SHIVAMOGGA LIVE NEWS | 20 SEPTEMBER 2023
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ಬಸ್ ಹತ್ತುವ ವೇಳೆ ಹಿರಿಯ ನಾಗರಿಕರೊಬ್ಬರ (Aged Person) ಬಳಿ ಇದ್ದ ನಗದು ಕಳ್ಳತನ ಮಾಡಲಾಗಿದೆ. ಮೊಮ್ಮಗನ ಶಾಲೆಯ ಫೀಸ್ ಕಟ್ಟಲು ತಂದಿದ್ದ ಹಣವನ್ನು ಕಳ್ಳತನ (PICK POCKET) ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕುಲಗಟ್ಟೆ ಗ್ರಾಮದ ಹನುಮಂತಪ್ಪ ಎಂಬುವವರು ಸೆ.16ರಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಗೋಪಾಳದಲ್ಲಿರುವ ಖಾಸಗಿ ಶಾಲೆಯಲ್ಲಿ ಹನುಮಂತಪ್ಪ ಅವರ ಮೊಮ್ಮಗ ಓದುತ್ತಿದ್ದಾನೆ. ಆತನ ಶಾಲಾ ಶುಲ್ಕ ಪಾವತಿಸಲು 60 ಸಾವಿರ ರೂ. ಹಣ ತಂದಿದ್ದರು.
ಗಣೇಶ ಚತುರ್ಥಿ ಹಿನ್ನೆಲೆ ಶಾಲೆಗೆ ರಜೆ ಇರಲಿದೆ. ಮೊಮ್ಮಗನನ್ನು ಕರೆದೊಯ್ಯುವಂತೆ ಹನುಮಂತಪ್ಪ ಅವರಿಗೆ ತಿಳಿಸಿದ ಶಾಲೆಯ ಆಡಳಿತ ಮಂಡಳಿ, ಹಬ್ಬದ ನಂತರ ಶುಲ್ಕ ಪಾವತಿಸುವಂತೆ ತಿಳಿಸಿದರು. ಈ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ಹನುಮಂತಪ್ಪ, ತಮ್ಮೂರಿಗೆ ತೆರಳುವ ಬಸ್ ಹತ್ತಿದ್ದಾರೆ. ಈ ವೇಳೆ ಜೇಬಿನಿಂದ ಬೀಗ ಕಳೆಗೆ ಬಿದ್ದಿದೆ. ಅದನ್ನು ಎತ್ತಿಕೊಂಡು ಚೆಡ್ಡಿ ಜೇಬು ಪರಿಶೀಲಿಸಿದಾಗ 60 ಸಾವಿರ ರೂ. ಹಣ ಕಳ್ಳತನವಾಗಿರುವುದು (PICK POCKET) ಗೊತ್ತಾಗಿದೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಸೈಲೆನ್ಸರ್‌ಗಳನ್ನು ಸಾಲಾಗಿರಿಸಿ ರೋಡ್ ರೋಲರ್ ಹತ್ತಿಸಿದ ಪೊಲೀಸರು
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






