ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ವೇದಿಕೆಯಾದ ಫ್ಲಿಪ್‌ಕಾರ್ಟ್‌ಗೆ (Flipkart) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಪರವಾನಗಿ ನೀಡಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ಈಗ ತನ್ನ ಪ್ಲಾಟ್‌ಫಾರ್ಮ್ ಮೂಲಕ ನೇರವಾಗಿ ಗ್ರಾಹಕರು ಮತ್ತು ಮಾರಾಟಗಾರರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ.
ಈ ಪರವಾನಗಿ ಇ-ಕಾಮರ್ಸ್ ವಲಯದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಸದ್ಯ ಹೆಚ್ಚಿನ ಇ-ಕಾಮರ್ಸ್ ಕಂಪನಿಗಳು ಬ್ಯಾಂಕ್ ಅಥವಾ ಇತರೆ ಎನ್‌ಬಿಎಫ್‌ಸಿಗಳ ಸಹಯೋಗದಲ್ಲಿ ಸಾಲ ನೀಡುತ್ತಿವೆ. ಆದರೆ ಫ್ಲಿಪ್‌ಕಾರ್ಟ್ ಆರ್‌ಬಿಐನಿಂದ ನೇರವಾಗಿ ಈ ಪರವಾನಗಿ ಪಡೆದ ಮೊದಲ ದೊಡ್ಡ ಇ-ಕಾಮರ್ಸ್ ಕಂಪನಿಯಾಗಿದೆ.
2022ರಲ್ಲಿ ಅರ್ಜಿ ಸಲ್ಲಿಸಿದ್ದ ಫ್ಲಿಪ್‌ಕಾರ್ಟ್‌ಗೆ ಈ ವರ್ಷದ ಮಾರ್ಚ್ 13ರಂದು ಆರ್‌ಬಿಐ ಅನುಮೋದನೆ ನೀಡಿದೆ. ಈಗ ಫ್ಲಿಪ್ ಕಾರ್ಟ್ ಕೇವಲ ಸಾಲ ನೀಡಬಹುದಾಗಿದೆ. ಆದರೆ ಠೇವಣಿ ಸ್ವೀಕರಿಸಲು ಅವಕಾಶ ಇರುವುದಿಲ್ಲ.
ಫ್ಲಿಪ್‌ಕಾರ್ಟ್ ಕೆಲವೇ ತಿಂಗಳುಗಳಲ್ಲಿ ಸಾಲ ವಿತರಣೆ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ. ಕಂಪನಿಯು ತನ್ನ ವೇದಿಕೆ ಮತ್ತು ‘ಸೂಪರ್.ಮನಿ’ ಯುಪಿಐ ಆ್ಯಪ್ ಮೂಲಕ ಸಾಲ ನೀಡಲು ಯೋಜಿಸಿದೆ. ಪ್ರಸ್ತುತ, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಕ್ರೆಡಿಟ್ ಸೈಸನ್ ಮೂಲಕ ವೈಯಕ್ತಿಕ ಸಾಲಗಳನ್ನು ಫ್ಲಿಪ್‌ಕಾರ್ಟ್ ಒದಗಿಸುತ್ತಿದೆ. ಈ ಹೊಸ ಪರವಾನಗಿಯಿಂದ ಫ್ಲಿಪ್‌ಕಾರ್ಟ್ ಆರ್ಥಿಕ ಸೇವೆಗಳ ಕ್ಷೇತ್ರದಲ್ಲಿ ತನ್ನ ಹೆಜ್ಜೆ ಗುರುತನ್ನು ಮತ್ತಷ್ಟು ವಿಸ್ತರಿಸಲಿದೆ.
ಇದನ್ನೂ ಓದಿ » ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಶಿವಮೊಗ್ಗದಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು

















