ಶಿವಮೊಗ್ಗ ಲೈವ್.ಕಾಂ | SHIMOGA | 10 ನವೆಂಬರ್ 2019
ಹ್ಯಾಂಗ್ಲರ್ ತುಂಬಿಕೊಂಡಿದ್ದ ಗೂಡ್ಸ್ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಆಗಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿ ಇವತ್ತು ಮಧ್ಯಾಹ್ನ ಘಟನೆ ಸಂಭವಿಸಿದೆ. ಗೂಡ್ಸ್ ವಾಹನದಲ್ಲಿದ್ದ ಹ್ಯಾಂಗ್ಲರ್’ಗಳು ಮುಂದೆ ಹೋಗುತ್ತಿದ್ದ ಕಾರಿನ ಹಿಂಬದಿ ಗ್ಲಾಸ್’ಗೆ ಗುದ್ದಿದೆ. ಅಲ್ಲದೆ ಹ್ಯಾಂಗ್ಲರ್’ಗಳ ಮುಂಭಾಗ ಕಾರಿನೊಳಗೆ ನುಗ್ಗಿದೆ. ಗೂಡ್ಸ್ ವಾಹನದಲ್ಲಿ ಹ್ಯಾಂಗ್ಲರ್’ಗಳನ್ನು ಬಿಗಿಯಾಗಿ ಕಟ್ಟದೆ ಇರುವುದೆ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಪಘಾತದಲ್ಲಿ ಕಾರಿನ ಹಿಂಬದಿ ಜಖಂ ಆಗಿದೆ. ಸ್ಥಳೀಯರ ನೆರವಿನಿಂದ ಕೂಡಲೆ ಹ್ಯಾಂಗ್ಲರ್’ಗಳನ್ನು ತೆಗೆಯಲಾಯಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]