ಆಯನೂರಿನಲ್ಲಿ ಮಧ್ಯರಾತ್ರಿ ಕೊಲೆ, ಎದೆಗೆ ಡ್ರ್ಯಾಗರ್‌ ಚುಚ್ಚಿ ವ್ಯಕ್ತಿ ಹತ್ಯೆ, ಕಾರಣವೇನು? ಹೇಗಾಯ್ತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 5 JUNE 2023

SHIMOGA : ಕ್ಷುಲಕ ವಿಚಾರಕ್ಕೆ ಬಾರ್‌ ಕ್ಯಾಶಿಯರ್‌ಗೆ ಮಧ್ಯರಾತ್ರಿ ಡ್ರ್ಯಾಗರ್‌ನಿಂದ ಚುಚ್ಚಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಶಿಯರ್‌ (cashier) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

Bar-Casher-Attacked-Ayanuru-Navarathna-bar

ಆಯನೂರು ನವರತ್ನ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಘಟನೆ ಸಂಭವಿಸಿದೆ. ಕ್ಯಾಶಿಯರ್‌ (cashier) ಸಚಿನ್‌ (27) ಹತ್ಯೆಯಾಗಿದ್ದಾನೆ.

ಕಿರಿಕ್‌ ಮಾಡಿದ ಮೂವರು

ಬಾರ್‌ ಬಂದ್‌ ಮಾಡುವ ಸಮಯವಾದರು ಆಯನೂರು ತಾಂಡಾದ ಮೂವರು ಮದ್ಯ ಸೇವಿಸುತ್ತಿದ್ದರು. ಬಾರ್‌ ಸಿಬ್ಬಂದಿ ಸಮಯವಾಗಿದೆ ಎಂದಿದ್ದಾರೆ. ಆದರೆ ತಾವು ಇನ್ನೂ ಮದ್ಯ ಸೇವಿಸಬೇಕಿದೆ ಹೋಗುವುದಿಲ್ಲ ಎಂದು ಯುವಕರು ತಿಳಿಸಿದ್ದಾರೆ. ಆಗ ಬಾರ್‌ನ ಅಸಿಸ್ಟೆಂಟ್‌ ಕ್ಯಾಶಿಯರ್‌ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಕ್ಯಾಶಿಯರ್‌ ಸಚಿನ್‌ ವಿರುದ್ಧ ಮೂವರು ಯುವಕರು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಓರ್ವ ಯುವಕ ಬಿಯರ್‌ ಬಾಟಲಿಯನ್ನು ತಲೆಗೆ ಹೊಡೆದುಕೊಂಡು ಬಾರ್‌ ಸಿಬ್ಬಂದಿಗೆ ಚುಚ್ಚಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಅಸಿಸ್ಟೆಂಟ್‌ ಕ್ಯಾಶಿಯರ್‌ ಅರುಣ್‌ ಕುಮಾರ್‌ ಕೈಗೆ ಸಣ್ಣ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ – ಗಂಭೀರ ಸ್ಥಿತಿಗೆ ತಲುಪಿದ್ದ ಶಿವಮೊಗ್ಗದ ಸ್ನೇಕ್‌ ಕಿರಣ್‌ ಈಗ ಹೇಗಿದ್ದಾರೆ? ಆ ದಿನ ಹಾವು ಕಚ್ಚಿದ್ದು ಹೇಗೆ?

ಗಲಾಟೆ ವೇಳೆ ಓರ್ವ ಯುವಕ ತನ್ನ ಬಳಿ ಇದ್ದ ಡ್ರ್ಯಗರ್‌ ತೆಗೆದು ಕ್ಯಾಶಿಯರ್‌ ಸಚಿನ್‌ ಎದೆಯ ಬಲಭಾಗಕ್ಕೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡಿದ್ದ ಸಚಿನ್‌ನನ್ನು ಬಾರ್‌ ಸಿಬ್ಬಂದಿ ತಕ್ಷಣ ಆಯನೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ 108 ಆಂಬುಲೆನ್ಸ್‌ನಲ್ಲಿ ನಂಜಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸಚಿನ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 5, 2023

Leave a Comment