ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಮರಕ್ಕೆ ಡಿಕ್ಕಿಯಾಗಿ, ಧಗಧಗ ಹೊತ್ತಿ ಉರಿದ ಕಾರು

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಜನವರಿ 2022 ಮರಕ್ಕೆ ಕಾರು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಸಕ್ರೆಬೈಲು ಸಮೀಪ ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿರುವಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಕ್ರೆಬೈಲು ಬಳಿ ಮರಕ್ಕೆ ಡಿಕ್ಕಿಯಾಗಿ ಕಾರಿಗೆ ಬೆಂಕಿ ಹೊತ್ತುಕೊಂಡಿದೆ. ಕಾರಿನಲ್ಲಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ. ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. … Read more

ಮನೆ ಮುಂದೆ ನಿಲ್ಲಿಸಿದ್ದ ಬೈಕುಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಮೂವರು ಅರೆಸ್ಟ್, ಎಲ್ಲೆಲ್ಲಿ ಬೈಕ್ ಕದ್ದಿದ್ದರು?

Arrest News Graphics

ಶಿವಮೊಗ್ಗ ಲೈವ್.ಕಾಂ | HOLEHONNURU CRIME NEWS | 14 ಜನವರಿ 2022 ಮನೆ ಮುಂಭಾಗ ನಿಲ್ಲಸಿದ್ದ ಬೈಕ್’ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭ ಆರು ಬೈಕ್’ಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ಪಂಚವಟಿ ಕಾಲನಿಯ ಆಟೋ ಚಾಲಕ ಸುರೇಶ ಕರಡಿ (24), ಮಿಳಘಟ್ಟದ ಅಭಿಷೇಕ್ (22) ಗಾಜನೂರಿನ ಇಂದ್ರನಗರದ ಶಿವಕುಮಾರ್ (23) ಬಂಧಿತ ಆರೋಪಿಗಳು. ಇವರು ಶಿರಾಳಕೊಪ್ಪ, ಗಾಜನೂರು, ಹೊಳೆಹೊನ್ನೂರು ಸೇರಿದಂತೆ ಹಲವು ಕಡೆಗಳಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್‌ಗಳನ್ನು … Read more

ಒಡ್ಡಿನಕೊಪ್ಪ, ಪಿಳ್ಳಂಗಿರಿ, ಹಸೂಡಿ ಸೇರಿ ವಿವಿಧೆಡೆ ಜ.12ರಂದು ಕರೆಂಟ್ ಇರಲ್ಲ

power cut graphics

ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಜನವರಿ 2022 ಎಂ.ಆರ್.ಎಸ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡುವ ಫೀಡರ್’ಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಜನವರಿ 12ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ವಡ್ಡಿನಕೊಪ್ಪ, ಪೋದಾರ್ ಶಾಲೆ ರಸ್ತೆ, ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, … Read more

ತುಂಗಾ ನದಿಯಲ್ಲಿ ಮೀನಿಗೆ ಹಾಕಿದ್ದ ಗಾಳಕ್ಕೆ ಸಿಕ್ಕಿಬಿತ್ತು ಮೊಸಳೆ ಮರಿ

090122 Baby Crocodile found in Tunga River Near Pillangere

ಶಿವಮೊಗ್ಗದ ಲೈವ್.ಕಾಂ | SHIMOGA NEWS | 9 ಜನವರಿ 2022 ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಮೊಸಳೆ ಮರಿ ಸಿಕ್ಕಿಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ರಶೀದ್ ಅವರಿಗೆ ಮೊಸಳೆ ಸಿಕ್ಕಿದೆ. ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಗಾಳ ಹಾಕಿ, ಮೀನು ಹಿಡಿಯುತ್ತಿದ್ದರು. ಗಾಳ ಎಳೆದಾಗ ಬಂತು ಮೊಸಳೆ ರಶೀದ್ ಅವರು ಮೀನಿಗಾಗಿ ತುಂಗಾ ನದಿಯಲ್ಲಿ ಹಾಕಿದ್ದ ಗಾಳ ಜಗ್ಗಿದಂತಾಗಿದೆ. … Read more

ಮೂರು ಗ್ರಾಮ ಪಂಚಾಯಿತಿಗಳ ಚುನಾವಣೆ ಫಲಿತಾಂಶ ಪ್ರಕಟ, ಯಾವ್ಯಾವ ಕ್ಷೇತ್ರದಲ್ಲಿ ಯಾರೆಲ್ಲ ಗೆದ್ದಿದ್ದಾರೆ?

301221 grama panchayath election counting in Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS |  30 ಡಿಸೆಂಬರ್ 2021 ಅವಧಿ ಮುಗಿದ ಮೂರು ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಇವತ್ತು ಮತ ಎಣಿಕೆ ಕಾರ್ಯ ನಡೆದಿದ್ದು, ಮೂರು ಗ್ರಾಮ ಪಂಚಾಯಿತಿಗಳ 39 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗದ ತಾಲೂಕು ಕುಂಸಿ ಗ್ರಾಮ ಪಂಚಾಯಿತಿ 16 ಸ್ಥಾನಕ್ಕೆ ಚುನಾವಣೆ ನಡೆದಿತ್ತು. 55 ಆಕಾಂಕ್ಷಿಗಳು ಸ್ಪರ್ಧೆ ಮಾಡಿದ್ದರು. ಕುಂಸಿ -1 ಕ್ಷೇತ್ರದಿಂದ –  ಕೆ.ಹೆಚ್.ಕೇಶವಮೂರ್ತಿ(ಬಿಸಿಎಂ – ಅ), ಸತ್ಯವತಿ (ಸಾಮಾನ್ಯ ಮಹಿಳೆ), ಕೆ.ಪಿ.ಶಾರದಾ (ಬಿಸಿಎಂ … Read more

ಮಂಡಗದ್ದೆ ಸಮೀಪ ಲಾರಿ, ಬಸ್ ಮುಖಾಮುಖಿ ಡಿಕ್ಕಿ

301221 Bus Truck Accident Near Manadagadde

ಶಿವಮೊಗ್ಗದ ಲೈವ್.ಕಾಂ | SHIMOGA NEWS |  30 ಡಿಸೆಂಬರ್ 2021 ಮಂಡಗದ್ದೆ ಸಮೀಪ ಬಸ್ ಮತ್ತು ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಮಂಡಗದ್ದೆ – ಸಕ್ರೆಬೈಲು ನಡುವೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ತೆರಳುತಿತ್ತು. ಕ್ಯಾಂಟರ್ ವಾಹನ ಅಡಕೆ ತುಂಬಿಕೊಂಡು ಶಿವಮೊಗ್ಗದ ಕಡೆಗೆ ಬರುತ್ತಿತು ಬಸ್ ಪ್ರಯಾಣಿಕರಿಗೆ ಗಾಯ ಘಟನೆಯಲ್ಲಿ ಬಸ್ಸಿನಲ್ಲಿದ್ದ … Read more

ಶಿವಮೊಗ್ಗದಲ್ಲಿ ಬೆಳಗ್ಗೆಯಿಂದಲೆ ಬಿರುಸುಗೊಂಡ ಮತದಾನ

271221 Election in Puradal Village

ಶಿವಮೊಗ್ಗದ ಲೈವ್.ಕಾಂ | SHIMOGA NEWS |  27 ಡಿಸೆಂಬರ್ 2021 ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಇವತ್ತು ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದ ಮತದಾನ ಬಿರುಸು ಪಡೆದುಕೊಂಡಿದೆ. ಶಿವಮೊಗ್ಗದ ಪುರದಾಳು, ಕುಂಸಿ, ಶಿಕಾರಿಪುರದ ಹಾರೋಗೊಪ್ಪ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯುತ್ತಿದೆ. ಮತಗಟ್ಟೆ ಸುತ್ತಲು ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ. ಮೂರು ಪಂಚಾಯಿತಿ 39 ಸ್ಥಾನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 39 ಸ್ಥಾನಗಳಿಗೆ ಇವತ್ತು ಚುನಾವಣೆ ನಡೆಯುತ್ತಿದೆ. ಕುಂಸಿ ಗ್ರಾಮ ಪಂಚಾಯಿತಿಯ 16, … Read more

ಶಿವಮೊಗ್ಗದಲ್ಲಿ ಮತ್ತೆ ‘ಕೆಂಪು ಪೌಡರ್ ಗ್ಯಾಂಗ್’ ಪ್ರತ್ಯಕ್ಷ, ಮಹಿಳೆಗೆ ವಂಚನೆ

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS |  26 ಡಿಸೆಂಬರ್ 2021 ಚಿನ್ನಾಭರಣ ಹೊಳೆಯುವಂತೆ ಮಾಡುವುದಾಗಿ ನಂಬಿಸಿ, ವಂಚಿಸುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವೃದ್ಧೆಯೊಬ್ಬರಿಂದ ಒಂದು ಲಕ್ಷ ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಶಿವಮೊಗ್ಗ ತಾಲೂಕು ಹಾರನಹಳ್ಳಿ ಕೋಟೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸೀತಮ್ಮ (72) ಎಂಬುವವರ ಮಾಂಗಲ್ಯ ಸರವನ್ನು ಕಳವು ಮಾಡಲಾಗಿದೆ. ಕೆಂಪು ಪೌಡರ್ ಹಚ್ಚಿ ಯಾಮಾರಿಸಿದರು ಶನಿವಾರ ಮಧ್ಯಾಹ್ನ ಸೀತಮ್ಮ … Read more

ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ, ಡಿ.27ರಂದು ಕೆಲವು ಶಾಲೆ, ಕಾಲೇಜುಗಳಿಗೆ ರಜೆ

DC Office 1

ಶಿವಮೊಗ್ಗದ ಲೈವ್.ಕಾಂ |  SHIMOGA NEWS |  23 ಡಿಸೆಂಬರ್ 2021 ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಮತದಾನ ಕೇಂದ್ರ ಇರಲಿದೆ. ಮತಗಟ್ಟೆಗಳು ಇರುವ ಶಾಲೆ, ಕಾಲೇಜುಗಳಿಗೆ ಆ ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವಧಿ ಮುಗಿದ ಗ್ರಾಮ ಪಂಚಾಯಿತಿಗಳು ಮತ್ತು ವಿವಿಧ ಕಾರಣಕ್ಕೆ ತೆರವಾಗಿರುವ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಡಿ.27ರಂದು ಉಪ ಚುನಾವಣೆ ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಮತಗಟ್ಟೆ … Read more

ಇವತ್ತು ರಾತ್ರಿವರೆಗೂ ಕುಂಸಿ ರೈಲ್ವೆ ಗೇಟ್ ಬಂದ್, ಪರ್ಯಾಯ ಮಾರ್ಗ ಯಾವುದು ಗೊತ್ತಾ?

KUMSI-NEWS

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021 ನೈಋತ್ಯ ರೈಲ್ವೆಯ ಶಿವಮೊಗ್ಗ ವಿಭಾಗದ ರೈಲ್ವೆ ಲೆವೆಲ್ ಕ್ರಾಸ್-79(ಕುಂಸಿ ರೈಲ್ವೆ ಗೇಟ್)ರಲ್ಲಿ ತಾಂತ್ರಿಕ ಪರಿಶೀಲನೆ ನಿಮಿತ್ತ ಡಿ.22ರ ರಾತ್ರಿ 7ರವರೆಗೆ ಗೇಟ್ ಬಂದ್ ಮಾಡಲಾಗಿದೆ. ಕುಂಸಿ – ಆನಂದಪುರ ನಡುವೆ ಲಘು ಮತ್ತು ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾವುದು ಪರ್ಯಾಯ ಮಾರ್ಗ? ಶಿವಮೊಗ್ಗದಿಂದ ತೆರಳುವ ಭಾರಿ ವಾಹನಗಳು ಆಯನೂರು, 5ನೇ ಮೈಲಿಗಲ್ಲು, ಸೂಡೂರು, … Read more