ಎರಡು ದಿನದಲ್ಲಿ ಎರಡು ಮಂಗಗಳು ಸಾವು, ಸ್ಥಳಕ್ಕೆ ಅಧಿಕಾರಿಗಳು ದೌಡು, ಮರಣೋತ್ತರ ಪರೀಕ್ಷೆ

KARGAL-SAGARA-NEWS-1.jpg

SHIVAMOGGA LIVE NEWS | 18 DECEMBER 2023 SAGARA : ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನದಲ್ಲಿ ಎರಡು ಮಂಗಗಳು ಸಾವನ್ನಪ್ಪಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಜೋಗದ ವರ್ಕ್‌ಮನ್ ಬ್ಲಾಕ್ ಪ್ರದೇಶದಲ್ಲಿ ಒಂದು ಮಂಗ ಸಾವನ್ನಪ್ಪಿದೆ. ಜೋಗದ ರೆಡ್ಡಿ ಬ್ಲಾಕ್ ಪ್ರದೇಶದಲ್ಲಿ ಮತ್ತೊಂದು ಮಂಗ ಮೃತಪಟ್ಟಿದೆ. ವಿಷಯ ತಿಳಿದು ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ … Read more

ಊರಿನಿಂದ ಸಾಗರದ ಮನೆಗೆ ಮರಳಿದ ಮೆಸ್ಕಾಂ ನಿವೃತ್ತ ಇಂಜಿನಿಯರ್‌ ಕುಟುಂಬಕ್ಕೆ ಕಾದಿತ್ತು ಶಾಕ್

House-Theft-in-Shimoga.

SHIVAMOGGA LIVE NEWS | 29 NOVEMBER 2023 SAGARA : ಮೆಸ್ಕಾಂ ನಿವೃತ್ತ ಇಂಜಿನಿಯರ್ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ನಗದು ಹಾಗೂ ಆಭರಣಗಳ ದೋಚಿರುವ ಘಟನೆ ಪಟ್ಟಣದ ವಿಜಯ ನಗರದ ಬಾಪಟ್ ಕಲ್ಯಾಣ ಮಂಟಪ ಹಿಂಭಾಗದಲ್ಲಿ ನಡೆದಿದೆ. ನಿವೃತ್ತ ಇಂಜಿನಿಯರ್ ನಾಗರಾಜ್ ಎಂಬುವರು ಕುಟುಂಬ ಸಮೇತ ಕಾರ್ಯಕ್ರಮವೊಂದಕ್ಕೆ ಸಿದ್ದಾಪುರಕ್ಕೆ ಹೋಗಿದ್ದರು. ಸೋಮವಾರ ಬೆಳಗ್ಗೆ ಹಿಂದಿರುಗಿದಾಗ ಮನೆಯ ಬಾಗಿಲು ಒಡೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬೆಡ್‌ರೂಮ್‌ನಲ್ಲಿದ್ದ ಎರಡು ಬೀರುವಿನ ಬಾಗಿಲು ಒಡೆದು 25 … Read more

ಹಸುಗಳು ಹಿಂತಿರುಗುತ್ತಿಲ್ಲ, ಜಮೀನಿನಲ್ಲಿ ಬೆಳೆ ಉಳಿಯುತ್ತಿಲ್ಲ, ಹೊರಗೆ ಓಡಾಡಲು ಜನರಿಗೆ ಜೀವ ಭಯ

Wild-animals-disturb-Areca-plants-near-channagonda-in-Sagara-Bykodu

SHIVAMOGGA LIVE NEWS | 28 NOVEMBER 2023 BYKODU : ಒಂದೆಡೆ ಚಿರತೆ ಜಾನುವಾರುಗಳನ್ನು ಭಕ್ಷಿಸುತ್ತಿದ್ದು ಮತ್ತೊಂದೆಡೆ ವನ್ಯಜೀವಿಗಳ ದಾಳಿಗೆ ಬೆಳೆ ಹಾನಿ ಸಂಭವಿಸುತ್ತಿದೆ. ಇದರಿಂದ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಜಾನುವಾರುಗಳನ್ನು ಭಕ್ಷಿಸಿದ ಚಿರತೆ ಚನ್ನಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಗ್ಗಲಿನ ಸುತ್ತಮುತ್ತ ಒಂದು ವಾರದಿಂದ ಜಾನುವಾರಗಳ ಮೇಲೆ ಚಿರತೆ ದಾಳಿ ಮಾಡುತ್ತಿದೆ. ಸುಮಾರು ನಾಲ್ಕೈದು ಹಸು, ಕರುಗಳನ್ನು ಹಿಡಿದು ತಿಂದಿದೆ ಎಂದು ಹೇಳಲಾಗುತ್ತಿದೆ. … Read more

ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಲಾರಿ ಹರಿದು ವ್ಯಕ್ತಿ ಸಾವು

281123-Anandapura-Police-Station-Board.webp

SHIVAMOGGA LIVE NEWS | 28 NOVEMBER 2023 ANANDAPURA : ಲಾರಿ ಹರಿದು ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಆನಂದಪುರ ಬಸ್ ನಿಲ್ದಾಣದ ಬಳಿ ಘಟನೆ (Incident) ಸಂಭವಿಸಿದೆ. ಆನಂದಪುರದ ನಿವಾಸಿ ಸದಾಶಿವ ರಾವ್ (60) ಮೃತರು. ಇವರು ಗ್ರಾಮ ಪಂಚಾಯಿತಿಯಲ್ಲಿ ನೀರು ಘಂಟಿಯಾಗಿ ಕೆಲಸ ಮಾಡುತ್ತಿದ್ದರು. ಬಸ್ ನಿಲ್ದಾಣದ ಪಕ್ಕದಲ್ಲಿರುವ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಸದಾಶಿವ ಅವರ ಕೈ ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ … Read more

ಕೊಟ್ಟಿಗೆಗೆ ಬೆಂಕಿ, ಕಾರು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

251123-Incident-at-kodanavalli-in-Kudaruru.webp

SHIVAMOGGA LIVE NEWS | 25 NOVEMBER 2023 BYKODU : ಕೊಟ್ಟಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ. ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡನವಳ್ಳಿಯ ಗಣಪತಿ ಎಂಬುವವರ ಅವರ ಕೊಟ್ಟಿಗೆಯಲ್ಲಿ ಘಟನೆ (Incident) ಸಂಭವಿಸಿದೆ. ಹೇಗಾಯ್ತು ಘಟನೆ? ಏನೇನೆಲ್ಲ ನಷ್ಟವಾಗಿದೆ? ಗಣಪತಿ ಅವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಟ್ಟದಲ್ಲಿ ಸಂಗ್ರಹಿಸಿ ಇಟ್ಟಿದ್ದ 200 ಪಿಂಡಿ ಹುಲ್ಲು, ತಾಮ್ರದ ಹಂಡೆ, ಲಕ್ಷಾಂತರ ಮೌಲ್ಯದ ನಾಟಾ, ಓಮ್ನಿ ಕಾರು, ಪೈಪ್‌, ಕಟ್ಟಿಗೆ ಸೇರಿದಂತೆ ಸುಮಾರು 6 … Read more

‘ಸಾಗರದ ಗಣಪತಿ ಕೆರೆ ಅಭಿವೃದ್ಧಿಯಲ್ಲಿ ಅವ್ಯವಹಾರ, ತನಿಖೆ ಸಾಧ್ಯತೆ’

Beluru-Gopalakrishna-visits-various-projects-in-sagara

SHIVAMOGGA LIVE NEWS | 22 NOVEMBER 2023 SAGARA : ಗಣಪತಿ ಕೆರೆ ಅಭಿವೃದ್ಧಿ ಕಾರ್ಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಶಂಕೆ ಇದೆ. ಸಾರ್ವಜನಿಕರು ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ಸಂಬಂಧಿಸಿದ ಇಲಾಖೆ ಸಚಿವರು ತನಿಖೆ ನಡೆಸುವ ಕುರಿತು ಯೋಚಿಸಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಗಣಪತಿ ಕೆರೆ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕೆರ ಅಭಿವೃದ್ಧಿ ಕಾಮಗಾರಿಯಲ್ಲಿ ಹಣ ದುರುಪಯೋಗ … Read more

ಸಾಗರಕ್ಕೆ ಎರಡು KSRTC ಪಲ್ಲಕ್ಕಿ ಬಸ್‌, ಹಸಿರು ನಿಶಾನೆ ತೋರಿಸಿದ ಎಂಎಲ್‌ಎ

201123-Pallakki-KSRTC-Bus-from-Sagara.webp

SHIVAMOGGA LIVE NEWS | 20 NOVEMBER 2023 SAGARA : ಕೆಎಸ್‌ಆರ್‌ಟಿಸಿ ಬಸ್‌ (ksrtc) ನಿಲ್ದಾಣದಿಂದ ಎರಡು ಪಲ್ಲಕ್ಕಿ ಐಷಾರಾಮಿ ಬಸ್‌ಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಚಾಲನೆ ನೀಡಿದರು. ಮಂತ್ರಾಲಯ, ಧರ್ಮಸ್ಥಳಕ್ಕೆ ಬಸ್‌ ಇದೆ ವೇಳೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಸಾಗರಕ್ಕೆ ಎರಡು ಪಲ್ಲಕ್ಕಿ ಬಸ್‌ ಒದಗಿಸಲಾಗಿದೆ. ಇವುಗಳನ್ನು ಮಂತ್ರಾಲಯ ಮತ್ತು ಧರ್ಮಸ್ಥಳಕ್ಕೆ ಓಡಿಸಲು ಚಿಂತಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಈ ಕುರಿತು ಸಾರಿಗೆ ಇಲಾಖೆ ಗಮನಕ್ಕೆ ತರಲಾಗಿದೆ. 40 … Read more

ಕಾರ್ಗಲ್‌ನಲ್ಲಿ ಹೆಣ್ಣು ಚಿರತೆಯ ಮೃತದೇಹ ಪತ್ತೆ, ಕುತ್ತಿಗೆ ಬಳಿ ಮೂರು ಹಲ್ಲಿನ ಗುರುತು ಗೋಚರ

KARGAL-SAGARA-NEWS-1.jpg

SHIVAMOGGA LIVE NEWS | 18 NOVEMBER 2023 KARGAL : ಮಹಾತ್ಮ ಗಾಂಧಿ ವಿದ್ಯುದಾಗಾರಕ್ಕೆ ತೆರಳುವ ರಸ್ತೆಯಲ್ಲಿ ಹೆಣ್ಣು ಚಿರತೆಯ (Leopard) ಶವ ಪತ್ತೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶವ ಪರೀಕ್ಷೆ ವೇಳೆ ಚಿರತೆಯ ಕುತ್ತಿಗೆ ಬಳಿ ಹಲ್ಲಿನ ಗುರುತು ಕಂಡು ಬಂದಿದೆ. ಎರಡು ಚಿರತೆಗಳ ಮಧ್ಯೆ ಕಾದಾಟದಲ್ಲಿ ಹೆಣ್ಣು ಚಿರತೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಶವ ಪರೀಕ್ಷೆಯ ವರದಿ ಬಳಿಕ ಸಾವಿಗೆ … Read more

ಮುಳ್ಳು ಹಂದಿ ಬೇಟೆ, ಚರ್ಮ, ಮಾಂಸ ಸಹಿತ ಸಿಕ್ಕಿಬಿದ್ದ ನಾಲ್ವರು

141123-Forest-Officials-Raid-at-Sagara-Aralikoppa-village.webp

SHIVAMOGGA LIVE NEWS | 14 NOVEMBER 2023 SAGARA : ಮುಳ್ಳು ಹಂದಿ ಬೇಟೆಯಾಡಿ ಅದರ ಚರ್ಮ, ಮಾಂಸವನ್ನು ಬಳಕೆ ಮಾಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ವರನ್ನು ಬಂಧಿಸಿದೆ. ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮನೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈಶ್ವರ, ರಾಘವೇಂದ್ರ, ಪ್ರಭಾಕರ್, ಶ್ರೀಧರ್ ಬಂಧಿತರು. ಆರೋಪಿಗಳ ಬಳಿ ಇದ್ದ ಮುಳ್ಳು ಹಂದಿ ಮಾಂಸ, ಚರ್ಮ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಲಯ ಅರಣ್ಯಾಧಿಕಾರಿ ಪಿ. ಅರವಿಂದ್, ಅಶೋಕ್, … Read more

ಸಿಗಂದೂರು ಸೇತುವೆ ಮೇಲಿಂದ ಬಿದ್ದು ಕಾರ್ಮಿಕ ಸಾವು

sigandur-bridge-work.webp

SHIVAMOGGA LIVE NEWS | 12 NOVEMBER 2023 BYKODU : ನಿರ್ಮಾಣ ಹಂತದ ಸಿಗಂದೂರು ಸೇತುವೆ (Bridge) ಮೇಲಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಮೃತಪಟ್ಟಿದ್ದಾನೆ. ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಸಿಗಂದೂರು ಸೇತುವೆ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್‌ ಬಿಲ್ಡ್‌ ಕಂಪನಿ ಕಾರ್ಮಿಕ, ಪಶ್ಚಿಮ ಬಂಗಾಳದ ಮುರ್ಸಿದಾಬಾದ್‌ ಜಿಲ್ಲೆಯ ರಬಿಉಲ್‌ ಇಸ್ಮಾಯಿಲ್‌ (42) ಮೃತಪಟ್ಟವರು. ನಿರ್ಮಾಣ ಹಂತದ ಸೇತುವೆ ಮೇಲಿಂದ ಬಿದ್ದು ಗಾಯಗೊಂಡಿದ್ದರು. ತುರ್ತು ಚಿಕಿತ್ಸೆಗಾಗಿ ಸಾಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ … Read more