ಸಕ್ರೆಬೈಲು ಆನೆ ಬಿಡಾರಕ್ಕೆ ತಲುಪಿದ ನೆರವು, ಕಡೆಗಣನೆಯಾಗಿದ್ದ ಕಾವಾಡಿಗಳಿಗೆ ವೈಲ್ಡ್ ಟಸ್ಕರ್ ‘ಅಭಯ’

Sakrebyle Elephant Camp General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 JUNE 2021 ಕೊರೊನಾ ಲಾಕ್ ಡೌನ್ ಸಂದರ್ಭ ಬಡವರಿಗೆ ವಿವಿಧ ಕ್ಷೇತ್ರಗಳಲ್ಲಿ ತೊಂದರೆಗೊಳದಾವರಿಗೆ ವಿವಿಧ ಸಂಘಸಂಸ್ಥೆಗಳು ಹಾಗು ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ. ಆದರೆ ಜೀವವನ್ನು ಪಣಕ್ಕಿಟ್ಟು ಪ್ರತಿದಿನ ಆನೆಗಳೊಂದಿಗೆ ಕರ್ತವ್ಯ ನಿರ್ವಹಿಸುವ ಮಾವುತ ಕಾವಾಡಿಗಳನ್ನು ಸರ್ಕಾರ ಕಡೆಗಣಿಸಿದಂತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಗುತ್ತಿಗೆ ಕಾವಾಡಿಗಳು ಸಂಕಷ್ಟದಲ್ಲಿದ್ದಾರೆ. ಆನೆ ಸಿಬ್ಬಂದಿಗಳ ಸಮಸ್ಯೆ ಅರಿತಿರುವ ವೈಲ್ಡ್ ಟಸ್ಕರ್ ಸಂಸ್ಥೆ ಕಾವಾಡಿಗಳಿಗೆ ಆಹಾರದ ಕಿಟ್ ವಿತರಿಸುವ ಮೂಲಕ ನೈತಿಕ ಸ್ಥೈರ್ಯ ತುಂಬಿದೆ. … Read more

ತರಕಾರಿ, ದಿನಸಿ ತಲುಪದ ಹಳ್ಳಿಗಳಲ್ಲೂ ಸಿಕ್ತಿದೆ ಮದ್ಯ, ಸಿಎಂಗೆ ದೂರು ಕೊಡಲು ರೆಡಿಯಾದ್ರು ತೀರ್ಥಹಳ್ಳಿ ಶಾಸಕ

050621 ThirthahaCoronalli MLA Corona meeting 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 5 JUNE 2021 ಲಾಕ್ ಡೌನ್ ಅವಧಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕರೋನಾ ತಡೆಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಆರಗ ಜ್ಞಾನೇಂದ್ರ, ಅಬಕಾರಿ ಮತ್ತು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಹಿರಿಯ ಅಧಿಕಾರಿಗಳಿಗೆ ಕರೆ … Read more

ಲಾರಿ ಹತ್ತಿ ಡ್ರೈವರ್ ಸೀಟ್ ಹಿಂಭಾಗ ಕುಳಿತಿದ್ದ ನಾಗರ ಹಾವು ರಕ್ಷಣೆ

050621 Snake in truck at haranahalli 1

ಇನ್ಮುಂದೆ ಕರೋನ ಪರೀಕ್ಷೆಗೆ ಆಸ್ಪತ್ರೆಗೆ ಹೋಗೋದೆ ಬೇಡ. ನಿಮ್ಮ ಮನೆಗೆ ಬಂದು ಸ್ವ್ಯಾಬ್ ಪಡೆಯಲಾಗುತ್ತದೆ. ಇಲ್ಲಿರುವ ನಂಬರ್‍ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ. ಶಿವಮೊಗ್ಗ ಲೈವ್.ಕಾಂ | SHIMOGA NEWS | 5 JUNE 2021 ಲಾರಿಯೊಳಗೆ ಸೇರಿದ್ದ ನಾಗರ ಹಾವನ್ನು ಉರಗ ಪ್ರೇಮಿ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಲಾರಿಯೊಳಗೆ ಚಾಲಕನ ಹಿಂಬದಿಯ ಸೀಟಿನ ಅಡಿಯಲ್ಲಿ ನಾಗರ ಹಾವು ಇತ್ತು. ಸುರೇಶ್ ಎಂಬುವವರಿಗೆ ಸೇರಿದ ಲಾರಿಯೊಳಗೆ ಹಾವು ಇರುವುದು ರಾತ್ರಿ ವೇಳೆ ಗೊತ್ತಾಗಿದೆ. ಕುಡಲೆ ಸ್ನೇಕ್ … Read more

ನಿವೃತ್ತಿಗೆ ಇನ್ನೊಂದೆ ತಿಂಗಳಿದ್ದಾಗ ಕರೋನಾಗೆ ಪಿಎಸ್ಐ ಸಾವು, ಸಾಗರ ಎಂಎಲ್ಎ ಕಂಬನಿ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 5 JUNE 2021 ಕರೋನ ಸೋಂಕಿಗೆ ತುತ್ತಾಗಿ ಭದ್ರಾವತಿ ಟ್ರಾಫಿಕ್ ಠಾಣೆ ಸಬ್ ಇನ್ಸ್‍ ಪೆಕ್ಟರ್ ಕೊನೆಯುಸಿರೆಳೆದಿದ್ದಾರೆ. ಹೋಂ ಐಸೊಲೇಷನ್‍ಗೆ ಒಳಗಾಗಿದ್ದ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಬ್ ಇನ್ಸ್‍ ಪೆಕ್ಟರ್‍ ಕೆ.ಬಿ.ರಮೇಶ್ ಅವರಿಗೆ ಮೇ 14ರಂದು ಸೋಂಕು ತಗುಲಿತ್ತು. ಹಾಗಾಗಿ ಹೋಂ ಐಸೊಲೇಷನ್‍ಗೆ ಒಳಗಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ರಮೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ … Read more

ವಿಮಾನ ನಿಲ್ದಾಣ ಆವರಣದಲ್ಲಿನ ವಿದ್ಯುತ್ ಮಾರ್ಗ ಸ್ಥಳಾಂತರ, ಶಿವಮೊಗ್ಗ ತಾಲೂಕಿನ ವಿವಿಧೆಡೆ ಜೂ.5ರಂದು ಕರೆಂಟ್ ಇರಲ್ಲ

power cut graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 JUNE 2021 ಸೋಗಾನೆಯಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿ ಹಾದು ಹೋಗಿರುವ 11 ಕೆ.ವಿ. ವಿದ್ಯುತ್ ಮಾರ್ಗವನ್ನು ಸ್ಥಳಾಂತರ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಶಿವಮೊಗ್ಗ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೂನ್ 5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಂತೆಕೋಡೂ ಗ್ರಾಮದಲ್ಲಿರುವ ವಿದ್ಯುತ್ ವಿತರಣಾ … Read more

ಬಾಳೆಬರೆ ಘಾಟಿ ಜೂನ್ 15ರವರೆಗೆ ಬಂದ್, ಕುಂದಾಪುರಕ್ಕೆ ತೆರಳಲು ನಾಲ್ಕು ಪರ್ಯಾಯ ಮಾರ್ಗ ರೆಡಿ

Balebare Hulikal Ghat Thirthahali Hosanagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 JUNE 2021 ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಕಾಂಕ್ರಿಟ್ಕ ಪೇವ್‍ಮೆಂಟ್‍ ನಿರ್ಮಿಸುವ ಹಿನ್ನೆಲ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ. ಬಾಳೆಬರೆ ಘಾಟ್‍ನಲ್ಲಿ 1500 ಮೀಟರ್‍ನಷ್ಟು ಕಾಂಕ್ರಿಟ್ ಪೇವ್‍ಮೆಂಟ್‍ ಕಾಮಗಾರಿ ನಡೆಸಬೇಕಿದೆ. ಹಾಗಾಗಿ ಮೇ 22ರಿಂದ ಜೂನ್ 5ರವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆದರೆ ಈ ನಿಷೇಧದ ಅವಧಿಯನ್ನು ಜೂನ್ 15ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ … Read more

5ಜಿ ಯುಗದಲ್ಲೂ ಇಲ್ಲ ಸಿಗ್ನಲ್, ನೆಟ್​​​ವರ್ಕ್​ಗಾಗಿ ಮರದಡಿ ಟೆಂಟ್, ಆನ್​​ಲೈನ್ ಕ್ಲಾಸ್​​ಗಾಗಿ​​​ 12 ಕಿ.ಮೀ ಹೋಗ್ತಾರೆ ಸ್ಟೂಡೆಂಟ್ಸ್

030621 No Network In Varamaballi At Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA / SAGARA NEWS | 3 JUNE 2021 ಸ್ಥಳ : ವಾರಂಬಳ್ಳಿ , ಹೊಸನಗರ ತಾಲೂಕು   ವರ್ಕ್ ಫ್ರಂ ಹೋಂ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ಬಂದಿರುವ ಸಿಂಧು. ಮನೆ ಬಳಿ ಮೊಬೈಲ್ ನೆಟ್‍ ವರ್ಕ್‍ ಸಿಗುತ್ತಿಲ್ಲ. ಊರಾಚೆಗೆ ಸಿಗ್ನಲ್ ಸಿಗುವ ಕಡೆ, ಟೆಂಟ್ ನಿರ್ಮಿಸಿ ಕೆಲಸ ಮಾಡುತ್ತಿದ್ದಾರೆ. ಸ್ಥಳ : ವಾರಂಬಳ್ಳಿ, ಹೊಸನಗರ ತಾಲೂಕು ಅಪರೂಪಕ್ಕೆ ಸಿಗುತ್ತಿದ್ದ ನೆಟ್‍ ವರ್ಕ್‍ ಮಳೆ ಸುರಿದಿದ್ದರಿಂದ ಮಾಯವಾಗಿತ್ತು. ಪುನಃ ನೆಟ್‍ ವರ್ಕ್‍ … Read more

ಮಧ್ಯರಾತ್ರಿ ದನಗಳ್ಳರು ಸಿನಿಮೀಯ ರೀತಿಯಲ್ಲಿ ಎಸ್ಕೇಪ್, ಕಾರಿನಲ್ಲಿ ಚೇಸ್ ಮಾಡಿದ ವಿಡಿಯೋ ವೈರಲ್

030621 Cow thieves car chase in Thirthahalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 3 JUNE 2021 ದನ ಕಳ್ಳತನ ಮಾಡಲು ಬಂದವರು ಸ್ಥಳೀಯರು ಕಂಡು ಸಿನಿಮೀಯ ರೀತಿಯಲ್ಲಿ ಕಾರು ಚಲಾಯಿಸಿ ಎಸ್ಕೇಪ್ ಆಗಿದ್ದಾರೆ. ಸುಮಾರು ಒಂದು ಕಿಲೋ ಮೀಟರ್‍ನಷ್ಟು ದೂರ ರಿವರ್ಸ್ ಗೇರ್‍ನಲ್ಲೇ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ. ತೀರ್ಥಹಳ್ಳಿಯ ಕುವೆಂಪು ಸರ್ಕಲ್‍ನಲ್ಲಿ ಇದ್ದ ಜಾನುವಾರು ಅಪಹರಿಸಲು ಗೋ ಕಳ್ಳರು ಬಂದಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಅದೇ ಮಾರ್ಗದಲ್ಲಿ ಎದುರಿನಿಂದ ಬಂದ ಯುವ ಕಾಂಗ್ರೆಸ್ ಮುಖಂಡ ಸುದೀಪ್ ಶೆಟ್ಟಿ ಮತ್ತು ಜಾವೇದ್ … Read more

ಕಳ್ಳಭಟ್ಟಿ ಕಾಯಿಸುತ್ತಿದ್ದಾಗಲೇ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ, ಅಮ್ಮ, ಮಗ ಎಸ್ಕೇಪ್

020621 Kallabatti at Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 2 JUNE 2021 ಜಿಲ್ಲೆಯಲ್ಲಿ ಒಂದು ವಾರ ಕಠಿಣ ಲಾಕ್ ಡೌನ್ ಜಾರಿಯಾಗುತ್ತಿದ್ದಂತೆ ಮದ್ಯದಂಗಡಿಗಳು ಬಂದ್ ಆಗಿವೆ. ಇದರಿಂದ ಕಳ್ಳಭಟ್ಟಿಗೆ ಡಿಮಾಂಡ್ ಬಂದಿದೆ. ಶಿಕಾರಿಪುರದಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯೊಂದರ ಮೇಲೆ ಅಬಕಾರಿ ಇಲಾಖೆ ಅಧಿಕಾರಿ ನಡುರಾತ್ರಿ ದಾಳಿ ನಡೆಸಿದ್ದಾರೆ. ಶಿಕಾರಿಪುರ ತಾಲೂಕು ಮಳವಳ್ಳಿ ತಾಂಡದ ಮಲ್ಲಪ್ಪನ ಕಟ್ಟೆ ಕೆರೆ ದಡದಲ್ಲಿ ಕಳ್ಳಬಟ್ಟಿ ಕಾಯಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಳ್ಳಭಟ್ಟಿ ಕಾಯಿಸುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊತ್ತಿ ಉರಿಯುತ್ತಿತ್ತು ಬೆಂಕಿ … Read more

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂದಿರಾ ಕ್ಯಾಂಟೀನ್

020621 Thirthahalli Indira Canteen by congress Party 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 2 JUNE 2021 ಕರೋನ ಸಂಕಷ್ಟ ಕಾಲದಲ್ಲಿ ಜನರ ಹಸಿವು ನೀಗಿಸಲು ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಇಂದಿರಾ ಕ್ಯಾಂಟೀನ್‍ಗೆ ಇವತ್ತು ಚಾಲನೆ ನೀಡಿದರು. ಹೈಸ್ಕೂಲ್ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಬೆಳಗ್ಗೆ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ 9.30ರವರೆಗೆ ಉಪಹಾರ ಇರುತ್ತದೆ. ಮಧ್ಯಾಹ್ನ 12.30ರಿಂದ 2 ಗಂಟೆವರೆಗೆ ಊಟದ ವ್ಯವಸ್ಥೆ … Read more