ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಫಾಸ್ಟ್‌ ಫುಡ್‌ ವ್ಯಾಪಾರಿ

Sagara Police Station Building

SHIVAMOGGA LIVE NEWS | 9 OCTOBER 2023 SAGARA : ಫಾಸ್ಟ್‌ ಫುಡ್‌ ವ್ಯಾಪಾರಿಯೊಬ್ಬರು ಹೊಟೇಲ್‌ ಒಂದರ ಕಾರಿಡಾರ್‌ನಲ್ಲಿ (Corridor) ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಟೇಲ್‌ ಸಿಬ್ಬಂದಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಸಾಗರ ನಗರದ ಬಿ.ಹೆಚ್.ರಸ್ತೆಯ ಹೊಟೇಲ್‌ ಮುಂಭಾಗ ಭಾನುವಾರ ಘಟನೆ ನಡೆದಿದೆ. ಫಾಸ್ಟ್‌ಫುಡ್‌ ತಯಾರಿಕೆ ವ್ಯಾಪಾರ ನಡೆಸುತ್ತಿದ್ದ ಬಸವರಾಜ್‌ ಆತ್ಮಹತ್ಯೆಗೆ ಯತ್ನಿಸಿದವರು. ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿರುವ ಬಸವರಾಜ್‌ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ … Read more

ಅಡಿಕೆ ಬೆಳೆಗಾರರಿಂದ ಸಾಗರ ಡಿವೈಎಸ್‌ಪಿ ಭೇಟಿ, 3 ಪ್ರಮುಖ ಬೇಡಿಕೆ ಈಡೇರಿಸುವಂತೆ ಮನವಿ, ಏನದು?

Areca-growers-memorandum-to-DYSP-in-SAgara.webp

SHIVAMOGGA LIVE NEWS | 6 OCTOBER 2023 SAGARA : ಗ್ರಾಮೀಣ ಭಾಗದಲ್ಲಿ ಪೊಲೀಸ್‌ ಗಸ್ತು (Patrol) ಹೆಚ್ಚಳ ಮಾಡಬೇಕು, ಗನ್‌ ಪರ್ಮಿಷನ್‌ ನವೀಕರಿಸಬೇಕು, ಬಂದೂಕು ತರಬೇತಿ ನೀಡಬೇಕು ಎಂದು ಒತ್ತಾಯಿಸಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಡಿವೈಎಸ್‌ಪಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಅಡಿಕೆ ಬೆಳೆಗಾರರ ಮನವಿಯೇನು? ಸಾಗರ ಭಾಗದಲ್ಲಿ ಒಂಟಿ ಮನೆಗಳು ಹೆಚ್ಚು. ಅಡಿಕೆ ಬೆಳೆಗಾರರು ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಬೇಕಿದೆ. ತಮ್ಮ ಕುಟುಂಬದ ಹಿರಿಯರಿಂದ ಗನ್‌ ಪರವಾನಗಿಯನ್ನು ತಮಗೆ ವರ್ಗಾಯಿಸಿಕೊಡುವಂತೆ ಅರ್ಜಿ … Read more

ಸಾಗರದ ಗಣಪತಿ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆ

Sagara Police Station Building

SHIVAMOGGA LIVE NEWS | 6 OCTOBER 2023 SAGARA : ಗಣಪತಿ ಕೆರೆಯಲ್ಲಿ ಯುವಕನೊಬ್ಬನ (Youth) ಮೃತದೇಹ ಪತ್ತೆಯಾಗಿದೆ. ಆತನ ಗುರುತು ಪತ್ತೆಯಾಗಿಲ್ಲ. ಯುವಕನಿಗೆ (Youth) 25 ವರ್ಷ ಎಂದು ಅಂದಾಜಿಸಲಾಗಿದೆ. ಒಂದು ದಿನ ಮೊದಲು ಆತ ಸಾಗರದ ಗಣಪತಿ ಕೆರೆಯಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸಾಗರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ- ರಾತ್ರಿ ಕುಡಿದ … Read more

ಇರುವಕ್ಕಿ ಸುತ್ತಮುತ್ತ ಕಲ್ಲುಕ್ವಾರಿಗೆ ವಿರೋಧ, ಉಪ ವಿಭಾಗಾಧಿಕಾರಿಗೆ ದೂರು

Iruvakki-villagers-submit-memorandum-against-stone-mining

SHIVAMOGGA LIVE NEWS | 28 SEPTEMBER 2023 SAGARA : ಇರುವಕ್ಕಿ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲುಕ್ವಾರಿಗಳಿಗೆ (Stone Mining) ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಇರುವಕ್ಕಿ ಗ್ರಾಮದ ಸರ್ವೆ ನಂಬರ್‌ 30 ಹಾಗೂ 31ರಲ್ಲಿ ಹೊಸದಾಗಿ ಕಲ್ಲುಕ್ವಾರಿ ಆರಂಭಿಸಲು ಕೆಲವರು ಮುಂದಾಗಿದ್ದಾರೆ. ಈ ಪ್ರದೇಶ ಶರಾವತಿ ಉಪ ನದಿಯ ದಂಡೆ. ಕಲ್ಲುಕ್ವಾರಿಗೆ (Stone Mining) ಅವಕಾಶ ನೀಡಿದರೆ ಕೃಷಿ ಚಟುವಟಿಕೆಗೆ ನೀರು ಪೂರೈಸಲು ತೊಂದರೆಯಾಗುತ್ತದೆ. ಪರಿಸರ ನಾಶವಾಗಲಿದ್ದು, … Read more

ಜೋಗ ಸಮೀಪ ನೀರಿನಲ್ಲಿ ಮುಳುಗಿ ಕೃಷಿ ಅಧಿಕಾರಿ, ಬ್ಯಾಂಕ್‌ ಉದ್ಯೋಗಿ ಸಾವು

Agriculture-Officer-Krishnakumar-in-sagara

SHIVAMOGGA LIVE NEWS | 24 SEPTEMBER 2023 SAGARA : ಈಜಲು ತೆರಳಿದ್ದ ಕೃಷಿ ಅಧಿಕಾರಿ ಸೇರಿ ಇಬ್ಬರು ನೀರುಪಾಲಾಗಿದ್ದಾರೆ (Drowned). ಸಾಗರ ತಾಲೂಕು ಜೋಗ ಸಮೀಪ ವಡನ್‌ಬೈಲ್‌ ಸಮೀಪ ಘಟನೆ ಸಂಭವಿಸಿದೆ. ಕೃಷಿ ಅಧಿಕಾರಿ ಕೃಷ್ಣ ಕುಮಾರ್‌ (36) ಮತ್ತು ಐಡಿಎಫ್‌ಸಿ ಬ್ಯಾಂಕ್‌ ಉದ್ಯೋಗಿ ಅರುಣ್‌ (28) ಮೃತರು. ವಡನ್‌ಬೈಲ್‌ ಸಮೀಪ ದೇವಿಗುಂಡಿಗೆ ಕುಟುಂಬ ಸಹಿತ ಪ್ರವಾಸಕ್ಕೆ ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ದೇವಿಗುಂಡಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ (Drowned) … Read more

ಸಾಗರ – ಸಿಗಂದೂರು ರಸ್ತೆಯ ಲೇ ಔಟ್‌ನಲ್ಲಿ ಅಪರೂಪದ ಕಾಡುಪಾಪ ಪತ್ತೆ

Slender-loris-Found-in-Sagara-sigandur.

SHIVAMOGGA LIVE NEWS | 24 SEPTEMBER 2023 SAGARA : ಪಟ್ಟಣದ ಬಡಾವಣೆಯೊಂದರಲ್ಲಿ (Layout) ಅಪರೂಪದ ತಳಿಯ ಕಾಡುಪಾಪ ಕಾಣಿಸಿಕೊಂಡಿದೆ. ಪರಿಸರ ಕಾರ್ಯಕರ್ತ ಅಖಿಲೇಶ್‌ ಚಿಪ್ಪಳಿ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅದನ್ನು ಕಾಡಿಗೆ ಬಿಡಲಾಯಿತು. ಸಾಗರ – ಸಿಗಂದೂರು (Sigandur) ರಸ್ತೆಯ ಲೇ ಔಟ್‌ನ ಬೇಲಿಯ ನಡುವೆ ಈ ಕಾಡುಪಾಪ ಕಾಣಿಸಿಕೊಂಡಿದೆ. ಇಂಗ್ಲಿಷ್‌ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಎಂದು ಕರೆಯಲಾಗುತ್ತದೆ. ನಿಧಾನವಾಗಿ ಸಾಗುವ, ಓಡಲು, ಹಾರಲು ಬಾರದ ಸೌಮ್ಯ ಸ್ವಭಾವದ ಪ್ರಾಣಿ ಎಂದು … Read more

‘ರೈತರ ಇಳುವರಿ ಹೆಚ್ಚಿಸಲು ಪಂಚಾಯಿತಿವಾರು ಕಾರ್ಯಾಗಾರ ನಡೆಸಿ’

felicitation-for-farmers-in-Iruvakki-Campus-in-Shimoga

SHIVAMOGGA LIVE NEWS | 22 SEPTEMBER 2023 SAGARA : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ (Horticulture) ವಿಜ್ಞಾನಗಳ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೃಷಿಕರ ವಿಶ್ವವಿದ್ಯಾಲಯವಾಗಿಯು ಬೆಳೆಯಬೇಕು ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ (Horticulture)  ವಿಜ್ಞಾನಗಳ ವಿಶ್ವವಿದ್ಯಾಲಯದ ಇರುವಕ್ಕಿ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತಾಡಿದರು. ರೈತರ ಇಳುವರಿ ಹೆಚ್ಚಿಸಬೇಕು ರೈತರು ಯಾವ ಭೂಮಿಯಲ್ಲಿ ಎಂತಹ … Read more

ಮರಸ ಗ್ರಾಮದ ಬಳಿ ಲಾರಿ ಪಲ್ಟಿ, ಸೊರಬದ ಚಾಲಕ ಸಾವು

Truck-incident-near-marasa-village-in-Sagara.

SHIVAMOGGA LIVE NEWS | 21 SEPTEMBER 2023 SAGARA : ಹೆಂಚು ತುಂಬಿಕೊಂಡು ಹೋಗುತ್ತಿದ್ದ ಲಾರಿ (Truck) ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾಗರ ತಾಲೂಕು ಮರಸ ಗ್ರಾಮದ ಸಮೀಪ ಘಟನೆ ಸಂಭವಿಸಿದೆ. ಸೊರಬ ತಾಲೂಕಿನ ಉಸ್ಮಾನ್‌ ಖಾನ್‌ (41) ಮೃತ ಚಾಲಕ. ಸಾಗರದಿಂದ ಸೊರಬಕ್ಕೆ ಹೆಂಚು ತುಂಬಿಕೊಂಡು ಲಾರಿ (Truck) ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸಿಗಾಗಿ ಕಾದು ಕಾದು … Read more

ಇಂಟರ್‌ಸಿಟಿ ರೈಲು ಗಂಟೆಗಟ್ಟಲೆ ತಡವಾಗಿದ್ದಕ್ಕೆ ಕಾರಣ ಬಯಲು, ಕುಂಸಿಯ ಯುವಕರು, ಶಿವಮೊಗ್ಗದ ವ್ಯಾಪಾರಿಗಳು ಅರೆಸ್ಟ್‌

Railway-Police-arrest-five-for-electric-wire-theft-in-Shimoga-sagara.webp

SHIVAMOGGA LIVE NEWS | 14 SEPTEMBER 2023 SAGARA : ರೈಲ್ವೆಯ ಒಹೆಚ್‌ಇ ತಾಮ್ರದ ತಂತಿ ಕಳ್ಳತನ ಮಾಡಿದ್ದ ಆರೋಪಿಗಳು ಮತ್ತು ಅದನ್ನು ಖರೀದಿಸಿದ್ದ ವ್ಯಾಪಾರಿಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇವರಿಂದ 2 ಲಕ್ಷ ರೂ. ಮೌಲ್ಯದ ತಾಮ್ರದ ತಂತಿ ವಶಕ್ಕೆ ಪಡೆಯಲಾಗಿದೆ ಎಂದು ರೈಲೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಸೆ.6ರ ರಾತ್ರಿ ಸಾಗರ ಮತ್ತು ಆನಂದಪುರ ಮಧ್ಯೆ ರೈಲ್ವೆ ವಿದ್ಯುದೀಕರಣದ ತಾಮ್ರದ ತಂತಿ ತುಂಡಾಗಿ ಹಳಿ ಮೇಲೆ ಬಿದ್ದಿತ್ತು. ಸೆ.7ರಂದು ಬೆಳಗ್ಗೆ ತಾಳಗುಪ್ಪದಿಂದ ಹೊರಟಿದ್ದ … Read more

ಸಾಗರ, ಆನಂದಪುರ, ಕುಂಸಿ ಮಧ್ಯೆ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ತಾಂತ್ರಿಕ ಪರಿಶೀಲನೆ, ವಾಹನಗಳಿಗೆ ಪರ್ಯಾಯ ಮಾರ್ಗ

railway-track-general-image.webp

SHIVAMOGGA LIVE NEWS | 14 SEPTEMBER 2023 SHIMOGA : ಸಾಗರ ಜಂಬಗಾರು – ಆನಂದಪುರ ಮತ್ತು ಕುಂಸಿ – ಆನಂದಪುರ ರೈಲ್ವೆ ನಿಲ್ದಾಣಗಳ (Railway Stations) ನಡುವೆ ರೈಲ್ವೆ ಲೆವಲ್ ಕ್ರಾಸಿಂಗ್‌ಗಳಲ್ಲಿ ತಾಂತ್ರಿಕ ಪರಿಶೀಲನೆ ನೆಡಸಲಾಗುತ್ತಿದೆ. ಈ ಹಿನ್ನೆಲೆ ಸೆ.13 ರಿಂದ 15 ಹಾಗೂ ಸೆ.20 ರಿಂದ 22ರ ವರೆಗೆ ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಸೆ.13 ರಿಂದ 15ರವರೆಗೆ ಸಾಗರ ಜಂಬಗಾರು – ಆನಂದಪುರ ಮಧ್ಯೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್, … Read more