ಶಿವಮೊಗ್ಗ ಲೈವ್.ಕಾಂ | BELAGAVI NEWS | 15 ಸೆಪ್ಟೆಂಬರ್ 2021
ತೆರಿಗೆ ವಂಚಿಸಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಆರೋಪದ ಮೇಲೆ ಏಳು ಕೋಟಿ ರೂ. ಮೊತ್ತದ ಅಡಕೆಯನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದಿಂದ ದೆಹಲಿ, ಅಹಮದಾಬಾದ್’ಗೆ ಅಡಕೆ ಸಾಗಣೆ ಮಾಡಲಾಗುತ್ತಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ | ಅಡಕೆಗೆ ಬಂಪರ್ ಬೆಲೆ, ಇನ್ನಷ್ಟು ಏರಿಕೆಯ ನಿರೀಕ್ಷೆ, ಧಾರಣೆ ಹೆಚ್ಚಳಕ್ಕೆ ಕಾರಣವೇನು? ಮುಂದೇನಾಗುತ್ತೆ?
ಬೆಳಗಾವಿ ವಿಭಾಗದ ಕೇಂದ್ರ GST ಅಧಿಕಾರಿಗಳು ಪರಿಶೀಲನೆ ವೇಳೆ ಏಳು ಕೋಟಿ ರೂ. ಮೊತ್ತದ ಅಡಕೆಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೇಗೆ ಸಿಕ್ಕಿಬಿತ್ತು ಅಡಕೆ?
ಹುಬ್ಬಳ್ಳಿ – ನವಲಗುಂದ ರಸ್ತೆಯಲ್ಲಿ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಅಡಕೆ ಸಾಗಣೆ ಮಾಡುತ್ತಿದ್ದ ಏಳು ಲಾರಿಗಳನ್ನು ತಪಾಸಣೆಗೆ ಒಳಪಡಿಸಾಯಿತು. ಈ ವೇಳೆ GST ಪಾವತಿ ಮಾಡದಿರುವುದು ಬೆಳಕಿಗೆ ಬಂದಿದೆ. ಏಳು ಲಾರಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ.
ಶಿವಮೊಗ್ಗದಿಂದ ಅಡಕೆ ತುಂಬಿಕೊಂಡು ಲಾರಿಗಳು ದೆಹಲಿ, ಅಹಮದಾಬಾದ್’ಗೆ ತೆರಳುತ್ತಿದ್ದವು. ಅಡಕೆಗೆ ಶೇ.5ರಷ್ಟು GST ಪಾವತಿಸಬೇಕು. ಅದರೆ ಈ ಲಾರಿಗಳಲ್ಲಿ GST ಪಾವತಿ ಮಾಡಿದ ರಸೀತಿ ಇರಲಿಲ್ಲ. GST ಪಾವತಿಸದೆ ಅಡಕೆ ಮಾರಾಟ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ GST ಅಧಿಕಾರಿಗಳಿಗೆ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200