ಸಾಗರಕ್ಕೆ ಶೃಂಗೇರಿ ಶ್ರೀ, ಸುರಿವ ಮಳೆಯಲ್ಲೂ ವೈಭವದ ಸ್ವಾಗತ, ಭಕ್ತರಿಗೆ ಆಶೀರ್ವಾದ

Sringeri-Seer-visits-Sagara-in-Shimoga-district-Beluru-Gopalakrishna-visit

SHIVAMOGGA LIVE NEWS | 24 JUNE 2024 SAGARA : ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಭಾನುವಾರ ಸಂಜೆ ಶೃಂಗೇರಿ (Sringeri) ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಸಾಗರಕ್ಕೆ ಆಗಮಿಸಿದರು. ಸಾಗರದ ಶಾರದಾಂಬಾ ದೇವಸ್ಥಾನದಲ್ಲಿ ಭಕ್ತರಿಗೆ ಆಶೀರ್ವಾದ ನೀಡಿದರು. ಸುರಿವ ಮಳೆಯಲ್ಲೂ ವೈಭವದ ಸ್ವಾಗತ ಸುರಿಯುತ್ತಿರುವ ಮಳೆಯಲ್ಲೇ ಭಕ್ತರು ಶ್ರೀಗಳಿಗೆ ಭವ್ಯ ಸ್ವಾಗತ ಕೋರಿದರು. ಮಂತ್ರಘೋಷದೊಂದಿಗೆ ಸಾಗರದ ಶಿವಪ್ಪ ನಾಯಕ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. … Read more

ಯುವತಿಗೆ ವಂಚನೆ, ಹಸೆಮಣೆ ಏರಲು ಸಜ್ಜಾಗಿದ್ದ ಸಾಗರ ಬಿಜೆಪಿ ಮುಖಂಡ ಅರೆಸ್ಟ್‌

BJP-Leader-Arun-Kugwe-arrested-by-Police

SHIVAMOGGA LIVE NEWS | 24 JUNE 2024 SAGARA : ಪೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿ 23 ವರ್ಷದ ಯುವತಿಗೆ ವಂಚಿಸಿರುವ ಆರೋಪದ ಹಿನ್ನೆಲೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಗ್ವೆಯನ್ನು ಸಾಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ನೀಡಿದ್ದಳು. ಇನ್ಸ್‌ಪೆಕ್ಟರ್‌ ಭರತ್‌ ಕುಮಾರ್‌ ನೇತೃತ್ವದ ತಂಡ ಸಾಗರಕ್ಕೆ ತೆರಳಿ ಮನೆಯಲ್ಲಿದ್ದ ಅರುಣ್‌ ಕುಗ್ವೆಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ … Read more

ಬೈಕ್‌ಗೆ ಕಾರು ಡಿಕ್ಕಿ, ಸಾಗರದ ಎಲ್‌.ಬಿ ಕಾಲೇಜು ವಿದ್ಯಾರ್ಥಿನಿ ಸಾವು

LB-College-Student-anusha-Succumbed-in-a-mishap.

SHIVAMOGGA LIVE NEWS | 24 JUNE 2024 SAGARA : ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ (Bike) ತೆರಳುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಸಾಗರ ತಾಲೂಕು ಕುಗ್ವೆ ಬಳಿ ಘಟನೆ ಸಂಭವಿಸಿದೆ. ಕುಂದಾಪುರದ ಅನುಷಾ(20) ಮೃತ ವಿದ್ಯಾರ್ಥಿನಿ. ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ಓದುತ್ತಿದ್ದಳು. ಬೈಕ್‌ನಲ್ಲಿ ಸ್ನೇಹಿತೆ ಜತೆಗೆ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಅದೇ ಮಾರ್ಗದಲ್ಲಿ ಜೋಗದ ಕಡೆಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅನುಷಾಳನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ … Read more

ಡೆಂಗ್ಯುಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವು

Sagara Government Hospital

SHIVAMOGGA LIVE NEWS | 22 JUNE 2024 SORABA : ಡೆಂಗ್ಯು (Dengue) ಜ್ವರದಿಂದ ಬಳಲುತ್ತಿದ್ದ ಸೊರಬ ತಾಲ್ಲೂಕಿನ ಶಿಗ್ಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಸಂತಾ (40) ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜ್ವರ, ವಾಂತಿ ಹಿನ್ನೆಲೆ ವಸಂತಾ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಡೆಂಗ್ಯು ಪತ್ತೆಯಾಗಿತ್ತು. ಶುಕ್ರವಾರ ಅವರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ – ರಾತ್ರೋರಾತ್ರಿ ಪೊಲೀಸ್‌ ಠಾಣೆಗೆ ಬಂದು ಪೊಲೀಸರ … Read more

ಸಾಗರ ಪಟ್ಟಣದ ಹಲವು ಕಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಯಾವ್ಯಾವ ಬಡಾವಣೆ?

POWER-CUT-UPDATE-NEWs ELECTRICITY

SHIVAMOGGA LIVE NEWS | 19 JUNE 2024 SAGARA : ತುರ್ತು ಕಾಮಗಾರಿ ಕಾರಣ ಜೂ. 19ರಂದು ಸಾಗರ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ (Electricity) ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ವಿನೋಬನಗರ, ಕುಗ್ವೆ, ಲೋಹಿಯ ನಗರ, ಪ್ರಗತಿ ನಗರ, ವರದಹಳ್ಳಿ ರಸ್ತೆ, ಎಲ್.ಬಿ ನಗರ, ಜನ್ನತ್ ನಗರ, ಬಿ.ಎಚ್. ರಸ್ತೆ, ಕೃಷ್ಣ ಗ್ಯಾರೇಜ್ ರಸ್ತೆ, ಮೀನು ಮಾರುಕಟ್ಟೆ, ನೆಹರು ನಗರ, … Read more

ಸಿಗಂದೂರು ಲಾಂಚ್‌, ಸ್ಥಳ ಪರಿಶೀಲನೆ ಬಳಿಕ ಕಡವು ನಿರೀಕ್ಷಕರಿಂದ ಮಹತ್ವದ ಪತ್ರ

Sigandur-Launch-in-sharavathi-back-water.

SHIVAMOGGA LIVE NEWS | 18 JUNE 2024 SAGARA : ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ತಗ್ಗಿದೆ. ಈ ಹಿನ್ನೆಲೆ ಜೂನ್‌ 19ರಿಂದ ಸಿಗಂದೂರು ಲಾಂಚ್‌ನಲ್ಲಿ (Launch) ವಾಹನಗಳ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಲಸಾರಿಗೆ ಮಂಡಳಿಯ ಶಿವಮೊಗ್ಗ ವಲಯದ ಕಡವು ನಿರೀಕ್ಷಕ ಸಾಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಅಂಬರಗೋಡ್ಲು ಕಳಸವಳ್ಳಿ ಮಾರ್ಗದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಕಡಿಮೆಯಾಗಿದೆ. ಸ್ಥಳ ಪರಿಶೀಲನೆ ವೇಳೆ, ಬಸ್ಸು ಸೇರಿದಂತೆ ಯಾವುದೇ ವಾಹನಗಳನ್ನು … Read more

ಖಚಿತ ಮಾಹಿತಿ ಮೇರೆಗೆ ಸಾಗರದಲ್ಲಿ ಪೊಲೀಸರ ದಾಳಿ, ಮಾಲು ಸಹಿತ ಮೂವರು ಅರೆಸ್ಟ್‌

Police-raid-at-sagara-three-arrested.

SHIVAMOGGA LIVE NEWS | 18 JUNE 2024 SAGARA : ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಾಗರ ಪೊಲೀಸರು ದಾಳಿ (Raid) ನಡೆಸಿ ಮಾಲು ಸಹಿತ ಮೂವರನ್ನು ಬಂಧಿಸಿದ್ದಾರೆ. ಸಾಗರ ಪಟ್ಟಣದ ಎಳ್ಳಾರೆ ಕ್ರಾಸ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ರಾಘವೇಂದ್ರ, ಹೊಸೂರು ಮರಾಠಿ ಗ್ರಾಮದ ರಮೇಶ್‌, ಕದರೂರು ಗ್ರಾಮದ ಪ್ರವೀಣ್‌ ಬಂಧಿತರು. ಇವರಿಂದ 23 ಸಾವಿರ ರೂ. … Read more

ಬ್ಯಾಂಕ್‌ ಮ್ಯಾನೇಜರ್‌ ಮನೆಯ ಇಂಟರ್‌ ಲಾಕ್‌ ಮುರಿದು ಒಳ ನುಗ್ಗಿದ ಕಳ್ಳರು

281123-Anandapura-Police-Station-Board.webp

SHIVAMOGGA LIVE NEWS | 15 JUNE 2024 ANANDAPURA : ಮನೆಯಲ್ಲಿ ಯಾರೂ ಇಲ್ಲದಾಗ ಬಾಗಿಲಿನ ಇಂಟರ್ ಲಾಕ್ (interlock) ಮುರಿದು ಬಂಗಾರ ಮತ್ತು ಹಣವನ್ನು ಕಳವು ಮಾಡಿದ ಘಟನೆ ಅಂದಾಸುರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕೆನರಾ ಬ್ಯಾಂಕ್ ಮ್ಯಾನೇಜ‌ರ್ ಆಗಿದ್ದ ಅಬ್ದುಲ್ ಅಹಮದ್‌ ಅವರು ಅಂದಾಸುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪದೋನ್ನತಿ ಮೇರೆಗೆ ಅವರಿಗೆ ಮಣಿಪಾಲಕ್ಕೆ ವರ್ಗಾವಣೆಯಾಗಿತ್ತು. ಶನಿವಾರ ಮಣಿಪಾಲಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು, ಮನೆಯನ್ನು ಇನ್ನೂ ಖಾಲಿ ಮಾಡಿರಲಿಲ್ಲ. ಬೀರುವಿನಲ್ಲಿ ಇಟ್ಟಿದ್ದ 330 … Read more

ಡೆಂಗ್ಯುಗೆ ಸಾಗರದ ಆರೋಗ್ಯ ಇಲಾಖೆ ನೌಕರ ಶಿವಮೊಗ್ಗದಲ್ಲಿ ಕೊನೆಯುಸಿರು

health-department-worker-nagaraj-succumbed-to-dengue.

SHIVAMOGGA LIVE NEWS | 13 JUNE 2024 SAGARA : ಮಾರಕ ಡೆಂಗ್ಯು (Dengue) ಕಾಯಿಲೆಗೆ ಸಾಗರದ ಆರೋಗ್ಯ ಇಲಾಖೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಸಾಗರ ತಾಲೂಕು ಆಸ್ಪತ್ರೆ ಡಯಾಲಿಸಿಸ್‌ ವಿಭಾಗದ ಹೊರಗುತ್ತಿಗೆ ನೌಕರ ನಾಗರಾಜ್‌ (35) ಮೃತರು. ನಾಗರಾಜ್‌ ಅವರು ಡೆಂಗ್ಯುಗೆ ತುತ್ತಾಗಿದ್ದರು. ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆಯಾಗಿತ್ತು ಎಂದು ತಿಳಿದು ಬಂದಿದೆ. ಇವತ್ತು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ – ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿ, … Read more

ಶಿವಮೊಗ್ಗ – ತಾಳಗುಪ್ಪ ರೈಲ್ವೆ ಮಾರ್ಗ ಕೊಂಕಣ ರೈಲ್ವೆಗೆ ವಿಸ್ತರಣೆ, ಸಂಸದ ರಾಘವೇಂದ್ರ ಮಹತ್ವದ ಹೇಳಿಕೆ

BY-Raghavendra-and-Dr-Dhananjaya-Sarji-in-sagara.

SHIVAMOGGA LIVE NEWS | 13 JUNE 2024 SAGARA : ಶಿವಮೊಗ್ಗ – ತಾಳಗುಪ್ಪ ರೈಲ್ವೆ ಮಾರ್ಗವನ್ನು ಹೊನ್ನಾವರದವರೆಗೆ ವಿಸ್ತರಿಸಿ ಕೊಂಕಣ (Konkan) ರೈಲ್ವೆ ಮಾರ್ಗದ ವ್ಯಾಪ್ತಿಗೆ ಸೇರಿಸುವ ಯೋಜನೆಗೆ ಮರು ಚಾಲನೆ ನೀಡಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ ತಿಳಿಸಿದರು. ಸಾಗರದ ರಾಘವೇಶ್ವರ ಸಭಾ ಭವನದಲ್ಲಿ ಬಿಜೆಪಿ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಶಿವಮೊಗ್ಗ – ತಾಳಗುಪ್ಪ ರೈಲ್ವೆ ಮಾರ್ಗವನ್ನು ಹೊನ್ನಾವರದವರೆಗೆ ವಿಸ್ತರಿಸಿ ಕೊಂಕಣ … Read more