ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಮನೆಯಲ್ಲಿ ಪೋಷಕರು ತನಗೆ ಮತ್ತು ತನ್ನ ತಮ್ಮನ ನಡುವೆ ಭೇದ ಭಾವ ಮಾಡುತ್ತಾರೆಂದು ಮನನೊಂದು ಹೊಳೆಗೆ ಹಾರಲು ಯತ್ನಿಸಿದ ಬಾಲಕನನ್ನು ಗಸ್ತಿನಲ್ಲಿದ್ದ ಇಆರ್‌ಎಸ್‌ಎಸ್ ಅಧಿಕಾರಿಗಳು ರಕ್ಷಿಸಿದ್ದಾರೆ (rescue).

ಭಾನುವಾರ ರಾತ್ರಿ ಸುಮಾರು 16 ವರ್ಷದ ಬಾಲಕ ವಾದಿ-ಎ-ಹುದಾ ಸೇತುವೆ ಹತ್ತಿರ ನಿಂತು ಹೊಳೆಗೆ ಹಾರಲು ಪ್ರಯತ್ನಿಸುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಇಆರ್‌ಎಸ್‌ಎಸ್ ವಾಹನದ ರೆಸ್ಪಾಂಡರ್ ಶಬೀರ್ ಬೇಗ್ ಮತ್ತು ವಾಹನದ ಚಾಲಕ ಮಂಜುನಾಥ್ ಸ್ಥಳಕ್ಕೆ ಹೋಗಿದ್ದರು. ಸಾರ್ವಜನಿಕರ ಸಹಾಯದಿಂದ ಬಾಲಕನ್ನು ರಕ್ಷಿಸಿ, ಆತನ ಮನವೊಲಿಸಿ ತಿಳಿವಳಿಕೆ ನೀಡಿದರು. ನಂತರ ಪೋಷಕರನ್ನು ಕರೆಸಿ, ಅವರೊಂದಿಗೆ ಮನೆಗೆ ಕಳುಹಿಸಿದ್ದಾರೆ. ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಪ್ರಶಂಸಿದ್ದಾರೆ.
ಇದನ್ನೂ ಓದಿ : ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

LATEST NEWS
- ಪ್ರಸಿದ್ಧ ರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ, ಮಿನಿಸ್ಟರ್ ಏನೆಲ್ಲ ಹೇಳಿದರು?

- ಶಿವಮೊಗ್ಗದ ಯುವಕರಿಗೆ ಉದ್ಯೋಗವಕಾಶ, ಉತ್ತಮ ಸಂಬಳ, PF, ESI, OT ಸೇರಿ ಹಲವು ಸೌಲಭ್ಯ, ಎಲ್ಲಿ?

- ಭದ್ರಾವತಿ ಭೂತನಗುಡಿಯಲ್ಲಿ ಬೆಳಗ್ಗೆ ಮನೆಯಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

- ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ, ದೂರಿನಲ್ಲಿ ಭದ್ರಾವತಿಯ 3 ಸ್ನೇಹಿತರ ಉಲ್ಲೇಖ, ಯಾರದು?

- ನಿನ್ನ ಬೈಕ್ ಕೊಡು ಎಂದು ವ್ಯಕ್ತಿಯನ್ನು ಅಡ್ಡಗಟ್ಟಿ ಹೊಡೆದ ಅಪರಿಚಿತರು, ಕಾರಣವೇನು? ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು














