿ ಪಿಡಿಒಗೆ ಸಂಕಷ್ಟ ತಂದ ಮದುವೆ ಮನೆ ಬಾಡೂಟ

ಶಿವಮೊಗ್ಗ ಲೈವ್.ಕಾಂ | HOSANAGARA / RIPPONPETE NEWS | 22 MAY 2021 ಮದುವೆ ಬಳಿಕ ನಡೆದ ಬಾಡೂಟ ಕಾರ್ಯಕ್ರಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರ ಅಮಾನತಿಗೆ ಕಾರಣವಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ನಡೆದರೂ ತಡೆಯುವಲ್ಲಿ ವಿಫಲವಾದ ಆರೋಪದ ಮೇಲೆ ಪಿಡಿಒ ಅವರನ್ನು ಅಮಾನತುಪಡಿಸಲಾಗಿದೆ. ರಿಪ್ಪನ್‍ ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಾಡೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ ಹಿನ್ನೆಲೆ ಪಿಡಿಒ ಹೆಚ್‍.ರಾಘವೇಂದ್ರ ಅವರು ಸಿಬ್ಬಂದಿಯೊಬ್ಬರನ್ನು ಕಳುಹಿಸಿ, ಪರಿಶೀಲನೆ ನಡೆಸಿದ್ದರು. … Read more