ಸಾಗರದಲ್ಲೂ ಸಾರಿಗೆ ನೌಕರರ ಆಕ್ರೋಶ, ತಟ್ಟೆ, ಲೋಟ ಬಡಿಯುತ್ತ ಮೆರವಣಿಗೆ

120421 Sagara KSRTC workers Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 12 APRIL 2021 ಸಾಗರದಲ್ಲೂ ಕೆಎಸ್​ಆರ್​ಟಿಸಿ ನೌಕರರು ತಮ್ಮ ಕುಟುಂಬದೊಂದಿಗೆ ತಟ್ಟೆ, ಲೋಟ ಬಾರಿಸುವ ಚಳವಳಿ ನಡೆಸಿದರು. ಜೋಗ ಬಸ್ ನಿಲ್ದಾಣದಿಂದ ಉಪ ವಿಭಗಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಮಹಿಳೆಯರು, ಮಕ್ಕಳು ಈ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ – ಶಿವಮೊಗ್ಗ ಡಿಸಿ ಕಚೇರಿ ಮುಂದೆ ಮಹಿಳೆಯರು, ಮಕ್ಕಳಿಂದ ತಟ್ಟೆ, ಲೋಟ ಬಡಿದು ಪ್ರತಿಭಟನೆ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಕುಟುಂಬ ಸಮೇತ ಬಂದು  ತಟ್ಟೆ-ಲೋಟ ಬಡಿದು ಸರ್ಕಾರದ ವಿರುದ್ಧ ಅಸಮಾಧಾನ … Read more

ಸಾಗರ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ, ಯಾವ್ಯಾವ ಹಳ್ಳಿ ಯಾವ ಪಂಚಾಯತಿಗೆ ಸೇರುತ್ತೆ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021 ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ. ಸಾಗರ ತಾಲೂಕಿನಲ್ಲಿ 12 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ. ಕೆಳದಿ ತಾಲೂಕು ಪಂಚಾಯಿತಿ ಭೀಮನೇರಿ, ಮಂಕೋಡು, ಸಂಗಳ, ಶಿರುವಾಳ, ಅಣಲೇಕೊಪ್ಪ, ಕೆಳದಿ, ಅದರಂತೆ, ಮಾಸೂರು, ಚಿಕ್ಕನಲೂರು ನಾಡಕಲಸಿ ತಾಲೂಕು … Read more

ಚಿನ್ನಾಭರಣ ಮಾರುತ್ತೇನೆ ಅಂತಾ ಫೋನಾಯಿಸಿದ, ನಂಬಿ ಹೋದ ವ್ಯಾಪಾರಿಯ ದರೋಡೆ ಮಾಡಿದ

Sagara Rural Police Station

ಶಿವಮೊಗ್ಗ ಲೈವ್.ಕಾಂ | SAGARA NEWS | 1 APRIL 2021 ‘ತುಂಬಾ ಕಷ್ಟದಲ್ಲಿದ್ದೇನೆ. ತನ್ನ ಬಳಿ ಇರುವ ಚಿನ್ನಾಭರಣವನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುತ್ತಿದ್ದೇನೆ’ ಎಂದು ನಂಬಿಸಿ ಚಿನ್ನಾಭರಣ ವ್ಯಾಪಾರಿಯೊಬ್ಬರಿಂದ 7.50 ಲಕ್ಷ ರೂ. ದರೋಡೆ ಮಾಡಲಾಗಿದೆ. ಸಾಗರದ ಗಣಪತಿ ದೇವಸ್ಥಾನ ರಸ್ತೆಯ ನಿವಾಸಿ, ಚಿನ್ನಾಭರಣ ವ್ಯಾಪಾರಿ ಅಶೋಕ್ ಅವರು ಹಣ ಕಳೆದುಕೊಂಡವರು. ಹೇಗಾಯ್ತು ದರೋಡೆ? ಇತ್ತೀಚೆಗೆ ಅಶೋಕ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ. ತನ್ನ ಬಳಿ ಇರುವ ಚಿನ್ನಾಭರಣ ಮಾರಾಟ ಮಾಡುತ್ತಿದ್ದೇನೆ. … Read more

ದೇವಸ್ಥಾನದಲ್ಲಿ ಸಂಜೆ ಇದ್ದ ಗಣಪತಿ ಮೂರ್ತಿ ಬೆಳಗಾಗುವುದರಲ್ಲಿ ಕಣ್ಮರೆ

Sagara Rural Police Station

ಶಿವಮೊಗ್ಗ ಲೈವ್.ಕಾಂ | SAGARA NEWS | 1 APRIL 2021 ಪುರಾಣ ಪ್ರಸಿದ್ಧ ಗಣಪತಿ ದೇವಸ್ಥಾನವೊಂದರಲ್ಲಿ ಗಣಪತಿ ಮೂರ್ತಿ ಕಳುವಾಗಿದೆ. ಸಂಜೆ ಇದ್ದ ಗಣಪತಿ ಮೂರ್ತಿ ಬೆಳಗ್ಗೆ ಕಣ್ಮರೆಯಾಗಿದೆ. ಸಾಗರ ತಾಲೂಕು ನಾಡಕಲಸೆ ಗ್ರಾಮದ ಶ್ರೀ ರಾಮೇಶ್ವರ ಮತ್ತು ಮಲ್ಲಿಕಾರ್ಜು ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಗರ್ಭಗುಡಿಯ ಮುಂದೆ ಇದ್ದ ಗಣಪತಿ ಮೂರ್ತಿ ಕಳುವಾಗಿದೆ. ಈ ಮೂರ್ತಿ ಮೌಲ್ಯ  ಸುಮಾರು 5 ಸಾವಿರದಿಂದ 10 ಸಾವಿರ ರೂ. ಇದೆ ಎಂದು ಅಂದಾಜಿಸಲಾಗಿದೆ. ರಾತ್ರಿ ವೇಳೆ ಸೆಕ್ಯೂರಿಟಿ ಇಲ್ಲ ಪುರಾಣ … Read more

ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿಗೆ ಸಾಗರದಲ್ಲಿ 2 ಗಂಟೆ ಆಪರೇಷನ್, ವೈದ್ಯರಿಗೆ ಕಾದಿತ್ತು ಶಾಕ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 28 MARCH 2021 ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿಗೆ ಸತತ ಎರಡು ಗಂಟೆ ಆಪರೇಷನ್‌ ಮಾಡಿ, 8 ಕೆ.ಜಿ. ತೂಕದ ಗಡ್ಡೆಯನ್ನು ಹೊರ ತೆಗೆಯಲಾಗಿದೆ. ಸಾಗರದ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್‌ ನಡೆಸಲಾಯಿತು. ಸೊರಬ ತಾಲೂಕಿನ 21 ವರ್ಷದ ಯುವತಿಯೊಬ್ಬಳು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಚಿಕಿತ್ಸೆಗೆ ಬಂದಾಗ ಸ್ಕ್ಯಾನಿಂಗ್‌ ನಡೆಸಲಾಗಿತ್ತು. ಆಗ ಗಡ್ಡೆ ಇರುವುದು ಗೊತ್ತಾಗಿತ್ತು. ಎರಡು ಗಂಟೆ ಸತತ ಆಪರೇಷನ್‌ ಪ್ರಸೂತಿ ತಜ್ಞೆ ಡಾ.ಪ್ರತಿಮಾ, ಸಿವಿಲ್‌ … Read more

ಡಿಕೆ ಶಿವಕುಮಾರ್ ಅವರು ಒಂದು ವಾರದೊಳಗೆ ಕ್ಷಮೆಯಾಚಿಸಬೇಕು, ಇಲ್ಲವಾದರೆ ಮಾನನಷ್ಟ ಕೇಸ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MARCH 2021 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಒಂದು ವಾರದಲ್ಲಿ ಕ್ಷಮೆ ಕೋರಬೇಕು. ಇಲ್ಲವಾದರೆ ಮಾನನಷ್ಟ ಮೊಕದಮೆ ಹೂಡುವುದಾಗಿ ಸಾಗರದ ವಕೀಲ ಪ್ರವೀಣ್‌ ಕುಮಾರ್‌ ಅವರು ತಮ್ಮ ವಕೀಲರ ಮೂಲಕ ನೊಟೀಸ್‌ ಜಾರಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ʼಸೋನಿಯಾ ಗಾಂಧಿ ಅವರ ವಿರುದ್ಧ ತಡಕಲಾಂಡಿಯೊಬ್ಬ ದೂರು ನೀಡಿದರೆ ಪೊಲೀಸರು ಎಫ್‌ಐಆರ್‌ ದಾಖಲಿಸುತ್ತಾರೆ. ಇದನ್ನು ನಾವು ಸುಮ್ಮನೆ ಬಿಡುವುದಿಲ್ಲʼ … Read more

ಹೊಸಗುಂದದಲ್ಲಿ ದೇವಸ್ಥಾನದ ಗರ್ಭಗುಡಿ ಮುಂದಿದ್ದ ಹಿತ್ತಾಳೆ ಘಂಟೆಗಳು ಕದ್ದೊಯ್ದ ಕಳ್ಳರು

Sagara Rural Police Station

ಶಿವಮೊಗ್ಗ ಲೈವ್.ಕಾಂ | SAGARA NEWS | 27 MARCH 2021 ದೇವಸ್ಥಾನವೊಂದರ ಗರ್ಭಗುಡಿಯ ಮುಂದೆ ಇದ್ದ ಹಿತ್ತಾಳೆ ಘಂಟೆಗಳ ಕಳ್ಳತನವಾಗಿದೆ. ಬೈಕ್‌ನಲ್ಲಿ ಬಂದಿದ್ದ ಮೂವರು ಘಂಟೆ ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಶಂಕೆ ಇದ್ದು, ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ಹೊಸಗುಂದ ಗ್ರಾಮದ ಕಂಚಿಕಾಳಮ್ಮ ದೇವಸ್ಥಾನದಲ್ಲಿ ಘಂಟೆಗಳು ಕಳುವಾಗಿದೆ. ಇವುಗಳ ಮೌಲ್ಯ ಸುಮಾರು 12 ಸಾವಿರ ಎಂದು ಅಂದಾಜಿಸಲಾಗಿದೆ. ಮಾರ್ಚ್‌ 24ರಂದು ಸಂಜೆ ಬೈಕ್‌ನಲ್ಲಿ ಬಂದಿದ್ದ ಮೂವರು ಘಂಟೆಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಗ್ರಾಮಸ್ಥರು … Read more

ನಾಟಿ ಔಷಧಕ್ಕಾಗಿ ಆನಂದಪುರ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021 ನಾಟಿ ಔಷಧ ವಿತರಣೆ ಸ್ಥಗಿತಗೊಳಿಸಿದ ಕ್ರಮ ಖಂಡಿಸಿ ಔಷಧ ಪಡೆಯಲು ಬಂದಿದ್ದ ರೋಗಿಗಳು ಮತ್ತು ಸಂಬಂಧಿಕರು ಗುರುವಾರ ಪ್ರತಿಭಟನೆ ನಡೆಸಿದರು. ಆನಂದಪುರ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿದರು. ಇದನ್ನೂ ಓದಿ | ನರಸೀಪುರದ ನಾಟಿ ಔಷಧ ವಿತರಣೆ ತಾತ್ಕಾಲಿಕ ಮುಂದೂಡಿಕೆ, ಕಾರಣವೇನು? ಮತ್ತೆ ಯಾವಾಗ ಶುರುವಾಗುತ್ತೆ? ಆನಂದಪುರ ಸಮೀಪ ಶಿವಗಂಗೆಯಲ್ಲಿ ನಾಟಿ ಔಷಧ ವಿತರಣೆ ಮಾಡಲಾಗುತ್ತಿದೆ. ನರಸೀಪುರದ ನಾರಾಯಣಮೂರ್ತಿ ಅವರ ಕುಟುಂಬದವರು ಔಷಧ ವಿತರಿಸುತ್ತಿದ್ದಾರೆ. ಗುರುವಾರ … Read more

ಔಷಧ ಇಲ್ಲ ಅಂದಿದ್ದಕ್ಕೆ ಕಾರ್ಗಲ್‌ನಲ್ಲಿ ಮೆಡಿಕಲ್ ಶಾಪ್ ಮಾಲೀಕನ ಮೇಲೆ ಹಲ್ಲೆ

ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021 ಔಷಧ ಇಲ್ಲ ಎಂದು ಹೇಳಿದ್ದಕ್ಕೆ ಮೆಡಿಕಲ್‌ ಶಾಪ್‌ ಮಾಲೀಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಸ್ಥಳೀಯರೆ ಅತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕು ಕಾರ್ಗಲ್‌ ಮುಖ್ಯ ಪಟ್ಟಣ ಬೀದಿಯಲ್ಲಿನ ಲಕ್ಷ್ಮೀ ಮೆಡಿಕಲ್‌ ಶಾಪ್‌ ಮಾಲೀಕ ರಾಹುಲ್‌ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡಿದ ತೇಜಸ್‌ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೆಡಿಕಲ್‌ ಶಾಪ್‌ಗೆ ಬಂದ ತೇಜಸ್‌ ಕೆಲವು ಔಷಧಗಳನ್ನು ಖರೀದಿಸಲು ಕೇಳಿದ್ದಾನೆ. ಈ … Read more

ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ನೊಟೀಸ್ ಜಾರಿ

Siganduru-Temple-General-Image

ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಕ್ಕೆ ನೊಟೀಸ್‌ ಜಾರಿ ಮಾಡಲಾಗಿದೆ. ಇದನ್ನೂ ಓದಿ  | ಸಿಗಂದೂರು ದೇವಸ್ಥಾನಕ್ಕೆ ಸರ್ಕಾರದ ಸಮಿತಿ, ರದ್ದುಗೊಳಿಸುವಂತೆ ನಿಯೋಗದ ಮನವಿ ದೇವಸ್ಥಾನದ ನಿರ್ವಹಣೆ ಸರಿಯಿಲ್ಲ. ಹಣ ದುರುಪಯೋಗವಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ, ದೇವಸ್ಥಾನವನ್ನು ಘೋಷಿತ ಸಂಸ್ಥೆ ಎಂದು ಘೋಷಿಸುವ ಸಲುವಾಗಿ ಆಕ್ಷೇಪಣೆಗಳು ಇದ್ದರೆ ತಿಳಿಸುವಂತೆ ಈ ಹಿಂದೆ … Read more