ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
HOLEHONNURU NEWS, 21 SEPTEMBER 2024 : ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು (Areca Tree) ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ನಾಶ ಮಾಡಿದ್ದಾರೆ. ಹೊಳೆಹೊನ್ನೂರು ಸಮೀಪದ ಕಲ್ಲಿಹಾಳು ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ.
ಕಲ್ಲಿಹಾಳ್ ಗ್ರಾಮದ ಷಹಿಮುನ್ನಿಸ ಅವರಿಗೆ ಸೇರಿದ 1.6 ಎಕರೆ ಜಮೀನಿನಲ್ಲಿ ಸುಮಾರು 34 ವರ್ಷದ ಫಲ ನೀಡುತ್ತಿದ್ದ ಅಡಿಕೆ ಮರಗಳಿದ್ದವು. ಬುಧವಾರ ಬೆಳಗ್ಗೆ ಅಡಕೆ ಕಟಾವು ಮಾಡಬೇಕಿತ್ತು.

ಮಂಗಳವಾರ ರಾತ್ರಿ ವೇಳೆಗೆ ದುಷ್ಕರ್ಮಿಗಳು ಸುಮಾರು 700 ಅಡಿಕೆ ಮರಗಳನ್ನು ಗರಗಸದಿಂದ ಅರ್ಧಕ್ಕೆ ಕತ್ತರಿಸಿದ್ದಾರೆ. ಇದರಿಂದ ಕೆಲ ಮರಗಳು ಧರೆಗುರುಳಿದ್ದು, ತೋಟ ದಲ್ಲಿ ಹಸಿ ಅಡಿಕೆ ಮಣ್ಣುಪಾಲಾಗಿದೆ. ಈ ಕೃತ್ಯದಿಂದ ಸುಮಾರು 70 ಲಕ್ಷ ರೂ. ಗಳಿಗೂ ಹೆಚ್ಚಿನ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಅನುಮಾನಾಸ್ಪದ ಸಾವು
LATEST NEWS
- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

- ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

- ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

- ವಕ್ತರರಾಗಿ ಜಿ.ಡಿ.ಮಂಜುನಾಥ್ ನೇಮಕ

- ಕಾರು ಚೇಸ್ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು















