ಸಾಗರ ಮಾರಿಕಾಂಬ ಜಾತ್ರೆ, ಹಲವೆಡೆ ವಾಹನ ಸಂಚಾರ ನಿಷೇಧ, ಪಾರ್ಕಿಂಗ್‌ ಇಲ್ಲ, ಮಾರ್ಗ ಬದಲಾವಣೆ, ಎಲ್ಲೆಲ್ಲಿ?

Pendal-Ready-for-sagara-marikamba-jathre

ಸಾಗರ: ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಸಂದರ್ಭ ಸಾಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ, ಭಕ್ತರಿಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ದ್ವಿಚಕ್ರ, ಲಘುವಾಹನಗಳು ಹಾಗೂ ಭಾರಿ ವಾಹನಗಳ ಸಂಚಾರ ನಿಷೇಧ, ನಿಲುಗಡೆ, ಮಾರ್ಗ ಬದಲಾವಣೆ (traffic) ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿದ್ದಾರೆ. ಎಲ್ಲೆಲ್ಲಿ ಏನೇನು ಬದಲಾವಣೆ? ಸಾಗರ ಟೌನ್ ಪೊಲೀಸ್ ಠಾಣೆ ಎದುರಿನ ಜೆ.ಸಿ. ವೃತ್ತದಿಂದ ಜೆ.ಸಿ.ರಸ್ತೆ ಮೂಲಕ ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ವೃತ್ತದವರೆಗೆ ಪ್ಯಾರಲಲ್ ರಸ್ತೆಗಳು, ಅಂಬೇಡ್ಕರ್ ಸರ್ಕಲ್ (ಲಿಂಬು ಸರ್ಕಲ್) ನಿಂದ … Read more

ಆನಂದಪುರ, ಆನವಟ್ಟಿಯಲ್ಲಿ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಆನಂದಪುರಂ: ಸಮೀಪದ ಮಲಂದೂರಿ ನಲ್ಲಿನ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಪ್ರಯುಕ್ತ ಫೆ.3ರಂದು ಬೆ.10 ರಿಂದ ಸಂಜೆ 6ರವರೆಗೆ ಈ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ (power cut) ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಲಾಗಿದೆ. ಆನವಟ್ಟಿಯಲ್ಲಿ ಕರೆಂಟ್‌ ಇರಲ್ಲ ಆನವಟ್ಟಿ: ಕೋಟಿಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಫೆ.3ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. … Read more

ಸಕ್ರೆಬೈಲು ಬಳಿ ಬಸ್ಸು ಕಾರು ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

030226 Car and bus collision at sakrebailu in Shimoga

ಶಿವಮೊಗ್ಗ: ಸಕ್ರೆಬೈಲು ಸಮೀಪ ಕಾರು ಮತ್ತು ಖಾಸಗಿ ಬಸ್ ಮಧ್ಯೆ ಸೋಮವಾರ ಡಿಕ್ಕಿ (collision) ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಮಾಸ್ತಿಕಟ್ಟೆ ನಿವಾಸಿಗಳಾದ ರಕ್ಕಪ್ಪಗೌಡ ಮತ್ತು ಭಾಸ್ಕರ್ ಎಂಬುವವರು ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗದ ಕಡೆಗೆ ತೆರಳುವಾಗ ಘಟನೆ ನಡೆದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂ ಆಗಿದೆ. ಅಪಘಾತದ ಹಿನ್ನೆಲೆ ಸಕ್ರೆಬೈಲು ಬಳಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ ಸೆಂಟ್ರಲ್‌ ಜೈಲ್‌ ಒಳಗೆ ರಾತ್ರಿ ತೂರಿ … Read more

ಸಾಗರದ ಮಾರಿಕಾಂಬ ದೇವಿ ಜಾತ್ರೆ ಆರಂಭ, ತವರು ಮನೆಯಲ್ಲಿ ದೇವಿಯ ದರ್ಶನ, ಹೇಗಿತ್ತು ವೈಭವ?

ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ದೇವಿ ಜಾತ್ರೆ (Marikamba Jathre) ಇಂದಿನಿಂದ ಆರಂಭವಾಗಲಿದೆ. ತವರು ಮನೆಯಲ್ಲಿ ತಾಯಿ ದರ್ಶನ ನೀಡುತ್ತಿದ್ದು, ರಾತ್ರಿಯಿಂದಲೇ ಸಾವಿರಾರು ಜನರು ಸರತಿಯಲ್ಲಿ ನಿಂತು ದೇವಿಯನ್ನು ಕಣ್ತುಂಬಿಕೊಂಡರು. ಇವತ್ತು ಸಾಗರದ ಮಹಾಗಣಪತಿ ದೇವಸ್ಥಾನದಲ್ಲಿ ಮಾಂಗಲ್ಯ ಪೂಜೆ, ಬ್ರಾಹ್ಮಿ ಮುಹೂರ್ತದಲ್ಲಿ ತಾಯಿಗೆ ದೃಷ್ಟಿ ಇಡುವುದು, ಮಾಂಗಲ್ಯ ಧಾರಣೆ ಕಾರ್ಯಕ್ರಮ ನಡೆಯಿತು. ಬೆಳಗಿನ ಜಾವ 3 ಗಂಟೆಗೆ ಅರ್ಚಕರ ಮನೆಯಲ್ಲಿ ಪೂಜೆ ನಡೆಯಿತು. ಬಳಿಕ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಮಂಗಳ ದ್ರವ್ಯ ತರಲಾಯಿತು. ದೇವಿಯ ತವರು ಮನೆಯಲ್ಲಿ ಉತ್ಸವ ಮೂರ್ತಿಗೆ … Read more

ಹೊಂಬುಜದಲ್ಲಿ ವಿಶೇಷ ಪೂಜೆ, ದಾಖಲೆ ಸೇರಿತು ಜಿನ ನಾಮಸ್ಮರಣೆ, ಏನಿದು?

Special-Pooja-at-hombuja-jain-mutt

ರಿಪ್ಪನ್‌ಪೇಟೆ: ಹೊಂಬುಜ ಕ್ಷೇತ್ರದಲ್ಲಿ ವಿಶ್ವ ಶಾಂತಿ ಯುವ ಸೇವಾ ಸಮಿತಿಯಿಂದ ಜಿನ ಸಹಸ್ರ ನಾಮಾರ್ಚನೆಯ (Jina Namasmarane) ಪೂಜೆ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು. ಹೊಂಬುಜ ಜೈನ ಮಠಾಧೀಶರಾದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶಾಸ್ತ್ರದನ್ವಯ ಪೂಜೆಗಳನ್ನು ಸಲ್ಲಿಸಲಾಯಿತು. ಇದನ್ನೂ ಓದಿ – ಕೋಟೆ ದೇಗುಲ, ವೈಭವದ ಬ್ರಹ್ಮರಥೋತ್ಸವ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು? ಬಳಿಕ ಆಶೀರ್ವಚನ ನೀಡಿದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿನನಾಮ ಸ್ತುತಿಸುವುದೆಂದರೆ ಕರ್ಮಕ್ಷಯ ಮಾಡಿದಂತಾಗುವುದು. ಆತೋನ್ನತಿಯ ನೈಜ ಸನ್ಮಾರ್ಗವು ಜಿನ ಸಹಸ್ರನಾಮ ಅರ್ಚನೆಯ ಮೂಲಕ ದೊರೆಯಲಿದೆ … Read more

ಭದ್ರಾವತಿ ತಾಲೂಕಿನ ವ್ಯಕ್ತಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ, ₹50,500 ದಂಡ, ಕಾರಣವೇನು?

Bhadravathi-News-Update

ಶಿವಮೊಗ್ಗ: ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಆರೋಪಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಕಠಿಣ ಕಾರಾವಾಸ (imprisonment) ಹಾಗೂ ₹50,500 ದಂಡ ವಿಧಿಸಿ ತೀರ್ಪು ನೀಡಿದೆ. ಭದ್ರಾವತಿ ತಾಲೂಕಿನ ಅಗರದಹಳ್ಳಿಯ ನಿವಾಸಿ ಎ.ವಿ.ಸುರೇಶ್ (54) ತಮ್ಮ ಮನೆ ಬಳಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಇದರಿಂದ ಮಕ್ಕಳಿಗೆ ಓದಲು ತೊಂದರೆಯಾಗುತ್ತಿದೆ. ನಿಲ್ಲಿಸುವಂತೆ ಪಕ್ಕದ ಮನೆಯವರು ಮನವಿ ಮಾಡಿದ್ದರು. ಈ ವೇಳೆ ಆರೋಪಿ ಸುರೇಶ್ ಅವಾಚ್ಯ ಶಬ್ದಗಳಿಂದ ಬೈದು, … Read more

ಎಟಿಎಂನಲ್ಲಿ ದುಡ್ಡು ಬರಲಿಲ್ಲ ಅಂತಾ ಬ್ಯಾಂಕ್‌ಗೆ ತೆರಳಿದ ಭದ್ರಾವತಿಯ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

crime name image

ಭದ್ರಾವತಿ: ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಬಂದಿದ್ದ ವೃದ್ಧರೊಬ್ಬರ ಕಾರ್ಡ್ ಬದಲಿಸಿ (cheated), ಅವರ ಖಾತೆಯಿಂದ ಒಂದು ಲಕ್ಷ ಹಣ ದೋಚಿರುವ ಘಟನೆ ಭದ್ರಾವತಿಯ KSRTC ಬಸ್ ನಿಲ್ದಾಣದ ಮುಂಭಾಗದ ಎಟಿಎಂನಲ್ಲಿ ಜರುಗಿದೆ. ಜನವರಿ 12ರಂದು ಕೃತ್ಯ ನಡೆದಿದ್ದು ತಡವಾಗಿ ದೂರು ದಾಖಲಾಗಿದೆ. ಸಿದ್ಧಾರೂಢನಗರದ ಸದಾಶಿವಪ್ಪ ಜಿ.ಕೆ ಅವರು ಹಣ ಡ್ರಾ ಮಾಡಲು ಕೆನರಾ ಬ್ಯಾಂಕ್ ಎಟಿಎಂಗೆ ತೆರಳಿದ್ದರು. ಈ ವೇಳೆ ಎಟಿಎಂನಿಂದ ಹಣ ಬಾರದೇ ಇದ್ದಾಗ, ಅಲ್ಲೇ ಇದ್ದ ಸುಮಾರು 25-30 ವರ್ಷದ ಅಪರಿಚಿತ … Read more

ಶಿವಮೊಗ್ಗದ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸಿದ ಬಳಿಕ ಕಾರ್ಮಿಕನಿಗೆ ರಕ್ತವಾಂತಿ, ಸಾವು

Areca-Farm-Adike-tota-in-Shimoga

ಶಿವಮೊಗ್ಗ: ತಾಲೂಕಿನ ಶ್ರೀರಾಂಪುರ ಗ್ರಾಮದ ಅಡಿಕೆ ತೋಟವೊಂದರಲ್ಲಿ ಅಡಿಕೆ ಮರಗಳಿಗೆ ಔಷಧಿ (pesticide) ಸಿಂಪಡಣೆ ಮಾಡುವ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ತೋಟದ ಮಾಲೀಕನ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಂಜಾನಾಯ್ಕ ಎಂಬ ಕಾರ್ಮಿಕ ಶ್ರೀರಾಂಪುರದ ಏಕಾಂತಪ್ಪ ಎಂಬುವವರ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ಮರಳಿದಾಗ ತೀವ್ರ ಕೆಮ್ಮು, ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೆ ಮಂಜಾನಾಯ್ಕ ಅವರನ್ನು ಗಾಡಿಕೊಪ್ಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಮನೆಗೆ … Read more

ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

stranded-leopard-cub-rescued-at-Thirthahalli

ತೀರ್ಥಹಳ್ಳಿ: ನೊಣಬೂರು ಗ್ರಾಮದ ಅಂಬುತೀರ್ಥ ಅರಣ್ಯ ಪ್ರದೇಶದಲ್ಲಿ ಅತಂತ್ರವಾಗಿದ್ದ ಚಿರತೆ ಮರಿಯನ್ನು (leopard cub) ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸೇರಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಆಹಾರದ ಅಭಾವದಿಂದ ಕೂಗುತ್ತಿದ್ದ ಮರಿಯು ನಾಯಿಗಳ ದಾಳಿಗೆ ತುತ್ತಾಗುವ ಸಾಧ್ಯತೆಯಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ, ಹೆಚ್ಚಿನ ಚಿಕಿತ್ಸೆಗಾಗಿ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಯೊಂದು ಪ್ರಾಣಿಗಳಿಗೆ ಹೊಂಚು ಹಾಕುತ್ತಿತ್ತು. ಒಂದೆರಡು ಹಸುಗಳನ್ನು ಬೇಟೆಯಾಡಿರುವ ಶಂಕೆಯೂ ಇತ್ತು. ಅಧಿಕಾರಿ … Read more

ನಗದು ತುಂಬಿದ್ದ ಪರ್ಸ್‌ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

honest-residents-of-Ayanur-return-a-lost-purse

ಆಯನೂರು: ‌ದೇವಸ್ಥಾನದ ಬಳಿ ಸಿಕ್ಕ ಪರ್ಸ್ (purse) ಅನ್ನು ಆಯನೂರು ನಿವಾಸಿಗಳು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇದನ್ನೂ ಓದಿ – ಶಿವಮೊಗದಲ್ಲಿ ವಿದ್ಯಾರ್ಥಿಗಳೇ ಟ್ರಾಫಿಕ್‌ ಪೊಲೀಸರಾದರು, ಸಂಚಾರ ನಿಯಂತ್ರಿಸಿದರು, ಕಾರಣವೇನು? ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಅವರಿಗೆ ಜನವರಿ 17ರಂದು ಆಯನೂರು ಸರ್ಕಲ್‌ನ ಗಣಪತಿ ದೇವಸ್ಥಾನದ ಮುಂಭಾಗ ಪರ್ಸ್‌ ಸಿಕ್ಕಿತ್ತು. ಅದರಲ್ಲಿ ₹10,000 ನಗದು ಮತ್ತು ಪ್ರಮುಖ ದಾಖಲೆಗಳಿದ್ದವು. ತಕ್ಷಣವೇ ಅದನ್ನು ಕುಂಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ಒಪ್ಪಿಸಿದ್ದರು. ಪರ್ಸ್‌ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಪೊಲೀಸರು … Read more