SHIVAMOGGA LIVE NEWS | 7 AUGUST 2023
SHIMOGA : ಹಂಪ್ (Road Hump) ಗಮನಿಸದೆ ಬೈಕ್ ಹಾರಿಸಿ ನಿಯಂತ್ರಿಸಲಾಗದೆ ಕೆಳಗೆ ಬಿದ್ದ ಯುಕವನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಮೇಲೆ ಕಂಡಕ್ಟರ್‌ನಿಂದ ಹಲ್ಲೆ, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಚಿಕ್ಕಲ್ ಸಿದ್ದೇಶ್ವರ ನಗರದ ಮಾಲತೇಶ್ (37) ಮೃತ ವ್ಯಕ್ತಿ. ಮಂಡ್ಲಿಯ ಪೇಪರ್ ಫ್ಯಾಕ್ಟರಿಯಲ್ಲಿ ಮಾಲತೇಶ್ ಕೆಲಸ ಮಾಡುತ್ತಿದ್ದ. ಸಹೋದ್ಯೋಗಿಯೊಬ್ಬರ ಮಗಳ ನಾಮಕರಣದ ಹಿನ್ನೆಲೆ ಸಾಗರ ರಸ್ತೆಯ ಹೊಟೇಲ್ ಒಂದರಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮ ಮುಗಿಸಿ ಮರಳುವಾಗ ಶ್ರೀರಾಮಪುರದ ಬಳಿ ಹಂಪ್‌ನಲ್ಲಿ (Road Hump) ಬೈಕ್ ನಿಯಂತ್ರಣ ತಪ್ಪಿದೆ. ಸ್ಕಿಡ್ ಆಗಿ ಕೆಳಗೆ ಬಿದ್ದ ಮಾಲತೇಶ್ ತಲೆ, ಮುಖ, ಭುಜಕ್ಕೆ ಗಂಭೀರ ಪೆಟ್ಟು ಬಿದ್ದಿತ್ತು. ಸ್ಥಳೀಯರು ಮತ್ತು ಮಾಲತೇಶ್ ಅವರ ಸ್ನೇಹಿತರು ಕೂಡಲೆ ಆತನನ್ನು ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಇದನ್ನೂ ಓದಿ – ಲಕ್ಷ್ಮೀ ಟಾಕೀಸ್ ಬಳಿ ಯುವಕ ವಶಕ್ಕೆ, ವೈದ್ಯಕೀಯ ಪರೀಕ್ಷೆ ಬಳಿಕ ಅರೆಸ್ಟ್ | 3 ಫಟಾಫಟ್ ಕ್ರೈಮ್ ನ್ಯೂಸ್
ಚಿಕಿತ್ಸೆಗೆ ಸ್ಪಂದಿಸದೆ ಮಾಲತೇಶ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚತುಷ್ಪಥ ರಸ್ತೆ ಕಾಮಗಾರಿ ಸ್ಥಳದಲ್ಲಿ ಹಂಪ್‌ಗಳನ್ನು ಅಳವಡಿಸಲಾಗಿದೆ. ಆದರೆ ಇಲ್ಲಿ ಹಂಪ್‌ಗಳಿರುವ ಕುರಿತು ಯಾವುದೆ ಮುನ್ನೆಚ್ಚರಿಕೆ ಫಲಕವಿಲ್ಲ. ರಾತ್ರಿ ವೇಳೆ ಹಂಪ್ ಇರುವುದು ಗೊತ್ತಾಗದೆ ಅಪಘಾತಗಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.