ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2020
ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ನ್ಯಾಷನಲ್ ಲಾ ಯುನಿವರ್ಸಿಟಿಯ ಪ್ರವೇಶ ಪರೀಕ್ಷೆ CLAT (COMMON LAW ADMISSION TEST) ಎದುರಿಸುವವರಿಗೆ ಮಾರ್ಗದರ್ಶನ ನೀಡುವ ಸೆಮಿನಾರ್ ಆಯೋಜಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳು ಈ ಸೆಮಿನಾರ್‍ನಲ್ಲಿ ಭಾಗವಹಿಸಬಹುದು. ಕಾರ್ಮರ್ಸ್ ವಿದ್ಯಾರ್ಥಿಗಳಿಗೆ ಇದು ಅನುಕೂಲ ಆಗಲಿದೆ. ಕಾನೂನು ಕ್ಷೇತ್ರದಲ್ಲಿ ಹಲವು ಉದ್ಯೋಗವಕಾಶಗಳ ಕುರಿತು ಮಾಹಿತಿ ಲಭ್ಯವಾಗಲಿದೆ.
ಯಾವತ್ತು ಸೆಮಿನಾರ್? ಯಾರೆಲ್ಲ ಭಾಗವಹಿಸ್ತಾರೆ?
ದೇಶಾದ್ಯಂತ ವಿವಿಧ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿರುವ ಪ್ರತಿಷ್ಠಿತ Career Launcher ಸಂಸ್ಥೆ ಈ ಸೆಮಿನಾರ್ ಆಯೋಜಿಸಿದೆ. ಅಕ್ಟೋಬರ್ 11ರಂದು ಸಂಜೆ 5 ಗಂಟೆಗೆ ಆನ್‍ಲೈನ್ ಸೆಮಿನಾರ್ ನಡೆಯಲಿದೆ. ಸುಪ್ರೀಂ ಕೋರ್ಟ್‍ನ ನ್ಯಾಯವಾದಿ ವಸುಧಾ ಸಿಂಗ್ ಅವರು ಮಾರ್ಗದರ್ಶನ ಮಾಡಲಿದ್ದಾರೆ. ದೆಹಲಿಯ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್‍ನಲ್ಲಿ ಕಾನೂನ ಪದವಿ ಪಡೆದಿದ್ದಾರೆ. ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬಾಬ್ಡೆ ಅವರ ಬಳಿ ಇಂಟರ್ನ್‍ಶಿಪ್ ಮಾಡಿದ್ದಾರೆ ನ್ಯಾಯವಾದಿ ವಸುಧಾ ಸಿಂಗ್.
ಸೆಮಿನಾರ್‍ನಲ್ಲಿ ಭಾಗವಹಿಸುವುದು ಹೇಗೆ?
ಕೆರಿಯರ್ ಲಾಂಚರ್ ಸಂಸ್ಥೆ ಆಯೋಜಿಸಿರುವ ಸೆಮಿನಾರ್‍ನಲ್ಲಿ ಪಾಲ್ಗೊಳ್ಳಲು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕಿದೆ. ಆಸಕ್ತರು 9686229484ಗೆ ಕರೆ ಮಾಡಬಹುದು. ಅಥವಾ ನೇರವಾಗಿ ಈ ಲಿಂಕ್ ಕ್ಲಿಕ್ ಮಾಡಿ, ಫಾರಂ ಭರ್ತಿ ಮಾಡಬಹುದು.
https://forms.gle/eLzaLHjsbgzXGf2R8
Career Launcher ಸಂಸ್ಥೆ ದೇಶಾದ್ಯಂತ ಹಲವು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಕಾರ್ಯಗಾರಗಳನ್ನು ಆಯೋಜಿಸುತ್ತಿದೆ. ಹಲವು ಆಕಾಂಕ್ಷಿಗಳಿಗೆ ಕೆರಿಯರ್ ಲಾಂಚರ್‍ನ ಕೋರ್ಸುಗಳು ಅನುಕೂಲ ಮಾಡಿಕೊಟ್ಟಿದೆ.
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು
- ಶಿವಮೊಗ್ಗದಲ್ಲಿ ಮಲ್ನಾಡ್ ಸ್ಟಾರ್ಟ್ಅಪ್ ಸಮ್ಮೇಳನಕ್ಕೆ ಚಾಲನೆ, ಕೇಂದ್ರ ಸಚಿವರು ಏನೆಲ್ಲ ಹೇಳಿದರು?
- ಭದ್ರಾವತಿಯಲ್ಲಿ ಭೀಕರ ಅಪಘಾತ, ವೈದ್ಯಕೀಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು
- ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಿನಿಸ್ಟರ್ ವಾರ್ನಿಂಗ್, ಕಾರಣವೇನು?
- ಶಿವಮೊಗ್ಗ ಸಿಟಿ ಬಸ್ಸುಗಳ ಚಾಲಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್
- ಶಿವಮೊಗ್ಗದಲ್ಲಿ ಬಸ್ ಡಿಕ್ಕಿ, ಗುಂಡಿಗೆ ಬಿದ್ದ ಸ್ಕೂಟಿ, ಬಾಲಕಿ ಬಲಗಾಲಿಗೆ ಗಂಭೀರ ಗಾಯ