ಹೊಟ್ಟೆ ನೋವು ಅಂತಾ ಬಂದ ಮಹಿಳೆಯ ಹೊಟ್ಟೆಯಲ್ಲಿತ್ತು ಬೃಹತ್ ಗಡ್ಡೆ

Gadde-in-Woman-stomach-in-Sagara

SHIVAMOGGA LIVE NEWS | OPERATION | 18 ಮೇ 2022 ಹೊಟ್ಟೆನೋವು ಎಂದು ಬಂದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿದ್ದ 7 ಕೆ.ಜಿ.ಗಡ್ಡೆಯನ್ನು ಹೊರತೆಗೆದಿದ್ದಾರೆ. ಸಾಗರದ ನೆಹರೂ ನಗರದ ಸೌಮ್ಯಾ ಡಿಸೋಜಾ ಅವರು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಮೇ 10ರಂದ ತಪಾಸಣೆಗೆ ಬಂದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಗೊತ್ತಾಗಿದೆ. ಸೌಮ್ಯಾ ಡಿಸೋಜಾ ಅವರಿಗೆ ಸಾಗರದ ತಾಯಿ-ಮಗು ಅಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ 7 ಕೆ.ಜೆ ಗಡ್ಡೆಯನ್ನು ಹೊರತೆಗೆದಿದ್ದಾರೆ. ಸ್ತ್ರೀರೋಗ ತಜ್ಞ ಡಾ.ನಾಗೇಂದ್ರಪ್ಪ, ಡಾ.ಸುಚಿತ್ರಾ, ಡಾ.ಸುಷ್ಮಾ, … Read more

ಸಾಗರ ಗಣಪತಿ ಕೆರೆಯಲ್ಲಿ ಮೃತದೇಹ, ಯುವತಿ ಗುರುತು ಪತ್ತೆ

Sagara Police Station Building

SHIVAMOGGA LIVE NEWS | DEAD | 17 ಮೇ 2022 ಸಾಗರದ (SAGARA) ಗಣಪತಿ ಕೆರೆಯಲ್ಲಿ ಮಂಗಳವಾರ ಬೆಳಗ್ಗೆ ಮೃತದೇಹ (DEAD) ಪತ್ತೆಯಾಗಿತ್ತು. ಮೃತ ಯುವತಿಯ ಗುರುತು ಪತ್ತೆಯಾಗಿದೆ. ಸಾಗರ ಜಂಬಗಾರು ನಿವಾಸಿ ರಕ್ಷಿತಾ (16) ಎಂದು ಗುರುತಿಸಲಾಗಿದೆ. ಸಾಗರದ ಖಾಸಗಿ ಶಾಲೆಯಲ್ಲಿ ರಕ್ಷಿತಾ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಸೋಮವಾರ ಶಾಲೆಗೆ ಬಂದಿದ್ದ ರಕ್ಷಿತಾ ಮನೆ ಹಿಂತಿರುಗಿರಲಿಲ್ಲ. ಎಲ್ಲೆಡೆ ಹುಡುಕಾಡಿದ ಪೋಷಕರು ರಾತ್ರಿ ಸಾಗರ ನಗರ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಬೆಳಗ್ಗೆ ಗಣಪತಿ ಕೆರೆಯಲ್ಲಿ ಮೃತದೇಹ … Read more

BREAKING NEWS | ಸಾಗರ ಗಣಪತಿ ಕೆರೆಯಲ್ಲಿ ಯುವತಿಯ ಮೃತದೇಹ ಪತ್ತೆ

Sagara Police Station Building

SHIVAMOGGA LIVE NEWS | DEAD | 17 ಮೇ 2022 ಸಾಗರದ ಗಣಪತಿ ಕೆರೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಕೆರೆ ದಂಡೆಯ ಸನಿಹದಲ್ಲಿ ಮೃತದೇಹ ತೇಲುತ್ತಿತ್ತು. ಇದನ್ನೂ ಓದಿ – ಹಾಸ್ಟೆಲ್ ಕೊಠಡಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು ಇವತ್ತು ಬೆಳಗ್ಗೆ ಮೃತದೇಹ ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಗಣಪತಿ ಕೆರೆಯಿಂದ ಮೇಲೆತ್ತಿದ್ದಾರೆ. ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದಾರೆ. ಯುವತಿಯ ಗುರುತು ಪತ್ತೆಯಾಗಿಲ್ಲ. ಹೆಚ್ಚಿನ … Read more

‘ಪಿಎಸ್ಐ ಹಗರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಸಾಗರಕ್ಕೆ ಬಂದಿದ್ರು, ಬಿಜೆಪಿ ಮುಖಂಡ ರಕ್ಷಣೆ ನೀಡಿದ್ದರು’

Mallikarjuna-Hakre-Press-Meet-in-Sagara

SHIVAMOGGA LIVE NEWS | SCAM | 10 ಮೇ 2022 ಪಿಎಸ್‌ಐ ಹಗರಣದ ಕಿಂಗ್‌ಪಿನ್ ಎನ್ನಲಾದ ದಿವ್ಯಾ ಹಾಗರಗಿ ಸಾಗರಕ್ಕೆ ಬಂದು ಬಿಜೆಪಿ ಪ್ರಮುಖ ನಾಯಕರೊಬ್ಬರನ್ನು ಭೇಟಿ ಮಾಡಿದ್ದರು. ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಸಾಗರ ಸೇರಿದಂತೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲೂ ತನಿಖೆ ನಡೆಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಹಕ್ರೆ ಅವರು, ದಿವ್ಯಾ ಹಾಗರಗಿ ತೀರ್ಥಹಳ್ಳಿಯಲ್ಲಿ ಎರಡು ದಿನ ಇದ್ದು ಗೃಹಸಚಿವ ಆರಗ ಜ್ಞಾನೇಂದ್ರ … Read more

‘ವಿಧಾನಸಭೆ ಚುನಾವಣೆಗೆ ನಾನೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ’

Yogendra-Guruji-visit-KG-Prashanth-House-in-Sagara

SHIVAMOGGA LIVE NEWS | CANDIDATE | 10 ಮೇ 2022 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಪ್ರಶಾಂತ್ ಹೇಳಿದರು. ಜೋಸೆಫ್ ನಗರದ ನಿವಾಸಕ್ಕೆ ಭೇಟಿ ನೀಡಿದ್ದ ಸಾರಗನಜಡ್ಡು ಶ್ರೀ ಕಾರ್ತಿಕೇಯ ಪೀಠದ ಯೋಗೇಂದ್ರ ಶ್ರೀಗಳನ್ನು ಸನ್ಮಾನಿಸಿ ಮಾತನಾಡಿದ ಪ್ರಶಾಂತ್ ಅವರು, ಅನೇಕ ಸಾಮಾಜಿಕ ಕೆಲಸಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ. ರಾಜಕೀಯ ಸ್ಥಾನಮಾನ … Read more

ಸಾಗರದಲ್ಲಿ ದಿನೇ ದಿನೆ ಹೆಚ್ಚಾಗ್ತಿದೆ ಟ್ರಾಫಿಕ್ ಕಿರಿಕಿರಿ, ಪರಿಹಾರಕ್ಕೆ ಮನವಿ

Traffic-Problem-in-Sagara-city

SHIVAMOGGA LIVE NEWS | TRAFFIC| 08 ಮೇ 2022 ಸಾಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಜವಳಿ ವರ್ತಕರ ಸಂಘದ ವತಿಯಿಂದ ಪೊಲೀಸ್ ಉಪ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು. ಸಾಗರ ಪಟ್ಟಣದಲ್ಲಿ ದಿನೇ ದಿನೆ ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ವರ್ತಕರು ಮತ್ತು ಗ್ರಾಹಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ  ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ವರ್ತಕರು ಆಗ್ರಹಿಸಿದರು. ಪಟ್ಟಣದ ಜೆ.ಸಿ.ರಸ್ತೆ, ಮಾರ್ಕೆಟ್ ರಸ್ತೆ, ಸೊರಬ ರಸ್ತೆ, ಅಶೋಕ … Read more

ಅನಂದಪುರ ಬಳಿ ಕೆರೆಗೆ ಉರುಳಿದ ಟಿಪ್ಪರ್ ಲಾರಿ, ಅದೃಷ್ಟವಶಾತ್ ತಪ್ಪಿತು ದುರಂತ

Truck-falls-to-Ganiga-kere-near-Anandapuram

SHIVAMOGGA LIVE NEWS | TRUCK| 08 ಮೇ 2022 ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಕೆರೆಗೆ ಇಳಿದಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಆನಂದಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಿರುವ ಗಾಣಿಗನ ಕೆರೆಗೆ ಶನಿವಾರ ಟಿಪ್ಪರ್ ಕೆರೆಗೆ ಇಳಿದಿದೆ. ಟಿಪ್ಪರ್ ಕೆರೆಯ ಕಡೆಗೆ ವಾಲುತ್ತಿದ್ದಂತೆ ಚಾಲಕ ಇರುವಕ್ಕಿ ಗ್ರಾಮದ ಮಣಿಕಂಠ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ದಾಸಕೊಪ್ಪದಲ್ಲಿರುವ ಗ್ಯಾರೇಜ್‌ನಲ್ಲಿ ಜನರಲ್ ಸರ್ವಿಸ್ ಮಾಡಿಸಿಕೊಂಡು ಖಾಲಿ ವಾಹನವನ್ನು ಯಡೇಹಳ್ಳಿಗೆ ತರುತ್ತಿದ್ದಾಗ ಅಪಘಾತವಾಗಿದೆ. ವಾಹನದ ಮುಂಭಾಗ ಕೆರೆಯ … Read more

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿಗೆ ಕೊಲೆ ಬೆದರಿಕೆ, ಏನಿದು ಪ್ರಕರಣ?

Dr-Rajanandini-Kagodu-Sagara.

SHIVAMOGGA LIVE NEWS | THREAT | 04 ಮೇ 2022 ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ತ್ಯಾಗರ್ತಿ ಗ್ರಾಮದ ಮಾರಿಗುಡಿ ಸಮೀಪ ಡಾ.ರಾಜನಂದಿನಿ ಅವರ ಕಾರು ಅಡ್ಡಗಟ್ಟಿ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಅವರ ಕಾರು ಚಾಲಕ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆದರಿಕೆ ಒಡ್ಡಿದ್ದು ಯಾರು? ಕಾಗೋಡು ತಿಮ್ಮಪ್ಪ ಫೌಂಡೇಶನ್ … Read more

ಮಂಗನ ಕಾಯಿಲೆಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಾವು, ಏನಿದು ಮಂಗನ ಕಾಯಿಲೆ? ಲಕ್ಷಣವೇನು?

Grama-Panchayat-Member-Dies-of-KFD-in-Aralagodu-Village

SHIVAMOGGA LIVE NEWS | MONKEY FEVER | 03 ಮೇ 2022 ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ ಶುರುವಾಗಿದೆ. KFD ಸೋಂಕಿಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬಲಿಯಾಗಿದ್ದಾರೆ. ಅರಳಗೋಡು ಗ್ರಾಮ ಪಂಚಾಯಿತಿ ಸದಸ್ಯ ರಾಮಸ್ವಾಮಿ (55) ಮೃತರು. ಏಪ್ರಿಲ್ 24ರಂದು ರಾಮಸ್ವಾಮಿ ಅವರಿಗೆ ಜ್ವರ ಬಂದಿತ್ತು. ಈ ಹಿನ್ನೆಲೆ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾಮಸ್ವಾಮಿ ಅವರಿಗೆ ಕೆಎಫ್’ಡಿ (ಮಂಗನ ಕಾಯಿಲೆ) ಸೋಂಕು ತಗುಲಿರುವುದು ದೃಢವಾಗಿತ್ತು. ಜ್ವರ … Read more

ಖಾಸಗಿ ಬಸ್’ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

crime name image

SHIVAMOGGA LIVE NEWS | BUS ACCIDENT | 25 ಏಪ್ರಿಲ್ 2022 ಖಾಸಗಿ ಬಸ್’ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಾಗರದ KSRTC ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಸಾಗರ ಪಟ್ಟಣದ ಅಗಡಿ ಮಠದ ನಿವಾಸಿ ಮಹಾದೇವ ನಾಯ್ಕ್ ಮೃತರು. ಕಾರ್ಗಲ್’ನಲ್ಲಿ ಹೊಟೇಲ್ ಕೆಲಸ ಮುಗಿಸಿ ರಾತ್ರಿ ಖಾಸಗಿ ಬಸ್’ನಲ್ಲಿ ಸಾಗರಕ್ಕೆ ಮರಳುವಾಗ ಘಟನೆ ಸಂಭವಿಸಿದೆ. KSRTC ಬಸ್ ನಿಲ್ದಾಣ ಬಳಿ ಇಳಿಯಲು ಬಾಗಿಲು ಬಳಿ ಬಂದಾಗ, ಖಾಸಗಿ … Read more