ರಾತ್ರೋರಾತ್ರಿ ರಾಯಲ್ ಎನ್ಫೀಲ್ಡ್ ಬೈಕ್ ನಾಪತ್ತೆ

SHIMOGA : ಮನೆಯೊಂದರ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ರಾತ್ರೋರಾತ್ರಿ ಕಳ್ಳತನವಾಗಿದೆ. ಸವಳಂಗ ರಸ್ತೆಯ ಜ್ಯೋತಿನಗರದ ಕೆಂಚರಾಜ ಎಂಬುವವರ ಮನೆ ಬಳಿ ಘಟನೆ ಸಂಭವಿಸಿದೆ. ಕೆಂಚರಾಜ ಫೆ.5ರಂದು ರಾತ್ರಿ ತಮ್ಮ ಮನೆಯ ಕಾಂಪೌಂಡ್ನಲ್ಲಿ ಬೈಕ್ ನಿಲ್ಲಿಸಿದ್ದರು. ಫೆ.6ರಂದು ಬೆಳಗ್ಗೆ 8.30ಕ್ಕೆ ಮನೆಯಿಂದ ಹೊರ ಬಂದು ನೋಡಿದಾಗ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದ ಕೆಂಚರಾಜ್ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾರೆ.
ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ





